newsfirstkannada.com

ರಜನಿ​ ಹಿಮಾಲಯದ ಭೇಟಿ ರಹಸ್ಯವೇನು.. ತಲೈವಾಗೆ ಸೂಪರ್​ ಶಕ್ತಿ ಕೊಡ್ತಿದ್ಯಾ ಬಾಬಾ ಕೊಟ್ಟ ಆ ಬೇರು?

Share :

04-09-2023

  ತಲೈವಾಗೆ ಸೂಪರ್​ ಶಕ್ತಿ ಕೊಡ್ತಿದ್ಯಾ ಬಾಬಾ ಕೊಟ್ಟ ಆ ಬೇರು?

  ರಜನಿಕಾಂತ್​ ಹಿಮಾಲಯದ ಭೇಟಿ ಹಿಂದಿನ ರಹಸ್ಯ ಏನು..?

  ಆ ಬೇರಿನಿಂದಲೇ ಸೂಪರ್​ಸ್ಟಾರ್​ ಇಷ್ಟೊಂದು ಪವರ್​ಫುಲ್

ಸೂಪರ್ ​ಸ್ಟಾರ್​ ರಜನಿಕಾಂತ್​ಗೆ 72 ವರ್ಷ ವಯಸ್ಸು. ಈ ಹಿರಿ ವಯಸ್ಸಿನಲ್ಲೂ ಒಳ್ಳೆ 20-30 ವರ್ಷದ ಹೀರೋ ಥರಾ ಓಡಾಡ್ತಾರೆ, ಸಿನಿಮಾಗಳನ್ನ ಮಾಡುತ್ತಾರೆ. ಈವರೆಗೆ ಆಯಾಸ ಆಗಲ್ವಾ ಅಂತ ಪ್ರತಿಯೊಬ್ಬರಿಗೂ ಅನಿಸುತ್ತೆ. ನಿಜ ಅಲ್ವಾ ಈ ವಯಸ್ಸಿನಲ್ಲೂ ತಲೈವಾಗೆ ಇಷ್ಟೊಂದು ಎನರ್ಜಿ ಹೇಗೆ ಸಾಧ್ಯ? ರಿಟೈರ್ಮೆಂಟ್​ ಏಜ್​ಲ್ಲೂ ಇಷ್ಟೊಂದು ಲವಲವಿಕೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಕಾಡೋದು ಸಹಜ. ಇದಕ್ಕೆ ಉತ್ತರ ರಜನಿ ಬಳಿಯಿರುವ ಆ ಬೇರೆ ಕಾರಣ ಇದೆ. ಈ ಬೇರಿನಿಂದಲೇ ಸೂಪರ್​ಸ್ಟಾರ್​ ಇಷ್ಟೊಂದು ಪವರ್​ಫುಲ್ ಆಗಿದ್ದಾರೆ.

ಸೂಪರ್ ​ಸ್ಟಾರ್​ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ವರ್ಲ್ಡ್​ವೈಡ್​ ಬ್ಲಾಕ್​ಬಸ್ಟರ್​ ಆಗಿದೆ. 625 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದ್ದು, ರಜನಿ ವೃತ್ತಿ ಜೀವನದ ಮತ್ತೊಂದು ಮೈಲಿಗಲ್ಲಾಗಿದೆ. ಕಳೆದ 15 ವರ್ಷದಲ್ಲಿ ತಲೈವಾ ಕಂಡ ಅತಿ ದೊಡ್ಡ ಯಶಸ್ಸು ಇದು ಎನ್ನಲಾಗ್ತಿದ್ದು, ಸ್ವತಃ ರಜನಿಕಾಂತ್ ತುಂಬಾ ಖುಷಿಯಲ್ಲಿದ್ದಾರಂತೆ. ಇನ್ನು, ಬಾಕ್ಸಾಫೀಸ್​ನಲ್ಲೂ ಜೈಲರ್ ಧೂಳೆಬ್ಬಿಸ್ತಿದ್ದು, ಈ ಚಿತ್ರಕ್ಕಾಗಿ ತಲೈವಾಗೆ ಡಬಲ್ ಪೇಮೆಂಟ್​ ಸಿಕ್ಕಿದೆ. ಸಿನಿಮಾಗೂ ಮುಂಚೆ 110 ಕೋಟಿ ಸಂಭಾವನೆ ಪಡೆದಿದ್ದ ಸೂಪರ್​ ಸ್ಟಾರ್​ಗೆ ಈಗ ಎಕ್ಸ್ಟ್ರಾ 100 ಕೋಟಿ ಶೇರ್ ಕೊಟ್ಟಿದ್ದು, ಜೊತೆಗೆ ದುಬಾರಿ ಬಿಎಂಡಬ್ಲ್ಯೂ ಕಾರ್​ ಕೂಡ ಗಿಫ್ಟ್​ ಕೊಡಲಾಗಿದೆ. ರಜನಿ ಜೈಲರ್ ಸಿನಿಮಾ ಮಾಡಿದ್ದು ಆಯ್ತು ಅದಾಗಲೇ ಹೊಸ ಸಿನಿಮಾಗೂ ಸಹಿ ಹಾಕಿದ್ದು ಆಯ್ತು. ಈಗ ಚರ್ಚೆಯಾಗ್ತಿರುವ ವಿಷ್ಯ ಏನಪ್ಪಾ ಅಂದ್ರೆ 72ರ ರಜನಿಕಾಂತ್​​ಗೆ ಇಷ್ಟೊಂದು ಎನರ್ಜಿ ಹೇಗೆ ಸಿಗ್ತಿದೆ ಅಂತ.

ಹೌದು, ರಜನಿ ವಯಸ್ಸಿನ ಬಹುತೇಕ ಆ್ಯಕ್ಟರ್​ಗಳು ಸಿನಿಮಾ ಮಾಡೋದನ್ನ ನಿಲ್ಲಿಸಿ ರಿಟೈರ್​ಮೆಂಟ್​ ಲೈಫ್​ ಲೀಡ್ ಮಾಡ್ತಾ ಇದ್ದಾರೆ. ಇನ್ನು ಕೆಲವರು ಚಿತ್ರರಂಗದಲ್ಲಿ ಇದ್ದರೂ ಸಣ್ಣಪುಟ್ಟ ಪಾತ್ರಗಳಿಗೆ ಸೀಮತವಾಗಿದ್ದಾರೆ. ಆದರೆ ತಲೈವಾ ಮಾತ್ರ ಫುಲ್​ ಫ್ಲೆಡ್ಜ್​ ಹೀರೋ ಆಗಿ ಮೋಡಿ ಮಾಡ್ತಾ ಇದ್ದಾರೆ. 60-70 ದಿನ ಶೂಟಿಂಗ್​ನಲ್ಲಿ ಭಾಗವಹಿಸ್ತಾರೆ. ಹೊರ ರಾಜ್ಯ, ಹೊರದೇಶಗಳಿಗೂ ಆರಾಮಾಗಿ ಹೋಗಿ ಬರ್ತಾರೆ. ಈಗ್ಲೂ ಆ್ಯಕ್ಷನ್​ ಸೀನ್​ಗಳಲ್ಲಿ ಭಾಗವಹಿಸ್ತಾರೆ. ಡ್ಯಾನ್ಸ್​ ಮಾಡ್ತಾರೆ. ಅಷ್ಟೇ ಯಾಕೆ ಜೈಲರ್ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಬರೋಬ್ಬರಿ 1 ಗಂಟೆ 10 ನಿಮಿಷ ನಿಂತ್ಕೊಂಡು ಮಾತಾಡಿದ್ದಾರೆ. ಇದುವರೆಗೂ ಯಾವುದೇ ಇವೆಂಟ್​ನಲ್ಲಿ ಹೆಚ್ಚು ಕಡಿಮೆ ಅಂದ್ರು ಅರ್ಧ ಗಂಟೆ ನಿಂತ್ಕೊಂಡು ಮಾತಾಡಿರಬಹುದು. ಆದರೆ ಈ ವಯಸ್ಸಿನಲ್ಲಿ ಒಂದು ಗಂಟೆಗೂ ಅಧಿಕ ಸಮಯ ನಿಂತಿದ್ದು ನಿಜಕ್ಕೂ ಅಚ್ಚರಿಯಾಗಿದೆ.

ರಜನಿಕಾಂತ್​ ಆಧ್ಯಾತ್ಮ ಜೀವಿ. ಗಂಟೆ ಗಟ್ಟಲೇ ಧ್ಯಾನ ಮಾಡ್ತಾರೆ. ಯೋಗ ಮಾಡ್ತಾರೆ. ಕೆಟ್ಟ ಚಟಗಳಿಂದ ದೂರವಿರುವ ತಲೈವಾ ಆಧ್ಯಾತ್ಮ ಜೀವನ ನಡೆಸ್ತಾರೆ. ಹಾಗಾಗಿಯೇ ಅವ್ರು ಈ ವಯಸ್ಸಿನಲ್ಲೂ ಇಷ್ಟೊಂದು ಆರೋಗ್ಯವಾಗಿದ್ದಾರೆ ಎನ್ನಲಾಗುತ್ತೆ. ಇನ್ನು ರಜನಿ ಆಗಾಗ ಹಿಮಾಯಲಕ್ಕೆ ಹೋಗಿಬರೋದು ಗೊತ್ತಿರುವ ವಿಷ್ಯನೇ. ಪ್ರತಿ ಸಿನಿಮಾ ಮುಗಿದ ಮೇಲೆ ಹಿಮಾಲಯಕ್ಕೆ ಭೇಟಿ ನೀಡುವ ರಜನಿ ಒಂದಷ್ಟು ದಿನ ಅಲ್ಲೇ ಉಳಿದುಕೊಂಡು ಮಹಾವತಾರ ಬಾಬಾಜಿ ದರ್ಶನ ಪಡೆದು ಬರ್ತಾರೆ. ಇದು ರಜನಿಯ ಶಕ್ತಿಯ ಗುಟ್ಟು ಎಂದೇ ನಂಬಲಾಗಿದೆ. ಆದರೆ ಹಿಮಾಲಯಕ್ಕೆ ಹೋಗಿ ಬರುವ ರಜನಿ, ಬರೀ ಬಾಬಾಜಿ ದರ್ಶನ ಪಡೆದು ಬರುವುದಿಲ್ಲ ಜೊತೆಗೆ ಅಲ್ಲಿನ ಸಾಧುಸಂತರ ಬಳಿ ಸಿಗುವ ಬೇರುಗಳನ್ನ ಪಡೆದು ಬರ್ತಾರಂತೆ. ಈ ಬೇರುಗಳನ್ನ ಸೇವಿಸುವುದರಿಂದಲೇ ತಲೈವಾ ಇಷ್ಟೊಂದು ಶಕ್ತಿಶಾಲಿಯಾಗಿ ಹಾಗೂ ಆರೋಗ್ಯವಾಗಿದ್ದಾರಂತೆ.

ಹಿಮಾಲಯದಲ್ಲಿರುವ ಸಾಧು ಸಂತರು ಊಟ ಮಾಡದೇ ನೀರು ಕುಡಿಯದೇ ನೂರಾರು ವರ್ಷಗಳು ಬದುಕ್ತಾರೆ ಅಂತ ಕೇಳಿದ್ದೀವಿ. ಬರೀ ಗಾಳಿ ಸೇವನೆಯಿಂದಲೇ ಜೀವಿಸುವ ಇಂಥಾ ಸಂತರ ಬಳಿ ರಜನಿ ಬೇರುಗಳನ್ನ ತರ್ತಾರಂತೆ. ಈ ಬೇರುಗಳ ರಸ ಸೇವಿಸುವುದರಿಂದ ಧೈಹಿಕವಾಗಿ ಮಾನಸಿಕವಾಗಿ ಶಕ್ತಿಶಾಲಿಯಾಗಿರಲು, ಆರೋಗ್ಯವಾಗಿರಲು ಸಾಧ್ಯವಾಗುತ್ತಿದೆಯಂತೆ. ಇದರ ಪರಿಣಾಮವೇ ತಲೈವಾ 72ರ ಹರೆಯದಲ್ಲೂ 20ರ ಹುಡುಗನಂತೆ ಆ್ಯಕ್ಟಿವ್​ ಆಗಿದ್ದಾರೆ ಎನ್ನಲಾಗುತ್ತಿದೆ. ರಜನಿಯ ಆಪ್ತಮಿತ್ರನೇ ಇಂಥಹದೊಂದು ಮಾಹಿತಿ ಕೊಟ್ಟಿರೋದ್ರಿಂದ ಈ ಅಚ್ಚರಿ ವಿಷಯ ಈಗ ಭಾರಿ ಚರ್ಚೆಯಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಜನಿ​ ಹಿಮಾಲಯದ ಭೇಟಿ ರಹಸ್ಯವೇನು.. ತಲೈವಾಗೆ ಸೂಪರ್​ ಶಕ್ತಿ ಕೊಡ್ತಿದ್ಯಾ ಬಾಬಾ ಕೊಟ್ಟ ಆ ಬೇರು?

https://newsfirstlive.com/wp-content/uploads/2023/09/rajini-6.jpg

Load More