32 ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಅಮಿತಾಬ್ ಬಚ್ಚನ್, ರಜನಿಕಾಂತ್
ದುನಿಯಾ ವಿಜಿ ಜತೆ ಮಾತುಕತೆ ನಡೆಸಿರೋ ನಿರ್ದೇಶಕ ಲೋಕೇಶ್ ಕನಕರಾಜ್
170ನೇ ಚಿತ್ರದಲ್ಲಿ ಸಖತ್ ಬ್ಯುಸಿಯಾದ ಸೂಪರ್ ಸ್ಟಾರ್ ರಜಿನಿಕಾಂತ್
ಸೂಪರ್ ಹಿಟ್ ಜೈಲರ್ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ 171ನೇ ಸಿನಿಮಾವನ್ನು ಘೋಷಿಸಿದ್ದರು. ಮತ್ತೆ ರಜನಿಕಾಂತ್ ಆ್ಯಕ್ಷನ್ ಸಿನಿಮಾ ಮೂಲಕ ತೆರೆ ಮೇಲೆ ಬರುವ ಸುಳಿವು ನೀಡಿದ್ದರು. ಇದೀಗ ತಲೈವಾ ಅವರ 171ನೇ ಚಿತ್ರತಂಡದಿಂದ ಸಖತ್ ಸುದ್ದಿಯೊಂದು ಹೊರ ಬಿದ್ದಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರ 171ನೇ ಚಿತ್ರದಲ್ಲಿ ಸ್ಯಾಂಡಲ್ವುಡ್ ಕರಿ ಚಿರತೆ, ನಟ ದುನಿಯಾ ವಿಜಯ್ ನಟಿಸುತ್ತಿದ್ದಾರಂತೆ. ಈ ಬಗ್ಗೆ ನಟ ದುನಿಯಾ ವಿಜಯ್ ಜತೆ ‘ವಿಕ್ರಮ್’ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಮಾತುಕತೆ ನಡೆಸಿದ್ದಾರಂತೆ. ರಜಿನಿಕಾಂತ್ರ 171ನೇ ಚಿತ್ರದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಈ ಸಿನಿಮಾವನ್ನು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಚಿತ್ರೀಕರಣ ಆರಂಭ ಮಾಡಲಿದ್ದು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.
ಸದ್ಯ 170ನೇ ಚಿತ್ರದಲ್ಲಿ ನಟ ರಜಿನಿಕಾಂತ್ ಅವರು ಸಖತ್ ಬ್ಯುಸಿಯಾಗಿದ್ದಾರೆ. ಮತ್ತೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ 32 ವರ್ಷಗಳ ನಂತರ ಬಾಲಿವುಡ್ ಬಿಗ್ಬಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ರಜನಿಕಾಂತ್ ಅವರ 171ನೇ ಚಿತ್ರವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶಿಸುತ್ತಾರೆ. ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಅನಿರುದ್ದ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ