newsfirstkannada.com

ಜೈಲರ್ ನಿರ್ಮಾಪಕರಿಂದ ರಜಿನಿಕಾಂತ್‌ಗೆ ಉಡುಗೊರೆಗಳ ಮಹಾಪೂರ; ಬ್ರಾಂಡ್ ನ್ಯೂ BMW X7 ಕಾರಿನ ಬೆಲೆ ಎಷ್ಟು ಗೊತ್ತಾ?

Share :

01-09-2023

  600 ಕೋಟಿ ಕಲೆಕ್ಷನ್ ಮಾಡಿದ ತಲೈವಾ ಅಭಿನಯದ ಜೈಲರ್ ಚಿತ್ರ

  ಸೂಪರ್‌ ಸ್ಟಾರ್ ಹೊಸ ಅವತಾರಕ್ಕೆ ಬಾಕ್ಸಾಫೀಸ್​ ಧೂಳಿಪಟ

  ಜೈಲರ್​ ನಿರ್ಮಾಪಕರಿಂದ ದುಬಾರಿ ಗಿಫ್ಟ್‌ಗಳನ್ನು ಸ್ವೀಕರಿಸಿದ ತಲೈವಾ

ಸೂಪರ್​ ಸ್ಟಾರ್​ ರಜನಿಕಾಂತ್ ಅಭಿನಯದ ಜೈಲರ್​ ಸಿನಿಮಾ ಬಿಡುಗಡೆಯಾಗಿ ಬಾಕ್ಸಾಫೀಸ್​ ಧೂಳೆಬ್ಬಿಸಿದೆ. ಸದ್ಯ ರಜನಿಕಾಂತ್ ಮತ್ತು ಇಡೀ ಚಿತ್ರತಂಡ ‘ಜೈಲರ್’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಒಟ್ಟು 600 ಕೋಟಿ ಬಾಚಿಕೊಂಡು ಪರಾಕ್ರಮವನ್ನೇ ಮೆರೆಯುತ್ತಿದೆ.

ಇದೇ ಖುಷಿಯಲ್ಲಿ ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿಧಿ ಮಾರನ್, ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW ಹಾಗೂ BMW X7 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಬ್ರಾಂಡ್‌ ನ್ಯೂ BMW X7 ಕಾರಿನ ಬೆಲೆ ಭಾರತದಲ್ಲಿ ಬರೋಬ್ಬರಿ ಒಂದು ಕೋಟಿ 24 ಲಕ್ಷದಿಂದ 1 ಕೋಟಿ 26 ಲಕ್ಷ ರೂಪಾಯಿಗಳು. ಜೈಲರ್​ ಆಗಸ್ಟ್‌ 10ರಂದು ತೆರೆ ಕಂಡು ಭರ್ಜರಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿದೆ. ಜೈಲರ್ ಚಿತ್ರಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಒಟ್ಟು 210 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ, ಸನ್ ಪಿಕ್ಚರ್ಸ್‌ನ X ಖಾತೆಯಲ್ಲಿ ರಜನಿಕಾಂತ್‌ಗೆ ಗಿಫ್ಟ್ ಕೊಟ್ಟಿರೋ ಕಾರಿನ ಫೋಟೋವನ್ನು ಶೇರ್​ ಮಾಡಲಾಗಿದೆ. ‘ಕಲಾನಿಧಿ ಮಾರನ್, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಸಂಭಾವನೆಯ ಚೆಕ್ ಹಸ್ತಾಂತರಿಸಿ, ಜೈಲರ್ ಐತಿಹಾಸಿಕ ಯಶಸ್ಸಿನ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಬರೆಯಲಾಗಿದೆ. ಜೊತೆಗೆ ಕಲಾನಿಧಿ ಮಾರನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಾಗಿ ಎರಡು ಕಾರುಗಳನ್ನು ತಂದಿದ್ದರು. ಆ ಎರಡು ಕಾರುಗಳಲ್ಲಿ ನೀವು ಯಾವುದನ್ನು ಆಯ್ಕೆ ಮಾಡುತ್ತಾರೋ ಅದು ನಿಮಗೆ ಎಂದು ಹೇಳಲಾಗಿತ್ತು. ಅದರಲ್ಲಿ ನಟ BMW X7 ಕಾರನ್ನು ಆಯ್ಕೆ ಮಾಡಿದ್ದಾರೆ.

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಒಂದು ಫೋಟೋದಲ್ಲಿ ಕಲಾನಿಧಿ ಮಾರನ್ ಅವರು ನಟ ರಜನಿಕಾಂತ್ ಅವರಿಗೆ ಚೆಕ್‌ ನೀಡುತ್ತಿದ್ದರೆ, ಮತ್ತೊಂದರಲ್ಲಿ ತಲೈವಾಗೆ ಹೂವಿನ ಬೊಕ್ಕೆ ನೀಡುತ್ತಿದ್ದಾರೆ. ಮತ್ತು ಅವರನ್ನು ಹೊರಗಡೆ ಕರೆದುಕೊಂಡು ಸರ್​ಪ್ರೈಸ್​ ರೀತಿಯಲ್ಲಿ BMW X7 ಕಾರನ್ನು ಗಿಫ್ಟ್​ ಆಗಿ ನೀಡಿದ್ದಾರೆ.

ರಜನಿಕಾಂತ್ ಅಭಿನಯದ ಜೈಲರ್‌ ಸಿನಿಮಾ 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಿಸಲಾಗಿತ್ತು. ರಿಲೀಸ್​​ ಆಗಿ ಭಾರತದಲ್ಲೇ 350 ಕೋಟಿ ರೂಪಾಯಿಗಳನ್ನು ಬಾಚಿಕೊಂಡು ಮುನ್ನುಗ್ಗುತ್ತಿದೆ. ಜೈಲರ್​ ಚಿತ್ರವು ಒಟ್ಟು 10 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿನಾಯಕನ್, ರಮ್ಯಾ ಕೃಷ್ಣನ್ ಮತ್ತು ವಸಂತ ರವಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ಮೋಹನ್‌ಲಾಲ್, ಸ್ಯಾಂಡಲ್​ವುಡ್​ ನಟ ಶಿವರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ಕೂಡ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲರ್ ನಿರ್ಮಾಪಕರಿಂದ ರಜಿನಿಕಾಂತ್‌ಗೆ ಉಡುಗೊರೆಗಳ ಮಹಾಪೂರ; ಬ್ರಾಂಡ್ ನ್ಯೂ BMW X7 ಕಾರಿನ ಬೆಲೆ ಎಷ್ಟು ಗೊತ್ತಾ?

https://newsfirstlive.com/wp-content/uploads/2023/09/rajinikath-2.jpg

Load More