newsfirstkannada.com

Watch: ಪಿಯಾನೋ ನುಡಿಸಿದ ಮಲಿಂಗಾ.. ಕ್ರಿಕೆಟ್ ಲೋಕದ ‘ಸೂಪರ್ ಸಿಕ್ಸ್’ ಇಲ್ಲಿವೆ

Share :

24-07-2023

    ಏಷ್ಯಾಕಪ್ ಫೈನಲ್‌ನಲ್ಲಿ ಭಾರತಕ್ಕೆ ಶಾಕ್

    ಫಿಟ್ನೆಸ್​ ಕಡೆ ಶಿಖರ್​​ ಧವನ್ ಗಮನ

    ಟ್ರೈನಿಂಗ್ ಸೆಷನ್​ ವೇಳೆ ಕೊಹ್ಲಿ ಮಸ್ತ್​ ಡ್ಯಾನ್ಸ್

ಏಷ್ಯಾಕಪ್ ಫೈನಲ್‌ನಲ್ಲಿ ಭಾರತಕ್ಕೆ ಶಾಕ್

ಎಮರ್ಜಿಂಗ್ ಏಷ್ಯಾಕಪ್ ಟೂರ್ನಿ ಗೆಲ್ಲುವ ಸುವರ್ಣ ಅವಕಾಶವನ್ನು ಭಾರತ ಎ ತಂಡ ಕೈಚೆಲ್ಲಿದೆ. ಕೊಲೊಂಬೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 50 ಓವರ್​​ಗಳಲ್ಲಿ 352 ರನ್​​​ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ್ದ ಭಾರತ ಎ 224 ರನ್‌ಗೆ ಆಲೌಟ್ ಆಗುವ ಮೂಲಕ 128 ರನ್​​​​ಗಳ ಸೋಲೊಪ್ಪಿಕೊಳ್ತು. ಇದರೊಂದಿಗೆ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಫಿಟ್ನೆಸ್​ ಕಡೆ ಶಿಖರ್​​ ಧವನ್ ಗಮನ

ಸದ್ಯ ಟೀಮ್ ಇಂಡಿಯಾದಿಂದ ದೂರ ಉಳಿದಿರುವ ಅನುಭವಿ ಆಟಗಾರ ಶಿಖರ್ ಧವನ್​ ಕಮ್​​ಬ್ಯಾಕ್ ಮಾಡುವ ಹಂಬಲದಲ್ಲಿದ್ದಾರೆ. ಫಿಟ್ನೆಸ್​ ಕಡೆ ಹೆಚ್ಚು ಗಮನ ಹರಿಸಿಸುತ್ತಿರುವ ಶಿಖರ್​, ಟೀಮ್ ಇಂಡಿಯಾ ಕಮ್​​ಬ್ಯಾಕ್ ಕನಸು ಕಾಣುತ್ತಿದ್ದು, ದೈಹಿಕ ಕಸರತ್ತು ನಡೆಸ್ತಿರುವ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ. ಫಿಟ್ನೆಸ್​​​ಗೆ ಬದ್ಧ ಎಂದು ಬರೆದುಕೊಂಡಿದ್ದಾರೆ.

ಪಿಯಾನೋ ಕೀಬೋರ್ಡ್​ ನುಡಿಸಿದ ಲಸಿತ್ ಮಲಿಂಗಾ

ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ಲಸಿತ್​ ಮಲಿಂಗಾ ಪಿಯಾನೋ ಕೀಬೋರ್ಡ್​ ನುಡಿಸಿದ್ದಾರೆ. ಮೇಜರ್​​ ಲೀಗ್​ ಕ್ರಿಕೆಟ್​​ನಲ್ಲಿ ಮುಂಬೈ ಇಂಡಿಯನ್ಸ್ ನ್ಯೂ ಯಾರ್ಕ್​ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬಿಡುವಿನ ವೇಳೆ ಪಿಯಾನೋ ನುಡಿಸಿ ಗಮನ ಸೆಳೆದಿದ್ದಾರೆ.. ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂಡದ ಆಯ್ಕೆಗೆ 100 ಕೋಟಿ ರೂಪಾಯಿ

2024ನೇ ಐಪಿಎಲ್​​ನಲ್ಲಿ ಫ್ರಾಂಚೈಸಿಗಳ ಪರ್ಸ್​ ಮತ್ತಷ್ಟು ಹೆಚ್ಚಿಸಿದೆ. ಕಳೆದ ಸೀಸನ್​​ನಲ್ಲಿ ಫ್ರಾಂಚೈಸಿಗಳ ಪರ್ಸ್​ ಮನಿ 95 ಕೋಟಿ ರೂಪಾಯಿ ಆಗಿತ್ತು. ಆದ್ರೀಗ ಸೀಸನ್​​-17ರ ಐಪಿಎಲ್​​ನಲ್ಲಿ 100 ಕೋಟಿಗೆ ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದ್ದು, ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ. 2024ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಈ ವರ್ಷದ ಡಿಸೆಂಬರ್​​ನಲ್ಲಿ ನಡೆಯಲಿದೆ.

500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿ ಸ್ಮರಣೀಯವಾಗಿರಿಸಿಕೊಂಡ ವಿರಾಟ್ ಕೊಹ್ಲಿ ಟ್ರೈನಿಂಗ್ ಸೆಷನ್​ ವೇಳೆ ಕ್ರೇಜಿ ಡ್ಯಾನ್ಸ್ ಮೂಲಕ ಮಾಡಿ ಗಮನ ಸೆಳೆದಿದ್ದಾರೆ. ಭಾರತ-ವಿಂಡೀಸ್​​​​ 2ನೇ ಟೆಸ್ಟ್​​ ವೇಳೆ ಎಲ್ಲ ಆಟಗಾರರು ಟ್ರೈನಿಂಗ್​​ನಲ್ಲಿ ಬ್ಯುಸಿಯಾಗಿದ್ದರು. ಆಗ ಕಿಂಗ್ ಕೊಹ್ಲಿ ಪ್ಯಾನ್​​ಕೇಕ್​ ತಿನ್ನುತ್ತ ನಿಂತಲ್ಲೇ ಸೊಂಟ ಅಲ್ಲಾಡಿಸಿ ಸ್ಟೆಪ್ಸ್ ಹಾಕಿದ್ದಾರೆ.

ಇಂದಿನಿಂದ ದೇವ್​ಧರ್ ಟ್ರೋಫಿ ಆರಂಭ

ದೇಶಿ ಕ್ರಿಕೆಟ್​​ನ ಪ್ರತಿಷ್ಠಿತ ದೇವ್​ಧರ್ ಟ್ರೋಫಿ ಇಂದಿನಿಂದ ಆರಂಭಗೊಳ್ಳಲಿದೆ. ಪುದುಚೇರಿಯಲ್ಲಿ ಇಡೀ ಪಂದ್ಯಾವಳಿ ನಡೆಯಲಿದ್ದು, ಒಟ್ಟು 6 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 4 ವರ್ಷಗಳ ಬಳಿಕ ದೇವ್​​ಧರ್ ಟ್ರೋಫಿ ನಡೆಯುತ್ತಿದ್ದು, ಆಗಸ್ಟ್​​​ 3ಕ್ಕೆ ಕೊನೆಗೊಳ್ಳಲಿದೆ. ಸೌತ್ ಝೋನ್​ ತಂಡವನ್ನು ಕನ್ನಡಿಗ ಮಯಾಂಕ್ ಅಗರ್ವಾಲ್​ ಮುನ್ನಡೆಸಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Watch: ಪಿಯಾನೋ ನುಡಿಸಿದ ಮಲಿಂಗಾ.. ಕ್ರಿಕೆಟ್ ಲೋಕದ ‘ಸೂಪರ್ ಸಿಕ್ಸ್’ ಇಲ್ಲಿವೆ

https://newsfirstlive.com/wp-content/uploads/2023/07/music.jpg

Load More