newsfirstkannada.com

Watch: ರಾಷ್ಟ್ರಧ್ವಜ ಕಂಡು ಮೈದಾನದಲ್ಲಿದ್ದ ರೋಹಿತ್ ಶರ್ಮಾ ಅಭಿಮಾನಿಗೆ ಏನ್ ಹೇಳಿದ್ರು ಗೊತ್ತಾ..?

Share :

13-09-2023

    ಶರ್ಮಾಗಿರುವ ದೇಶದ ಮೇಲಿನ ಅಭಿಮಾನಕ್ಕೆ ಫ್ಯಾನ್ಸ್ ಸೆಲ್ಯೂಟ್

    ಕೌಂಟಿ ಕ್ರಿಕೆಟ್​ನಲ್ಲಿ ಯುಜುವೇಂದ್ರ ಚಹಲ್ ಮತ್ತೆ ಶೈನಿಂಗ್

    ಕ್ರಿಕೆಟ್ ಲೋಕದ ಚುಟುಕು ಸುದ್ದಿಗಳ ಹೂರಣ ಇಲ್ಲಿವೆ

10 ಸಾವಿರ ಕ್ಲಬ್​ಗೆ ರೋಹಿತ್ ಶರ್ಮಾ ಎಂಟ್ರಿ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ಮೈಲುಗಲ್ಲು ತಲುಪಿದ್ದಾರೆ. ಶ್ರೀಲಂಕಾ ವಿರುದ್ಧದ ಸೂಪರ್-4 ಮ್ಯಾಚ್​ನಲ್ಲಿ 23 ರನ್​ಗಳ ಗಡಿ ದಾಟುತ್ತಿದ್ದಂತೆ ಏಕದಿನ ಮಾದರಿಯಲ್ಲಿ 10 ಸಾವಿರ ರನ್​ ಗಳಿಸಿದ ಹೆಗ್ಗಳಿಕೆಗೆ ರೋಹಿತ್​ ಶರ್ಮಾ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ 6ನೇ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ ಬಳಿಕ ಈ ಸಾಧನೆ ಮಾಡಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಷ್ಯನ್​ ಗೇಮ್ಸ್​​ಗೆ ಡೌಟ್.. ವಿಶ್ವಕಪ್​​ ಟಿಕೆಟ್.​​.?

ಏಷ್ಯನ್ ಗೇಮ್ಸ್​ಗೆ ಟೀಮ್ ಇಂಡಿಯಾದ ಯುವ ಬ್ಯಾಟ್ಸ್​ಮನ್ ತಿಲಕ್ ವರ್ಮಾ ತೆರಳುವುದು ಅನುಮಾನವಾಗಿದೆ. ಶ್ರೇಯಸ್ ಅಯ್ಯರ್​ ಮತ್ತೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಆಟಗಾರ ತಿಲಕ್ ವರ್ಮಾ, ಏಕದಿನ ವಿಶ್ವಕಪ್​ ವೇಳೆ ಟೀಮ್ ಇಂಡಿಯಾ ಜೊತೆ ಉಳಿಯುವ ಸಾಧ್ಯತೆ ಇದೆ. ತಿಲಕ್ ವರ್ಮಾ ಜೊತೆಗೆ ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ, ಯುಜುವೇಂದ್ರ ಚಹಲ್ ಕೂಡ ರಿಸರ್ವ್ ಪ್ಲೇಯರ್​ಗಳಾಗಿ ಉಳಿಯುವ ಸಾಧ್ಯತೆಯಿದೆ.

ಕೌಂಟಿಯಲ್ಲಿ ಯುಜುವೇಂದ್ರ ಚಹಲ್ ಶೈನಿಂಗ್

ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಯಜುವೇಂದ್ರ ಚಹಲ್, ಕಮ್​​ಬ್ಯಾಕ್​ಗಾಗಿ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಸದ್ಯ ಇಂಗ್ಲೆಂಡ್​​ನ ಕೌಂಟಿ ಚಾಂಪಿಯನ್​​ಶಿಪ್​ನಲ್ಲಿ​​ ಕೆಂಟ್​ ಪರ ಡೆಬ್ಯು ಮಾಡಿದ್ದಾರೆ. ನಾಟಿಂಗ್​​ಹ್ಯಾಮ್​ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್​ ವಿಕೆಟ್ ಉರುಳಿಸಿ ಮಿಂಚಿದ್ದಾರೆ. ಏಷ್ಯಾಕಪ್​ ಹಾಗೂ ವಿಶ್ವಕಪ್ ತಂಡಗಳಲ್ಲಿ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾಗಿರುವ ಲೆಗ್ ಸ್ಪಿನ್ನರ್​ ಯುಜುವೇಂದ್ರ ಚಹಲ್, ಕಮ್​ಬ್ಯಾಕ್​ಗೆ ಕೌಂಟಿ ಮೊರೆ ಹೋಗಿದ್ದಾರೆ.

ಧ್ವಜ ಹಾರಾಡಿಸುವಂತೆ ಫ್ಯಾನ್​ಗೆ ರೋಹಿತ್​​ ಮನವಿ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ದೇಶದ ಮೇಲಿನ ಅಭಿಮಾನ ಸಾರಿ ಫ್ಯಾನ್ಸ್​ ಮನ ಗೆದ್ದಿದ್ದಾರೆ. ಪಾಕಿಸ್ತಾನ​​ ವಿರುದ್ಧದ ಪಂದ್ಯದ ವೇಳೆ ಟೀಮ್ ಇಂಡಿಯಾ ಅಭಿಮಾನಿಯೋರ್ವ ಭಾರತದ ಧ್ವಜ ಕೈಯಲ್ಲಿ ಹಿಡಿದುಕೊಂಡಿದ್ದ. ಇದನ್ನ ಗಮನಿಸಿದ ರೋಹಿತ್ ಶರ್ಮಾ, ಧ್ವಜವನ್ನ ಹಾರಾಡಿಸುವಂತೆ ಮನವಿ ಮಾಡಿದ್ರು. ಈ ಬಳಿಕ ರೋಹಿತ್ ಮನವಿಯಂತೆ ಆ ಅಭಿಮಾನಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ಪಾಕ್​ ಏಷ್ಯಾಕಪ್​ ತಂಡಕ್ಕೆ ಮೇಜರ್​ ಸರ್ಜರಿ..?

ಟೀಮ್ ಇಂಡಿಯಾ ವಿರುದ್ಧದ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಭಾರಿ ಆಘಾತ ಅನುಭವಿಸಿದೆ. ವೇಗಿ ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಇಂಜುರಿ ಕಾರಣದಿಂದ ಬ್ಯಾಕ್ ಆಪ್ ಆಟಗಾರರಿಗೆ ಬುಲಾವ್ ನೀಡಿದೆ. ಯುವ ವೇಗಿಗಳಾದ ಶಹನವಾಜ್ ದಹಾನಿ ಹಾಗೂ ಜಮಾನ್ ಖಾನ್​​ಗೆ ಪಾಕ್​​ ಮ್ಯಾನೇಜ್​ಮೆಂಟ್ ಬುಲಾವ್​ ನೀಡಿದೆ. ಸೂಪರ್​-4ನ ಕೊನೆ ಪಂದ್ಯಕ್ಕೂ ಮುನ್ನ ಪ್ರಮುಖ ವೇಗಿಗಳ ಇಂಜುರಿ ಪಾಕ್​ಗೆ​ ತಲೆನೋವಾಗಿ ಮಾರ್ಪಟ್ಟಿದೆ.

ನೆಟ್ಸ್​ನಲ್ಲಿ ಜೋಫ್ರಾ ಆರ್ಚರ್​ ಬೌಲಿಂಗ್ ಅಭ್ಯಾಸ

ಇಂಗ್ಲೆಂಡ್​ನ ಸ್ಟಾರ್ ಆಟಗಾರ ಜೋಫ್ರಾ ಆರ್ಚರ್​ ತಂಡಕ್ಕೆ ಕಮ್​ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ಇಂಜುರಿಯಿಂದ ತಂಡದಿಂದ ದೂರ ಉಳಿದಿದ್ದ ಜೋಫ್ರಾ ಆರ್ಚರ್​, ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ, ಓವಲ್​ನಲ್ಲಿ ಇಂಗ್ಲೆಂಡ್ ತಂಡದ ಜೊತೆ ಕಾಣಿಸಿಕೊಂಡಿರುವ ಜೋಫ್ರಾ ಆರ್ಚರ್​, ನೆಟ್ಸ್​ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿ ಗಮನ ಸೆಳೆದಿದ್ದಾರೆ. ಸದ್ಯ ಏಕದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿರುವ ಜೋಫ್ರಾಗೆ, ರಿಸರ್ವ್​​ ಪ್ಲೇಯರ್ ಆಗಿ ಚಾನ್ಸ್​ ಸಿಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Watch: ರಾಷ್ಟ್ರಧ್ವಜ ಕಂಡು ಮೈದಾನದಲ್ಲಿದ್ದ ರೋಹಿತ್ ಶರ್ಮಾ ಅಭಿಮಾನಿಗೆ ಏನ್ ಹೇಳಿದ್ರು ಗೊತ್ತಾ..?

https://newsfirstlive.com/wp-content/uploads/2023/09/ROHIT_SHARMA.jpg

Load More