ಜಯನಗರ ಬಿಎಂಟಿಸಿ ಡಿಪೋಗೆ ದಿಢೀರ್ ಭೇಟಿ ಕೊಟ್ಟ ಸೂಪರ್ ಸ್ಟಾರ್
ಸೂಪರ್ ಸ್ಟಾರ್ ‘ಭಾಷಾ’ನನ್ನು ನೋಡಿ ಕಾಲಿಗೆ ಬಿದ್ದ ಅಭಿಮಾನಿಗಳು
ಜಯನಗರ ಡಿಪೋದಲ್ಲಿ ಕಂಡಕ್ಟರ್ ಆಗಿದ್ದ ದಿನಗಳನ್ನ ರಜನಿ ಮರೆತೇ ಇಲ್ಲ
ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರು ಇವತ್ತು ಸಡನ್ ವಿಸಿಟ್ ಕೊಟ್ಟು ನಮ್ಮ ಬೆಂಗಳೂರಿನ ಜನರಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಜಯನಗರದ ಬಿಎಂಟಿಸಿ ಬಸ್ ಡಿಪೋದಲ್ಲಿ ರಜನಿಕಾಂತ್ ಅವರನ್ನು ನೋಡಿದ ಬಿಎಂಟಿಸಿ ಸಿಬ್ಬಂದಿಗಳಂತೂ ಶಾಕ್ ಆಗಿದ್ದರು.
ಸೂಪರ್ ಸ್ಟಾರ್ ಆಗುವುದಕ್ಕೂ ಮುಂಚೆ ನಟ ರಜನಿಕಾಂತ್ ಅವರು ಸಾಕಷ್ಟು ವರ್ಷಗಳ ಕಾಲ ಬೆಂಗಳೂರಿನಲ್ಲೇ ವಾಸವಾಗಿದ್ದರು. ಚಿತ್ರರಂಗಕ್ಕೆ ಬರೋ ಮುನ್ನ ರಜನಿಕಾಂತ್ ಜಯನಗರದ ಇದೇ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ತಾವು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಸರ್ಪ್ರೈಸ್ ಭೇಟಿ ಕೊಟ್ಟಿದ್ದಾರೆ. ಡಿಪೋಗೆ ಭೇಟಿ ಕೊಡುವುದರ ಜೊತೆಗೆ ಅಲ್ಲಿನ ಬಿಎಂಟಿಸಿ ಕಂಡಕ್ಟರ್ ಹಾಗೂ ಡ್ರೈವರ್ಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಸೂಪರ್ ಸ್ಟಾರ್ ರಜನಿಕಾಂತ್ ಬಿಎಂಟಿಸಿ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ರಜಿನಿಕಾಂತ್ ಸರ್ಪ್ರೈಸ್ ವಿಸಿಟ್, ಸ್ಥಳದಲ್ಲಿದ್ದವ್ರ ರಿಯಾಕ್ಷನ್..@rajinikanth
#Rajinikanth #BMTC #RajinikanthFans #Bangalore #NewsFirstKannada pic.twitter.com/1XLSANfeG5
— NewsFirst Kannada (@NewsFirstKan) August 29, 2023
ಇದನ್ನು ಓದಿ: VIDEO: ರಾಯರಮಠದಲ್ಲೂ ರಜನಿಕಾಂತ್; ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕೋವಾಗ ‘ಕಬಾಲಿ’ ಸ್ಟೈಲ್ ಹೇಗಿದೆ ನೋಡಿ
ಏಕಾಏಕಿ ಭೇಟಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ನೋಡಿದ ಸಿಬ್ಬಂದಿಗಳು ಅಚ್ಚರಿಗೊಂಡಿದ್ದರು. ಈ ಸಂದರ್ಭದಲ್ಲಿ ರಜನಿಕಾಂತ್ ಆಪ್ತ ಗೆಳೆಯ ರಾಜ್ ಬಹದ್ದೂರ್ ಅವರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಆಗ ಕಾರಿನಿಂದ ದಿಢೀರನೇ ರಜನಿಕಾಂತ್ ಅವರು ಇಳಿದರು. ಅವರನ್ನು ನೋಡ ನೋಡುತ್ತಲೆ ಶಾಕ್ ಆಯ್ತು. ಬಳಿಕ ಓಡಿ ಹೋಗಿ ಅವರನ್ನು ಮಾತನಾಡಿಸಿದೆ. ನನಗಂತೂ ತುಂಬಾ ಖುಷಿ ಆಯ್ತು. ಅವರನ್ನು ನೋಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ತುಂಬಾ ಸೌಮ್ಯ ಸ್ವಭಾವದಿಂದ ನಮ್ಮ ಜೊತೆ ಮಾತನಾಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಜನರ ಜೊತೆ ಸಮಾಧಾನದಿಂದ ಮಾತಾಡಿ ಖುಷಿ ಪಟ್ಟರು. ಜೊತೆಗೆ ಈ ಹಿಂದೆ ಇದ್ದ ಡಿಪೋ ಈಗಲೂ ಸಹ ಹಾಗೇ ಇದೆ ಬದಲಾವಣೆಯಾಗಿಲ್ಲ ಎಂದರು. ಈ ಜನ್ಮದಲ್ಲಿ ನಾನು ರಜನಿಕಾಂತ್ ಅವರನ್ನು ನೋಡುತ್ತೇನೆ ಅಂತಾ ಅಂದುಕೊಂಡಿರಲಿಲ್ಲ ಎಂದು ತಮ್ಮ ಖುಷಿಯನ್ನು ಮಾತಿನ ಮೂಲಕ ವ್ಯಕ್ತಪಡಿಸಿದ್ದಾರೆ.
ಜಯನಗರದ ಬಸ್ ಡಿಪೋಗೆ ಭೇಟಿ ಕೊಟ್ಟ ನಟ ರಜನಿಕಾಂತ್ ಅವರು ಬಿಎಂಟಿಸಿ ಸಿಬ್ಬಂದಿ ಜೊತೆ ಖುಷಿಯಾಗಿ ಮಾತನಾಡಿದ್ದಾರೆ. ಬಳಿಕ ಚಾಮರಾಜಪೇಟೆ ರಾಯರ ಮಠಕ್ಕೆ ಭೇಟಿ ಕೊಟ್ಟಿದ್ದ ರಜನಿಕಾಂತ್ ಅವರು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ