newsfirstkannada.com

ಟಿ-20ಗೆ ಬಾಯ್, ಬಾಯ್.. ಟಿ-10ಗೆ ಹಾಯ್ ಹಾಯ್.. ರೂಲ್ಸ್ ಬ್ರೇಕ್​ ಮಾಡಿದ ಮಾಜಿ ಕ್ರಿಕೆಟರ್ಸ್ ನಡೆಗೆ ಬಿಸಿಸಿಐಗೆ ಬಿಗ್ ಶಾಕ್..! ​

Share :

05-07-2023

    ಕ್ರಿಕೆಟ್ ಜಗತ್ತಿನಲ್ಲಿ ಏನೇನ್ ಆಗ್ತಿದೆ..? ಇಲ್ಲಿವೆ ಚುಟುಕು ಸುದ್ದಿಗಳ ಹೂರಣ

    ಊರು ಊರು ಸುತ್ತುತ್ತ ಕ್ರಿಕೆಟ್ ದೇವರು ಎಲ್ಲಿಗೆ ಹೋಗಿದ್ದಾರೆ ಗೊತ್ತಾ?

    ಇಂಗ್ಲೆಂಡ್-ಆಸ್ಟ್ರೇಲಿಯಾ ಆಟಗಾರರ ಟಾಕ್ ವಾರ್ ಎಲ್ಲಿಗೆ ಬಂತು..?

ಟಿ10 ಲೀಗ್​ನತ್ತ ಮಾಜಿ ಕ್ರಿಕೆಟರ್ಸ್​.. ಬಿಸಿಸಿಐಗೆ ಶಾಕ್..!

ಮುಂಬರುವ ಅಪೆಕ್ಸ್​ ಕೌನ್ಸಿಲ್​ ಸಭೆಯಲ್ಲಿ ಬಿಸಿಸಿಐ ಕೂಲಿಂಗ್ ಆಫ್ ಪಿರೇಡ್​ ನಿಯಮವನ್ನು ಪರಿಚಯಿಸಲು ಮುಂದಾಗಿದೆ. ಭಾರತದ ಕ್ರಿಕೆಟರ್ಸ್​ ನಿವೃತ್ತಿ ಹೇಳಿದ ಬಳಿಕ ಕೆಲ ವರ್ಷ ಬೇರೆ ಕ್ರಿಕೆಟ್​ ಆಡದಂತೆ ಹೇರುವ ನಿಯಮ ಇದಾಗಿದೆ. ಇದಕ್ಕೂ ಮುನ್ನವೇ ಮತ್ತೊಂದು ಹೊಸ ಲೀಗ್​ನಲ್ಲಿ ಆಡಲು ಮಾಜಿ ಆಟಗಾರರು ಮುಂದಾಗಿದ್ದಾರೆ. ಇರ್ಫಾನ್ ಪಠಾಣ್, ಯೂಸೂಫ್ ಪಠಾಣ್, ಶ್ರೀಶಾಂತ್, ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ ಹಾಗೂ ಪಾರ್ಥಿವ್ ಪಟೇಲ್ ಈಗಾಗಲೇ ಜಿಂಬಾಂಬ್ವೆಯ ಜಿಮ್ ಆಫ್ರೋ ಟಿ-10 ಲೀಗ್​​ನ ಫ್ರಾಂಚೈಸಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಟೂರ್ನಿ ಜುಲೈ 20 ರಿಂದ ಆರಂಭಗೊಳ್ಳಲಿದ್ದು ಜುಲೈ 29ಕ್ಕೆ ಅಂತ್ಯಗೊಳ್ಳಲಿದೆ.

ವಿಂಡೀಸ್​ಗೆ ಲಾರಾ ಪರ್ಫಾಮೆನ್ಸ್​ ಮೆಂಟರ್

ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನಿಂದ ಹೊರಬಿದ್ದ ಬೆನ್ನಲ್ಲೇ, ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್​ ಮಹತ್ವದ ನಿರ್ಣಯ ಕೈಗೊಂಡಿದೆ. ಜುಲೈ 12 ರಿಂದ ಆರಂಭವಾಗಲಿರುವ ಟೀಮ್ ಇಂಡಿಯಾ ವಿರುದ್ಧದ ಸರಣಿಗೂ ಮುನ್ನ ಬ್ಯಾಟಿಂಗ್ ದಿಗ್ಗಜ ಬ್ರಿಯನ್ ಲಾರಾರನ್ನು ಪರ್ಫಾಮೆನ್ಸ್ ಮೆಂಟರ್ ಆಗಿ ನೇಮಿಸಿದೆ. ಟೆಸ್ಟ್​, ಏಕದಿನ, ಟಿ20 ಸರಣಿ ವೇಳೆ ಪರ್ಫಾಮೆನ್ಸ್​ ಮೆಂಟರ್ ಆಗಿ ಲಾರಾ ಸೇವೆ ಸಲ್ಲಿಸಲಿದ್ದಾರೆ. ಈಗಾಗಲೇ ಲಾರಾ ವೆಸ್ಟ್​ ಇಂಡೀಸ್​​​​​​​​​​​​​​​​​​​​​​ ಕ್ಯಾಂಪ್ ಸೇರಿದ್ದು ಆಟಗಾರರಿಗೆ ಮಾರ್ಗದರ್ಶನ ನೀಡ್ತಿದ್ದಾರೆ.

ಪುತ್ರಿ ಜೊತೆ ಕ್ರಿಕೆಟ್ ಆಡಿದ ವಿಲಿಯಮ್ಸನ್

ಐಪಿಎಲ್​ ವೇಳೆ ಇಂಜುರಿಗೆ ತುತ್ತಾದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಚೇತರಿಕೆಯ ಹಾದಿಯಲ್ಲಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಕೇನ್ ವಿಲಿಯಮ್ಸನ್, ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಪುತ್ರಿ ಮ್ಯಾಗಿ ಜೊತೆ ಮನೆಯಲ್ಲಿ ಕ್ರಿಕೆಟ್ ಆಡಿ ಎಂಜಾಯ್​ ಮಾಡ್ತಿದ್ದಾರೆ. ಮಗಳ ಜೊತೆ ಬ್ಯಾಟಿಂಗ್​ ದಿಗ್ಗಜ ಕ್ರಿಕೆಟ್ ಆಡ್ತಿರೋ ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಆಫ್ರಿಕಾ ಪ್ರವಾಸದಲ್ಲಿ ಸಚಿನ್​ ತೆಂಡುಲ್ಕರ್​

ವಿಶ್ವದಾದ್ಯಂತ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್​​ಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಯಾವುದೇ ದೇಶಕ್ಕೆ ಹೋದರೂ ಸಚಿನ್​ರ್​ನ್ನು ಅಭಿಮಾನಿಗಳು ಅತ್ಯಂತ ಗೌರವಿಸುತ್ತಾರೆ. ಸಚಿನ್​ ಆಫ್ರಿಕಾ ಟೂರ್​ನಲ್ಲಿದ್ದು, ಕೀನ್ಯಾ ಮಾಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನವನ್ನ ಕಣ್ತುಂಬಿಕೊಳ್ಳಲು ತೆರಳಿದ್ದರು. ಈ ವೇಳೆ ಅಲ್ಲಿನ ಬುಡಕಟ್ಟು ಜನಾಂಗ ಸಚಿನ್​ಗೆ ತಮ್ಮದೇ ಶೈಲಿಯಲ್ಲಿ ಗೌರವ ಸೂಚಿಸಿ ಆಶೀರ್ವಾದಿಸಿದ್ದಾರೆ. ಈ ಫೋಟೋಗಳನ್ನ ಸಚಿನ್​ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಭ್ಯಾಸ ಆರಂಭಿಸಿದ ಟೆಕ್ಸಾಸ್​​​​​​​​​​​ ಸೂಪರ್​ ಕಿಂಗ್ಸ್​

ಅಮೆರಿಕಾದಲ್ಲಿ ನಡೆಯಲಿರುವ ಚೊಚ್ಚಲ ಮೇಜರ್ ಕ್ರಿಕೆಟ್​ ಲೀಗ್​​ಗೆ ಕೌಂಟ್​ಡೌನ್ ಶುರುವಾಗಿದೆ. ಜುಲೈ 13ರಿಂದ ಆರಂಭವಾಗಲಿರುವ ಟೂರ್ನಿಗೆ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ​ ಭರ್ಜರಿ ತಯಾರಿ ನಡೆಸುತ್ತಿದೆ. ಕೋಚ್ ಸ್ಟೀಫನ್ ಪ್ಲೇಮಿಂಗ್ ಮಾರ್ಗದರ್ಶನದಲ್ಲಿ​ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಫಾಫ್ ಡುಪ್ಲೆಸಿ ನಾಯಕತ್ವದ ಟೆಕ್ಸಾಸ್​​​​ ಸೂಪರ್ ಕಿಂಗ್ಸ್​, ಮೇಜರ್ ಕ್ರಿಕೆಟ್ ಲೀಗ್​ನ ಬಲಿಷ್ಟ ತಂಡವಾಗಿ ಗುರುತಿಸಿಕೊಂಡಿದೆ. ಐಪಿಎಲ್​​ನ ಸಿಎಸ್​ಕೆ ತಂಡದ ಮಾಲೀಕರೇ, ಟೆಕ್ಸಾಸ್​ ತಂಡದ ಒಡೆಯರಾಗಿದ್ದಾರೆ.

ಆಸ್ಟ್ರೇಲಿಯಾ ಪತ್ರಿಕೆಯ ಟೀಕೆಗೆ ಸ್ಟೋಕ್ಸ್​ ಕೌಂಟರ್​

ಲಾರ್ಡ್ಸ್​​ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಟಾಕ್ ವಾರ್ ಶುರುವಾಗಿದೆ. ಜಾನಿ ಬೇರ್​ಸ್ಟೋ ರನೌಟ್ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್​​ರನ್ನ ಆಸ್ಟ್ರೇಲಿಯಾ ಪ್ರತಿಕೆಯೊಂದು ಮುಖಪುಟದಲ್ಲಿ ವ್ಯಂಗ್ಯಚಿತ್ರ ಪ್ರಕಟಿಸಿ ಟೀಕಿಸಿತ್ತು. ಇದಕ್ಕೆ ಕೌಂಟರ್ ನೀಡಿರುವ ಬೆನ್ ಸ್ಟೋಕ್ಸ್​, ಅದು ಖಂಡಿತ ನಾನಲ್ಲ. ನಾನು ಯಾವಾಗ ಹೊಸ ಬಾಲ್​ನೊಂದಿಗೆ ಬೌಲಿಂಗ್ ಮಾಡಿದ್ದೆ ಎಂದು ಟಾಂಗ್ ನೀಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ-20ಗೆ ಬಾಯ್, ಬಾಯ್.. ಟಿ-10ಗೆ ಹಾಯ್ ಹಾಯ್.. ರೂಲ್ಸ್ ಬ್ರೇಕ್​ ಮಾಡಿದ ಮಾಜಿ ಕ್ರಿಕೆಟರ್ಸ್ ನಡೆಗೆ ಬಿಸಿಸಿಐಗೆ ಬಿಗ್ ಶಾಕ್..! ​

https://newsfirstlive.com/wp-content/uploads/2023/07/SSRISHANTH.jpg

Load More