newsfirstkannada.com

ಜೈಲರ್ ಬಳಿಕ ರಜಿನಿ ಸಿನಿಮಾ ಯಾವುದು? 171ನೇ ಚಿತ್ರಕ್ಕೆ ಕಾಲ್​ಶೀಟ್ ಕೊಟ್ಟ ತಲೈವಾ; ನಿರ್ದೇಶಕ ಯಾರು?

Share :

11-09-2023

    ಜೈಲರ್ ಸಿನಿಮಾ ನೋಡಿ ಖುಷಿಯಲ್ಲಿದ್ದ ಫ್ಯಾನ್ಸ್​​ಗೆ ಸಂತಸದ ಸುದ್ದಿ

    ಮತ್ತೊಮ್ಮೆ ಯುವ ನಿರ್ದೇಶಕನಿಗೆ ಕಾಲ್​ಶೀಟ್​ ಕೊಟ್ಟ ಸೂಪರ್​ ಸ್ಟಾರ್​​

    ಜೈಭೀಮ್ ಡೈರೆಕ್ಟರ್ ಜೊತೆ 171ನೇ ಚಿತ್ರ ಮಾಡಲಿರುವ ತಲೈವಾ

ಸೂಪರ್​​ ಸ್ಟಾರ್​ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್​ನ್ಯೂಸ್​​ ಕೊಟ್ಟಿದ್ದಾರೆ. ಇದೀಗ ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅವರ 171ನೇ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮತ್ತೊಮ್ಮೆ ನೆಚ್ಚಿನ ನಟನನ್ನು ಬಿಗ್​ಸ್ಕ್ರೀನ್​ನಲ್ಲಿ ನೋಡಲು ರಜನಿಕಾಂತ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನೂ, ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣಗೊಳ್ಳುತ್ತಿದೆ. ಸೂಪರ್​ ಸ್ಟಾರ್​ ರಜಿನಿಕಾಂತ್​​​​ ಚಿತ್ರಕ್ಕೆ ತಾತ್ಕಾಲಿಕವಾಗಿ ತಲೈವರ್ 171 ಎಂದು ಹೆಸರಿಡಲಾಗಿದೆ. ವಿಶೇಷ ಎಂದರೆ ಈ ಸಿನಿಮಾಗೂ ಅನಿರುದ್ಧ್ ಅವರು ಸಂಗೀತ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಹೊಸ ಹೊಸ ಅಪ್ಡೇಟ್​ಗಳು ಹೊರಬೀಳಲಿದೆ.

ಇದನ್ನು ಓದಿ: ರಜನಿ​ ಹಿಮಾಲಯದ ಭೇಟಿ ರಹಸ್ಯವೇನು.. ತಲೈವಾಗೆ ಸೂಪರ್​ ಶಕ್ತಿ ಕೊಡ್ತಿದ್ಯಾ ಬಾಬಾ ಕೊಟ್ಟ ಆ ಬೇರು?

ವಿಕ್ರಮ್, ಲಿಯೋ ಚಿತ್ರಗಳ ಖ್ಯಾತಿಯ ಲೋಕೇಶ್ ಕನಕರಾಜ್ ಅವರು ಮೊದಲ ಬಾರಿಗೆ ಸನ್ ಪಿಚ್ಚರ್ಸ್​ ಜೊತೆ ರಜನಿ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಮಾಹಿತಿ ಪ್ರಕಾರ 2024 ಫೆಬ್ರವರಿಯಲ್ಲಿ ರಜಿನಿ 171ನೇ ಚಿತ್ರ ಶೂಟಿಂಗ್​ ಆರಂಭ ಆಗಲಿದೆ ಎನ್ನಲಾಗಿದೆ. ಜೈಲರ್​ ಚಿತ್ರವು ರಿಲೀಸ್​ ಆಗಿ 600 ರಿಂದ 635 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಚಿತ್ರವು ಆಗಸ್ಟ್​​ 10ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಜೈಲರ್​ ಒಟ್ಟು 10 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ವಿನಾಯಕನ್, ರಮ್ಯಾ ಕೃಷ್ಣನ್ ಮತ್ತು ವಸಂತ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೋಹನ್‌ಲಾಲ್, ಸ್ಯಾಂಡಲ್​ವುಡ್​ ನಟ ಶಿವರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ಕೂಡ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲರ್ ಬಳಿಕ ರಜಿನಿ ಸಿನಿಮಾ ಯಾವುದು? 171ನೇ ಚಿತ್ರಕ್ಕೆ ಕಾಲ್​ಶೀಟ್ ಕೊಟ್ಟ ತಲೈವಾ; ನಿರ್ದೇಶಕ ಯಾರು?

https://newsfirstlive.com/wp-content/uploads/2023/09/rajini-6.jpg

Load More