newsfirstkannada.com

Super Six: ಸಖತ್ ಆಗಿದೆ ಭಾರತ-ಪಾಕ್ ಪಂದ್ಯದ ಪ್ರೊಮೋ​.. ಬುಮ್ರಾಗೆ ಶುರುವಾಯ್ತ ಅಗ್ನಿ ಪರೀಕ್ಷೆ ​

Share :

16-08-2023

    ಕ್ರಿಕೆಟ್ ಲೋಕದಲ್ಲಿ ಅಮೆರಿಕ ಹೊಸ ಸೆನ್ಸೇಷನ್

    ಬೈಕ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಜಾಲಿರೈಡ್

    ವೆಂಕಟೇಶ್ ಫನ್ನಿ​ ರೀಲ್​, ಕೊಹ್ಲಿ ಸಖತ್ ಕಸರತು

ಇಂಡೋ-ಪಾಕ್ ಪ್ರೊಮೋ ರಿಲೀಸ್​!

ಇಂಡೋ ಪಾಕ್ ಹೈವೋಲ್ಟೇಜ್​​ ಪಂದ್ಯದ ಎಷ್ಯಾಕಪ್​ ಪ್ರೊಮೋ ಬಿಡುಗಡೆ ಆಗಿದೆ. 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಡುಗಡೆ ಮಾಡಿರುವ ಈ ಪ್ರೊಮೊ ಫ್ಯಾನ್ಸ್​ಗೆ ಸಖತ್ ಕಿಕ್​​ ನೀಡಿದೆ. ಈ ಪ್ರೊಮೋದಲ್ಲಿ ಭಾರತೀಯ ದೇಶಭಕ್ತಿಯನ್ನ ಎತ್ತಿ ಹಿಡಿಯಲಾಗಿದೆ. ಇಂಡೋ-ಪಾಕ್ ನಡುವಿನ ಹೈವೋಲ್ಟೇಜ್ ಮ್ಯಾಚ್​​ಗೆ ಎಷ್ಟು ಕುತೂಹಲದಿಂದ ಕಾಯ್ತಿದ್ದಾರೆ ಅನ್ನೋದನ್ನ ಬಿಂಬಿಸಲಾಗಿದೆ. ರಾಷ್ಟ್ರ ಧ್ವಜವನ್ನ ಹಾರಿಸುವ ಮೂಲಕ ಟೀಮ್ ಇಂಡಿಯಾವನ್ನ ಹುರಿದುಂಬಿಸಲಾಗಿದೆ.

ಕೊಹ್ಲಿ ಸಖತ್​ ಕಸರತು..!

ಏಷ್ಯಾಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಕಸರತ್ತು ನಡೆಸ್ತಿದ್ದಾರೆ. ಜಿಮ್​ನಲ್ಲಿ ವರ್ಕೌಟ್ ನಡೆಸ್ತಿರುವ ವಿಡಿಯೋವನ್ನು ವಿರಾಟ್,​ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಏಷ್ಯಾಕಪ್​ ಟೂರ್ನಿ ಆಗಸ್ಟ್​ 31ರಿಂದ ಆರಂಭಗೊಳ್ಳಲಿದ್ದು, ಇನ್ನಷ್ಟೇ ಏಷ್ಯಾಕಪ್​​ಗೆ ಟೀಮ್ ಇಂಡಿಯಾವನ್ನು ಪ್ರಕಟಿಸಬೇಕಿದೆ.

ಇಂದಿನಿಂದ ಅಭ್ಯಾಸ ಶುರು

3 ಪಂದ್ಯಗಳ ಟಿ-20 ಸರಣಿಗಾಗಿ ಟೀಮ್ ಇಂಡಿಯಾ ಐರ್ಲೆಂಡ್​ಗೆ ತಲುಪಿದೆ. ಡಬ್ಲಿನ್ ತಲುಪಿರುವ ಬೂಮ್ರಾ ನೇತೃತ್ವದ ಟೀಮ್ ಇಂಡಿಯಾ, ಇಂದಿನಿಂದ ಅಭ್ಯಾಸ ನಡೆಸಲಿದೆ. ಡಬ್ಲಿನ್​ನ ದಿ ವಿಲೇಜ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಲಿದೆ. ಆಗಸ್ಟ್​ 18 ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಜಸ್​ಪ್ರೀತ್ ಬೂಮ್ರಾ ಪಾಲಿಗೆ ಮಹತ್ವದ ಸರಣಿಯಾಗಿದೆ.

ಬೈಕ್​ನಲ್ಲಿ ಧೋನಿ ರೈಡ್​​..!

ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಮಾಹಿ, ಅಂತಾರಾಷ್ಟ್ರೀಯ ಕ್ರಿಕೆಟ್​​​​​ನಿಂದ ನಿವೃತ್ತಿಯಾಗಿದ್ದರೂ ಕ್ರೇಜ್​​​ ಮಾತ್ರ ಕಡಿಮೆಯಾಗಿಲ್ಲ. ಸದ್ಯ ರಾಂಚಿಯಲ್ಲಿ ಕಾಲ ಕಳೆಯುತ್ತಿರುವ ಧೋನಿ, ಬೈಕ್​​​ ಸವಾರಿ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಹೆಲ್ಮೆಟ್ ಧರಿಸಿ ಮನೆಯ ಒಳಗೆ ಹೋಗುತ್ತಿರುವಾಗ ಅಭಿಮಾನಿ ಸೆಲ್ಫಿಗಾಗಿ ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಈ ವಿಡಿಯೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

View this post on Instagram

A post shared by subodh singh Kushwaha (@kushmahi7)

ವೆಂಕಟೇಶ್ ಫನ್ನಿ​ ರೀಲ್​..!

ಟೀಮ್ ಇಂಡಿಯಾ ಆಟಗಾರ ವೆಂಕಟೇಶ್​ ಪ್ರಸಾದ್ ಇನ್ಸ್​ಟಾಗ್ರಾಮ್​​​ನಲ್ಲಿ ರೀಲ್ಸ್​ವೊಂದನ್ನು ಶೇರ್ ಮಾಡಿದ್ದಾರೆ. ಇಂಡೋರ್​ನಲ್ಲಿ ಕ್ರಿಕೆಟ್ ಆಡುತ್ತಿದ್ದ ವೆಂಕಟೇಶ್ ಅಯ್ಯರ್, ನಾನ್ ಸ್ಟ್ರೈಕರ್ ಆಗಿದ್ದರು. ಬೌಲಿಂಗ್​ಗೂ ಮುನ್ನವೇ ಕ್ರೀಸ್​ ತೊರೆದ ವೆಂಕಟೇಶ್​ ಅಯ್ಯರ್, ಸ್ಟ್ರೇಕ್​ನಲ್ಲಿದ್ದ ಬ್ಯಾಟ್ಸ್​ಮನ್​ ಬಳಿಗೆ ಬಂದು ಬ್ಯಾಟಿಂಗ್ ಟಿಪ್ಸ್​ ನೀಡುತ್ತಿರುವಂತೆ ನಡೆದುಕೊಂಡರು. ಈ ವಿಡಿಯೋವನ್ನು ಶೇರ್​ ಮಾಡಿರುವ ವೆಂಕಟೇಶ್​ ಅಯ್ಯರ್, ಈ ಬಗ್ಗೆ ಏನು ಯೋಚಿಸುತ್ತೀರಿ ಅಶ್ವಿನ್ ಎಂದು ಪ್ರಶ್ನಿಸಿದ್ದಾರೆ.

450 ರನ್​​ಗಳಿಂದ ಗೆದ್ದ ಅಮೆರಿಕಾ..!

ಯುಎಎಸ್ ಅಂಡರ್​-19 ತಂಡ ವಿಶ್ವ ದಾಖಲೆ ಬರೆದಿದೆ. ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ದಾಖಲೆಯ 515 ರನ್​ ಕಲೆಹಾಕಿ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕಾ, ಭವ್ಯ ಮೆಹ್ತಾ ಹಾಗೂ ರಿಷಿ ರಮೇಶ್​ ಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 515 ರನ್ ಪೆರಿಸಿತು. ಈ ಟಾರ್ಗೆಟ್​ ಬೆನ್ನತ್ತಿದ್ದ ಅರ್ಜೇಂಟೀನಾ 19.5 ಓವರ್​ಗಳಲ್ಲಿ 65 ರನ್ ಪೇರಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಯುನೆಟೆಡ್ ಸ್ಟೇಟ್ಸ್​ ಆಫ್ ಅಮೆರಿಕಾ 450 ರನ್​ಗಳ ಭರ್ಜರಿ ಗೆಲುವು ಸಾಧಿಸ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Super Six: ಸಖತ್ ಆಗಿದೆ ಭಾರತ-ಪಾಕ್ ಪಂದ್ಯದ ಪ್ರೊಮೋ​.. ಬುಮ್ರಾಗೆ ಶುರುವಾಯ್ತ ಅಗ್ನಿ ಪರೀಕ್ಷೆ ​

https://newsfirstlive.com/wp-content/uploads/2023/06/INDVSPAK_MATCH.jpg

Load More