/newsfirstlive-kannada/media/post_attachments/wp-content/uploads/2024/11/UI-MAX.jpg)
ಕನ್ನಡ ಸಿನಿಮಾ ಪ್ರೇಮಿಗಳಿಗೆ ಡಿಸೆಂಬರ್ ತಿಂಗಳು ಹಬ್ಬದೂಟ ಉಣಿಸುವುದಂತೂ ಪಕ್ಕಾ ಆಗಿದೆ. ಈಗಾಲೇ ಡಿಸೆಂಬರ್ 25 ರಂದು ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ತೆರೆಗೆ ಬರಲಿದ್ದು. ಕಿಚ್ಚನ ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ರಸದೌತನ ನೀಡಿದಂತೆ ಆಗಿದೆ.
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ರಂದು ರಿಲೀಸ್​ ಆಗುತ್ತಿದೆ. ‘ವಿಕ್ರಾಂತ್ ರೋಣಾ’ ಸಿನಿಮಾದ ಬಳಿಕ ಸುದೀಪ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಅವರ ಅಭಿಮಾನಿಗಳಲ್ಲಿ ‘ಮ್ಯಾಕ್ಸ್’ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
ಇನ್ನು, ಕಿಚ್ಚ ಸುದೀಪ್​ ಅಭಿನಯದ ಮ್ಯಾಕ್ಸ್ ಪಕ್ಕಾ ಮಾಸ್ ಆಕ್ಷನ್ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ಥಾನು, ವಿ ಕ್ರಿಯೇಷನ್ಸ್ ಬ್ಯಾನರ್ ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
ಇದರ ಬೆನ್ನಲ್ಲೇ ಈಗ ಸೂಪರ್​ಸ್ಟಾರ್ ಉಪೇಂದ್ರ ಅವರು ಕೂಡ ಹೊಸ ಸುದ್ದಿ ನೀಡುವ ಮೂಲಕ ಸಿನಿ ರಸಿಕರಲ್ಲಿ ಕುತೂಹಲದೊಂದಿಗೆ ಸಂಭ್ರಮವನ್ನು ಹುಟ್ಟುವಂತೆ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಭಿಮಾನಿಗಳು ರಿಲೀಸ್ ಡೇಟ್​ಗಾಗಿ ತುದಿಗಾಲಲ್ಲಿ ಕಾಯುತ್ತಿದ್ದ ಸಿನಿಮಾ ಅಂದ್ರೆ ಅದು ಉಪೇಂದ್ರ ಅಭಿನಯದ ಯುಐ ಸಿನಿಮಾ. ಸದ್ಯ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಈ ತೀವ್ರ ನಿರೀಕ್ಷೆಗೆ ತೆರೆ ಎಳೆದಿದ್ದಾರೆ. ಅವರು ಕೂಡ ಡಿಸೆಂಬರ್​ನಲ್ಲಿಯ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 12ಕ್ಕೆ ರಜಿನಿಕಾಂತ್​ಗೆ 74ನೇ ಹುಟ್ಟುಹಬ್ಬದ ಸಂಭ್ರಮ; ಜೈಲರ್ ಟೀಂ ಕೊಡಲಿರುವ ಗಿಫ್ಟ್ ಏನು ಗೊತ್ತಾ?
ಹೌದು, ಉಪೇಂದ್ರ ನಿರ್ದೇಶಿಸಿ ನಟಿಸಿದ ಸಿನಿಮಾ ಯುಐ ಡಿಸೆಂಬರ್​ 20 ರಂದು ಬಿಡುಗಡೆಯಾಗಲು ಮುಹೂರ್ತ ನಿಗದಿಯಾಗಿದೆ. ಇದು ಟೀಸರ್ ಅಲ್ಲ, ಟ್ರೈಲರ್ ಅಲ್ಲ ಇದು ವಾರ್ನರ್ ಅನ್ನೋ ಮೂಲಕ ಮತ್ತೊಂದು ಹುಳ ಬಿಟ್ಟಿದ್ದಾರೆ ಉಪ್ಪಿ. ಒಟ್ಟಿನಲ್ಲಿ ಡಿಸೆಂಬರ್ 20 ರಂದು ಉಪ್ಪಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಯುಐ ರಿಲೀಸ್ ಆಗುತ್ತಿದ್ದು ಮತ್ತೊಂದೆಡೆ ಐದೇ ದಿನದ ಗ್ಯಾಪ್​ನಲ್ಲಿ ಸುದೀಪ್ ನಟನೆಯ ಸಿನಿಮಾ ಮ್ಯಾಕ್ಸ್ ಕೂಡ ರಿಲೀಸ್ ಆಗುತ್ತಿದೆ. ಇದು ಸಿನಿ ರಸಿಕರಿಗೆ ಹಬ್ಬದೂಟ ಉಣಬಡಿಸೋದಂತೂ ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us