ಇಂದು ಮೇಜರ್ ಲೀಗ್ ಫೈನಲ್ ಹಣಾಹಣಿ
ODI ವಿಶ್ವಕಪ್.. ಅಭಿಮಾನಿಗಳಿಗೆ ಗುಡ್ನ್ಯೂಸ್
ಕ್ರಿಕೆಟ್ ಲೋಕದ 6 ಸೂಪರ್ ಸಿಕ್ಸ್ ಇಲ್ಲಿವೆ
ಜಾಲಿ ಮೂಡ್ನಲ್ಲಿ ಪೂಜಾರ..!
ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಈಗ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಸದ್ಯ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಸೌರಾಷ್ಟ್ರ ಬ್ಯಾಟ್ಸ್ಮನ್ ಪೂಜಾರ, ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದಾರೆ. ಪತ್ನಿ ಹಾಗೂ ಪುತ್ರಿ ಜೊತೆ ಬಿಡುವಿನ ಸಮಯ ಕಳೆಯುತ್ತಿರುವ ಪೂಜಾರ, ತಮ್ಮ ವಿಡಿಯೋವನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ಇತ್ತಿಚೆಗೆ ದುಲೀಪ್ ಟ್ರೋಫಿಯಲ್ಲೂ ವೈಫಲ್ಯ ಅನುಭವಿಸಿದ್ದರು.
ಬ್ರಾವೋ ಕಾಲೆಳೆದ ಪೋಲಾರ್ಡ್
ಕಿರನ್ ಪೋಲಾರ್ಡ್ ಹಾಗೂ ಡ್ವೇನ್ ಬ್ರಾವೋ ದಿ ಬೆಸ್ಟ್ ಫ್ರೆಂಡ್ಸ್. ಒಬ್ಬರಿಗೊಬ್ಬರು ಕಾಲೆದುಕೊಳ್ಳುವಲ್ಲಿ ನಿಸ್ಸೀಮರು. 2012ರ ಐಪಿಎಲ್ ಎಲಿಮಿನೇಟರ್ನಲ್ಲಿ ಪೋಲಾರ್ಡ್ರನ್ನ ಔಟ್ ಮಾಡಿದ್ದ ಬ್ರಾವೋ ಏರೋಪ್ಲೈನ್ ಸೆಲೆಬ್ರೇಷನ್ ಇಂದಿಗೂ ಕಣ್ಮುಂದೆಯೇ ಇದೆ. ಇದೀಗ ಇಂಥದ್ದೆ ಘಟನೆಗೆ ಮೇಜರ್ ಲೀಗ್ ಕ್ರಿಕೆಟ್ ಸಾಕ್ಷಿಯಾಯ್ತು. ಚಾಲೆಂಜರ್ ಫೈಟ್ನಲ್ಲಿ ಮುಂಬೈ ಎದುರು ಮುಖಭಂಗ ಅನುಭವಿಸಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ಟೂರ್ನಿಯಿಂದ ಹೊರಬಿತ್ತು. ಈ ಬಳಿಕ ಮುಂಬೈ ನ್ಯೂಯಾರ್ಕ್ ಕ್ಯಾಪ್ಟನ್ ಪೊಲಾರ್ಡ್, ಬ್ರಾವೋಗೆ ಏರೋಪ್ಲೈನ್ ಏರುವಂತೆ ಸೂಚಿಸಿದರು. ಆ ಮೂಲಕ ಹಳೆಯ ಘಟನೆ ನೆನಪಿಸಿದರು.
ಇಂದು ಮೇಜರ್ ಲೀಗ್ ಫೈನಲ್ ಹಣಾಹಣಿ
ಮೇಜರ್ ಲೀಗ್ ಕ್ರಿಕೆಟ್ನ ಚೊಚ್ಚಲ ಆವೃತ್ತಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದಿನ ಫೈನಲ್ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ಹಾಗೂ ಸಿಯಾಟಲ್ ಓರ್ಕಾಸ್ ಸೆಣಸಾಡಲಿದ್ದು, ಚೊಚ್ಚಲ ಮೇಜರ್ ಲೀಗ್ ಕ್ರಿಕೆಟ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಲೆಕ್ಕಚಾರದಲ್ಲಿವೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರಿಂದಲೇ ಕೂಡಿದ್ದು, ಯಾರ್ ಗೆಲ್ತಾರೆ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಸೋಲಿಲ್ಲದ ಸರದಾರರ ಮುಖಾಮುಖಿ
ದೇವ್ಧರ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮುನ್ನಗ್ಗುತ್ತಿರುವ ಮಯಾಂಕ್ ಅಗರ್ವಾಲ್ ನಾಯಕತ್ವದ ದಕ್ಷಿಣ ವಲಯಕ್ಕೆ ಇಂದು ಈಸ್ಟ್ ಜೋನ್ ಸವಾಲು ಎದುರಾಗುತ್ತಿದೆ. ಈಗಾಗಲೇ ಟೂರ್ನಿಯಲ್ಲಿ ಸತತ ಮೂರು ಗೆಲುವುಗಳನ್ನ ದಾಖಲಿಸಿರುವ ಉಭಯ ತಂಡಗಳು, ಇಂದಿನ ಪಂದ್ಯದಲ್ಲಿ ಗೆದ್ದು ಫೈನಲ್ಗೇರುವ ಲೆಕ್ಕಚಾರದಲ್ಲಿವೆ. ಟೇಬಲ್ ಟಾಪರ್ಗಳ ಮುಖಾಮುಖಿ ಭಾರೀ ನಿರೀಕ್ಷಯೆನ್ನೇ ಹುಟ್ಟುಹಾಕಿದೆ.
ಫ್ಯಾನ್ಸ್ಗೆ ಗುಡ್ನ್ಯೂಸ್
ಏಕದಿನ ವಿಶ್ವಕಪ್ ಪಂದ್ಯಗಳನ್ನ ವೀಕ್ಷಿಸಲು ಮೈದಾನಕ್ಕಾಗಮಿಸುವ ಅಭಿಮಾನಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಇಷ್ಟು ದಿನ ಸ್ಟೇಡಿಯಂನಲ್ಲಿ ಕುಡಿಯುವ ನೀರಿನ ಬಗ್ಗೆ ಕೇಳಿ ಬಂದಿದ್ದ ಅಪಸ್ವರಕ್ಕೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದ್ದು, ಸ್ಟೇಡಿಯಂಗೆ ಆಗಮಿಸುವ ಪ್ರೇಕ್ಷಕರಿಗೆ ಉಚಿತ ಕುಡಿಯುವ ನೀರನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.
ಇಂದಿನಿಂದ ಲಂಕಾ ಪ್ರೀಮಿಯರ್ ಲೀಗ್
4ನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗುತ್ತಿದ್ದು, ಇಂದಿನ ಉದ್ಘಾಟನಾ ಪಂದ್ಯದಲ್ಲಿ ಜಫ್ಫಾನ್ ಕಿಂಗ್ಸ್ ಹಾಗೂ ಕೊಲಂಬೊಂ ಸ್ಟ್ರೈಕರ್ಸ್ ಮುಖಾಮುಖಿಯಾಗ್ತಿದ್ದಾರೆ. 22 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಐದು ತಂಡಗಳು ಟ್ರೋಫಿಗಾಗಿ ಹೋರಾಟ ನಡೆಸಲಿವೆ. ಕೊಲಂಬೊದ ಪ್ರೇಮದಾಸ ಸ್ಟೇಡಿಯಂ ಹಾಗೂ ಪಲ್ಲೆಕೆಲೆ ಇಂಟರ್ನ್ಯಾಷನ್ ಸ್ಟೇಡಿಯಂಗಳು ವೇದಿಕೆಯಾಗಲಿವೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್