newsfirstkannada.com

ಜಡೇಜಾ ಎಸೆದ ಬಾಲ್​ನಿಂದ ಪಾಕ್ ಆಟಗಾರನಿಗೆ ಭಾರೀ ಪೆಟ್ಟು; ಗಾಯದ ಫೋಟೋ ವೈರಲ್..!

Share :

15-09-2023

    ಏಷ್ಯಾಕಪ್; ಭಾರತಕ್ಕೆ ಇಂದು ಬಾಂಗ್ಲಾದೇಶ ಸವಾಲು

    9 ವಿಕೆಟ್​ ಕಬಳಿಸಿ ಮಿಂಚಿದ ಜಯ್​ದೇವ್ ಉನಾದ್ಕತ್

    ಫ್ಯಾಬಿಯನ್​ ಅಲೆನ್ ಸಿಕ್ಸರ್​ಗೆ ಕಿಟಕಿ ಗಾಜು ಪುಡಿಪುಡಿ

ಭಾರತಕ್ಕೆ ಬಾಂಗ್ಲಾದೇಶ ಸವಾಲು
ಏಷ್ಯಾಕಪ್​ ಟೂರ್ನಿಯ ಸೂಪರ್​​-4 ಪಂದ್ಯದಲ್ಲಿ ಟೀಮ್​ ಇಂಡಿಯಾ ಇಂದು ಬಾಂಗ್ಲಾದೇಶ ತಂಡವನ್ನ ಎದುರಿಸಲಿದೆ. ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಪಂದ್ಯಕ್ಕಾಗಿ ಟೀಮ್​ ಇಂಡಿಯಾ ನಿನ್ನೆ ಭರ್ಜರಿ ಅಭ್ಯಾಸ ನಡೆಸಿದೆ. ಇಂಜುರಿಯಿಂದ ಹೊರ ಬಿದ್ದಿರುವ ಶ್ರೇಯಸ್​ ಅಯ್ಯರ್​ ಕೂಡ ಇಂದಿನ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಫೈನಲ್​ ಪ್ರವೇಶಿಸಿರುವ ಟೀಮ್​ ಇಂಡಿಯಾ ಪಾಲಿಗೆ ಇದೊಂದು ಔಪಚಾರಿಕ ಪಂದ್ಯವಾಗಿದೆ. ಈಗಾಗಲೇ ಬಾಂಗ್ಲಾದೇಶ ತಂಡ ಕೂಡ ಟೂರ್ನಿಯಿಂದ ಹೊರ ಬಿದ್ದಿದೆ.

NCA ಕೋಚ್​ ಬರ್ತ್​​ಡೇ ಸಂಭ್ರಮದಲ್ಲಿ ಪಂತ್​
ಬೆಂಗಳೂರಿನ ಎನ್​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿರುವ ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್, ಎನ್​​ಸಿಎ ಕೋಚ್​​ ಒಬ್ಬರ ಬರ್ತ್​​ಡೇ ಸಂಭ್ರಮದಲ್ಲಿ ಭಾಗಿಯಾಗಿಯಾಗಿದ್ದಾರೆ. ಎನ್​ಸಿಎ ಹೆಡ್​ ವಿವಿಎಸ್​ ಲಕ್ಷ್ಮಣ್​, ಪಂತ್ ಸೇರಿಂದಂತೆ ಹಲವರು ಬರ್ತ್​ ಡೇ ಸೆಲಬ್ರೇಷನ್​ನಲ್ಲಿ ಭಾಗಿಯಾಗಿದ್ದಾರೆ. ಈ ವಿಡಿಯೋವನ್ನ ಪಂತ್​ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಭೀಕರ ಕಾರು ಅಪಘಾತಕ್ಕೊಳಗಾಗಿ ಚೇತರಿಸಿಕೊಳ್ತಿರುವ ​ಪಂತ್​, ಕಳೆದ ಕೆಲ ತಿಂಗಳಿನಿಂದ ಎನ್​ಸಿಎನಲ್ಲಿ ಬೀಡು ಬಿಟ್ಟಿದ್ದು, ಶೀಘ್ರದಲ್ಲೇ ಕಮ್​ಬ್ಯಾಕ್​ ಮಾಡಲು ಪಣತೊಟ್ಟಿದ್ದಾರೆ.

9 ವಿಕೆಟ್​ ಕಬಳಿಸಿ ಮಿಂಚಿದ ಉನಾದ್ಕತ್
ಚೊಚ್ಚಲ ಕೌಂಟಿ ಚಾಂಪಿಯನ್​ಶಿಪ್​ ಆಡ್ತಿರುವ ಟೀಮ್​ ಇಂಡಿಯಾ ವೇಗಿ ಜಯ್​ದೇವ್​ ಉನಾದ್ಕತ್​​ ಬೌಲಿಂಗ್​ನಲ್ಲಿ ಮ್ಯಾಜಿಕ್​ ಮಾಡಿದ್ದಾರೆ. ಸಸೆಕ್ಸ್​ ತಂಡದ ಪರ ಆಡ್ತಿರುವ ಎಡಗೈ ವೇಗಿ ಉನಾದ್ಕತ್​, ಲೆಸಿಸ್ಟೆರ್ ಶೈರ್​​ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ​ವಿನ್ನಿಂಗ್ಸ್​ ಪರ್ಫಾಮೆನ್ಸ್​ ನೀಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಕಬಳಿಸಿದ ಉನಾದ್ಕತ್​, 2ನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ತಂಡದ ಗೆಲುವಿನ ರೂವಾರಿಯಾಗಿದ್ದಾರೆ.

3-4 ತಿಂಗಳು ಕ್ರಿಕೆಟ್​ನಿಂದ ಪೃಥ್ವಿ ಶಾ ದೂರ
ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾಗೆ ಭಾರೀ ಅಘಾತ ಎದುರಾಗಿದೆ. ಕೌಂಟಿ ಕ್ರಿಕೆಟ್​ನಲ್ಲಿ ಇಂಜುರಿಗೆ ತುತ್ತಾಗಿ ತವರಿಗೆ ವಾಪಸ್ ಆಗಿದ್ದ ಪೃಥ್ವಿ ಶಾ, ಸಂಪೂರ್ಣ ಚೇತರಿಸಿಕೊಳ್ಳಲು 3 ರಿಂದ ನಾಲ್ಕು ತಿಂಗಳು ಬೇಕಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಅಕ್ಟೋಬರ್​ನಲ್ಲಿ ಆರಂಭವಾಗಲಿರುವ ದೇಶೀಯ ಕ್ರಿಕೆಟ್​ ಟೂರ್ನಿ ಇರಾನಿ ಕಪ್​ನಿಂದ ಹೊರಗುಳಿಯಲಿದ್ದಾರೆ. ಸದ್ಯ ಪೃಥ್ವಿ ಶಾ ಮೇಲೆ ಬಿಸಿಸಿಐ ವೈದ್ಯಕೀಯ ತಂಡ ನಿಗಾ ಇಟ್ಟಿದೆ.

ಕೆರಿಬಿಯನ್ ಪ್ರಿಮೀಯರ್ ಲೀಗ್​ನಲ್ಲಿ ಫ್ಯಾಬಿಯನ್ ಅಲೆನ್ ಸಿಡಿಸಿದ ಸಿಕ್ಸರ್​ಗೆ ಗಾಜು ಚಿದ್ರಗೊಂಡಿದೆ. ಗಯಾನ ವಾರಿಯರ್ಸ್​​​ ಎದುರಿನ ಪಂದ್ಯದಲ್ಲಿ ಡ್ವೇನ್ ಪ್ರಿಟೋರಿಯಸ್ ಎಸೆದ​​​​​ 17.5ನೇ ಓವರ್​ನಲ್ಲಿ ಫ್ಯಾಬಿಯನ್​ ಅಲೆನ್​ ಲಾಂಗ್​ ಆಫ್ ಮೇಲೆ ಸಿಕ್ಸರ್ ಸಿಡಿಸಿದ್ರು. ಈ ವೇಳೆ ಚೆಂಡು ನೇರವಾಗಿ ಪೆವಿಲಿಯನ್​ನ ಕಿಟಕಿಗೆ ಬಡಿದಿದ್ದು, ಗ್ಲಾಸ್ ಪುಡಿ ಪುಡಿಯಾಗಿದೆ. ಅಲೆನ್​ ಸಿಡಿಸಿದ ಸಿಕ್ಸರ್​ನ ವಿಡಿಯೋ, ಸದ್ಯ ಫುಲ್​ ವೈರಲ್​ ಆಗಿದೆ.

ಸಲ್ಮಾನ್​ ಕಣ್ಣಿನ ಬಳಿ ಭಾರೀ ಇಂಜುರಿ
ಭಾರತದ ವಿರುದ್ಧದ ಸೂಪರ್​ 4 ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದ ಪಾಕಿಸ್ತಾನ ತಂಡದ ಬ್ಯಾಟ್ಸ್​ಮನ್​​ ಸಲ್ಮಾನ್​ ಅಘಾರ ಗಾಯದ ಲೇಟೆಸ್ಟ್​ ಫೋಟೋ ವೈರಲ್​ ಆಗಿದೆ. ರವೀಂದ್ರ ಜಡೇಜಾರ​​ ಬೌಲಿಂಗ್​ನಲ್ಲಿ ರಿವರ್ಸ್​ ಸ್ವೀಪ್​​ ಮಾಡೋ ಯತ್ನದಲ್ಲಿದ್ದಾಗ ಬಾಲ್​ ನೇರವಾಗಿ ಸಲ್ಮಾನ್​ರ ಕಣ್ಣಿನ ಬಳಿ ಬಡಿದಿತ್ತು. ಅದ್ರ ಬೆನ್ನಲ್ಲೇ ತೀವ್ರ ರಕ್ತಸ್ರಾವವಾಗಿತ್ತು. ಮೈದಾನದಲ್ಲೆ ಚಿಕಿತ್ಸೆ ಪಡೆದು ಸಲ್ಮಾನ್​ ಬ್ಯಾಟಿಂಗ್​ ಮುಂದುವರೆಸಿದ್ರು. ಅದಾಗಿ 2 ದಿನಗಳ ಬಳಿಕ ಸಲ್ಮಾನ್​ರ ಫೋಟೋ ಹೊರ ಬಿದ್ದಿದ್ದು, ಕಣ್ಣಿನ ಬಳಿ ಭಾರೀ ಪ್ರಮಾಣದ ಇಂಜುರಿಯಾಗಿರೋದು ಕಾಣ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಡೇಜಾ ಎಸೆದ ಬಾಲ್​ನಿಂದ ಪಾಕ್ ಆಟಗಾರನಿಗೆ ಭಾರೀ ಪೆಟ್ಟು; ಗಾಯದ ಫೋಟೋ ವೈರಲ್..!

https://newsfirstlive.com/wp-content/uploads/2023/09/Jadeja-1.jpg

Load More