newsfirstkannada.com

ಟೀಂ ಇಂಡಿಯಾಗೆ ಗುಡ್​ನ್ಯೂಸ್; ಜಸ್​​ಪ್ರಿತ್ ಬೂಮ್ರಾ ಬೌಲಿಂಗ್​​ನಲ್ಲಿ ಕೆ.ಎಲ್.ರಾಹುಲ್​​ ಅಭ್ಯಾಸ..!

Share :

14-08-2023

    ಇನ್ಮುಂದೆ ಕ್ರಿಕೆಟ್​ನಲ್ಲೂ ‘ರೆಡ್ ಕಾರ್ಡ್’​, ಏನಿದು?

    ಐರ್ಲೆಂಡ್ ಪ್ರವಾಸಕ್ಕೆ ಗಾಯಕ್ವಾಡ್ ಕಸರತ್ತು

    ಮೈದಾನಕ್ಕೆ ಎಂಟ್ರಿ ಕೊಟ್ಟ ಬುಶ್, ಬುಶ್..Video

ಬೂಮ್ರಾ ಬೌಲಿಂಗ್​​ನಲ್ಲಿ ರಾಹುಲ್​​ ಅಭ್ಯಾಸ

ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣ್ತಿರುವ ಕೆ.ಎಲ್.ರಾಹುಲ್ ಅಭಿಮಾನಿಗಳಿಗೆ ಗುಡ್​​ನ್ಯೂಸ್ ನೀಡಿದ್ದಾರೆ. ಬೆಂಗಳೂರಿನ ಎನ್​ಸಿಎ ನೆಟ್ಸ್​ನಲ್ಲಿ ಕಸರತ್ತು ನಡೆಸ್ತಿರುವ ಕೆ.ಎಲ್.ರಾಹುಲ್, ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬೂಮ್ರಾ ಬೌಲಿಂಗ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಆ ಮೂಲಕ ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡೋ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.

ಋತುರಾಜ್ ಗಾಯಕ್ವಾಡ್ ಕಸರತ್ತು

ಐರ್ಲೆಂಡ್ ಪ್ರವಾಸದ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ನಾಳೆ ಜಸ್​ಪ್ರೀತ್​ ಬೂಮ್ರಾ ನೇತೃತ್ವದ ಟೀಮ್ ಇಂಡಿಯಾ ಐರ್ಲೆಂಡ್​ಗೆ ಹಾರಲಿದೆ. ಇದಕ್ಕೂ ಮುನ್ನ ಉಪ ನಾಯಕ ಋತುರಾಜ್ ಗಾಯಕ್ವಾಡ್ ಭರ್ಜರಿ ಕಸರತ್ತು ನಡೆಸಿದ್ದಾರೆ. ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಋತುರಾಜ್ ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳ ಟಿ-20 ಸರಣಿಯನ್ನಾಡಲಿದ್ದು ಆಗಸ್ಟ್​ 18ರಿಂದ ಸರಣಿ ಆರಂಭವಾಗಲಿದೆ.

ಮೈದಾನಕ್ಕೆ ಎಂಟ್ರಿ ಕೊಟ್ಟ ಹಾವು

ಲಂಕಾ ಪ್ರೀಮಿಯರ್​ ಲೀಗ್​ ಟೂರ್ನಿಯಲ್ಲಿ ಮತ್ತೊಮ್ಮೆ ಹಾವಿನ ಪ್ರತ್ಯಕ್ಷವಾಗಿದೆ. ಕೊಲಬೊಂದ ಪ್ರೇಮದಾಸ ಸ್ಟ್ರೇಡಿಯಂನಲ್ಲಿ ನಡೀತಿದ್ದ ಜಾಫ್ನಾ ಕಿಂಗ್ಸ್ ಹಾಗೂ ಬಿ ಲವ್ ಕ್ಯಾಂಡಿ ನಡುವಿನ ಪಂದ್ಯದ ವೇಳೆ ಹಾವೊಂದು ಮೈದಾನಕ್ಕೆ ಎಂಟ್ರಿ ನೀಡಿದೆ. ಹಾವನ್ನು ಗಮನಿಸದ ಲಂಕಾ ಕ್ರಿಕೆಟಿಗ ಇಸುರು ಉದಾನ ಫೀಲ್ಡಿಂಗ್ ಪೊಸಿಷನ್​​ಗೆ ಹಿಂಬದಿಯಾಗಿ ಹೆಜ್ಜೆ ಹಾಕ್ತಿದ್ರು. ಈ ವೇಳೆ ಸಹ ಆಟಗಾರ ಹಾಗೂ ಕ್ಯಾಮರಾಮೆನ್​ ಕೂಗಿದಾಗ ಹಾವನ್ನ ನೋಡಿದ ಉದಾನ ಒಂದು ಕ್ಷಣ ದಂಗಾದ್ರು. ಸದ್ಯ ಇಸುರು ಉದಾನ ಹಾವಿಂದ ಎಸ್ಕೇಪ್ ಆಗಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ರಿಲ್ಯಾಕ್ಸ್​ ಮೂಡ್​ನಲ್ಲಿ ಶಾರ್ದೂಲ್​ ಠಾಕೂರ್​​

ಕ್ರಿಕೆಟ್​​ನಿಂದ ಬಿಡುವು ಸಿಕ್ಕರೆ ಸಾಕು ಟೀಮ್ ಇಂಡಿಯಾ ಆಟಗಾರರು ಮೋಜು-ಮಸ್ತಿ ಮಾಡೋದ್ರಲ್ಲಿ ಎಂಗೇಜ್​ ಆಗಿಬಿಡ್ತಾರೆ. ವೆಸ್ಟ್​​ ​ಇಂಡೀಸ್ ಪ್ರವಾಸದ ಬಳಿಕ ಶಾರ್ದುಲ್​ ಠಾಕೂರ್​ ತವರಿಗೆ ವಾಪಾಸಾಗಿದ್ದಾರೆ. ಸುತ್ತಾಟದಲ್ಲಿ ಬ್ಯುಸಿಯಾಗಿರೋ ಶಾರ್ದುಲ್​​,​ ಚಲಿಸುವ ಬೋಟ್​​ನಲ್ಲಿ ನಿಂತು ಸಖತ್ ಎಂಜಾಯ್ ಮಾಡಿದ್ದಾರೆ. ಸುಂದರ ಪ್ರಕೃತಿ ತಾಣಗಳ ನಡುವೆ ಫೋಟೋಗೆ ಪೋಸ್​ ನೀಡಿದ್ದು, ಹ್ಯಾಪಿನೆಸ್​​​ ನೆವರ್​ ಎಂಡಿಂಗ್ ಎಂದು ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದಾರೆ. ವಿಂಡೀಸ್ ಎದುರಿನ ಟೆಸ್ಟ್​​-ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದ ಶಾರ್ದುಲ್​ಗೆ, ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಇನ್ಮುಂದೆ ಕ್ರಿಕೆಟ್​ನಲ್ಲೂ ರೆಡ್ ಕಾರ್ಡ್​

2023ರ ಕೆರಿಬಿಯನ್ ಪ್ರಿಮೀಯರ್​ ಲೀಗ್​ನಲ್ಲಿ ಹೊಸ ರೂಲ್ಸ್​ ಜಾರಿಗೆ ತರಲಾಗಿದೆ. ಫುಟ್​​ಬಾಲ್ ಗೇಮ್​ನಲ್ಲಿರುವಂತೆ ಮೊದಲ ಬಾರಿಗೆ ಟಿ20 ಲೀಗ್​ನಲ್ಲಿ ರೆಡ್ ಕಾರ್ಡ್​ ಬಳಕೆಗೆ ವಿಂಡೀಸ್​ ಬೋರ್ಡ್​ ಮುಂದಾಗಿದೆ. ನಿಧಾನಗತಿ ಬೌಲಿಂಗ್ ತಪ್ಪಿಸುವ​​​​​​​​​​​​​ ದೃಷ್ಟಿಯಿಂದ ಇದನ್ನ ಜಾರಿಗೆ ತರಲಾಗಿದೆ. 18ನೇ ಓವರ್​​​ ವೇಳೆಗೆ ನಿಗದಿತ ಸಮಯ ಮುಗಿದಿದ್ರೆ ಒಬ್ಬ ಹಾಗೂ 19 ಓವರ್​ಗೆ ಇಬ್ಬರು 30 ಯಾರ್ಡ್​ ಸರ್ಕಲ್​ನಲ್ಲಿ ಇರಬೇಕಾಗುತ್ತೆ. ಅಕಸ್ಮಾತ್​ 20ನೇ ಓವರ್​​ನಲ್ಲೂ ಹಿಂದುಳಿದಿದ್ದರೆ ಓರ್ವ ಆಟಗಾರನನ್ನ ಫೀಲ್ಡ್​ನಿಂದ ಹೊರಗೆ ಕಳಿಸಲಾಗುತ್ತದೆ.

ಏಕದಿನ ವಿಶ್ವಕಪ್​ ಟೂರ್ನಿಗೆ ಸ್ಟೋಕ್ಸ್ ಕಮ್​ಬ್ಯಾಕ್!

ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿರುವ ಬೆನ್​​ಸ್ಟೋಕ್ಸ್​​ ಮತ್ತೆ ಕಮ್​ಬ್ಯಾಕ್​ ಮಾಡೋ ಸಾಧ್ಯತೆ ಇದೆ. ಅಕ್ಟೋಬರ್​ 5 ರಿಂದ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್​ ಟೂರ್ನಿ ವೇಳೆ ಬೆನ್ ಸ್ಟೋಕ್ಸ್​​​ ಮತ್ತೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಸ್ಟೋಕ್ಸ್ 2023ರ ಏಕದಿನ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ತಂಡದ ಪರ ಆಡಬೇಕೆಂದು ಅಭಿಮಾನಿಗಳು ಹಾಗೂ ಕೋಚ್​​ ಒತ್ತಾಯಿಸಿದ್ದಾರೆ. ಇಂಗ್ಲೆಂಡ್​​ ಕ್ರಿಕೆಟ್ ಮಂಡಳಿ ಕೂಡ ಸ್ಟೋಕ್ಸ್​​​​​ ನಿವೃತ್ತಿಯನ್ನು ಮರುಪರಿಶೀಲಿಸಿ ಸಂಪರ್ಕಿಸಲು ಸಿದ್ಧತೆ ಮಾಡಿಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾಗೆ ಗುಡ್​ನ್ಯೂಸ್; ಜಸ್​​ಪ್ರಿತ್ ಬೂಮ್ರಾ ಬೌಲಿಂಗ್​​ನಲ್ಲಿ ಕೆ.ಎಲ್.ರಾಹುಲ್​​ ಅಭ್ಯಾಸ..!

https://newsfirstlive.com/wp-content/uploads/2023/08/KLRAHUL.jpg

Load More