ಗದಗದಲ್ಲಿ ಅಪರೂಪದಲ್ಲೇ ಅಪರೂಪದ ಪ್ರಸಂಗ
ಮಧ್ಯ ರಸ್ತೆಯಲ್ಲಿ ಇಳಿಸಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯರು
ಮಹಿಳೆಯರ ಹೋರಾಟಕ್ಕೆ ‘ನಿವೃತ್ತ ಯೋಧರ ಸಂಘ ಸಾಥ್’
ಕಂಡಕ್ಟರ್ ಬಸ್ಸಿನಲ್ಲಿ ಮದ್ಯ ತರಲು ಅವಕಾಶ ಮಾಡಿಕೊಡಲಿಲ್ಲ ಎಂದು ಸಿಟ್ಟಿಗೆದ್ದ ಮಹಿಳೆಯರು ಠಾಣೆ ಮೆಟ್ಟಿಲೇರಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಮಾತ್ರವಲ್ಲ, ಗದಗ ಟೌನ್ ಠಾಣೆಯಲ್ಲಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ.
ಅಷ್ಟಕ್ಕೂ ಆಗಿದ್ದೇನು..?
ಗದಗ ಮೂಲದ ಇಬ್ಬರು ಮಹಿಳೆಯರು ಹುಬ್ಬಳ್ಳಿಗೆ ಬಂದಿದ್ದರು. ಇಲ್ಲಿನ ಆರ್ಮಿ ಕ್ಯಾಂಟೀನ್ನಿಂದ ಮೂರು ಮದ್ಯದ ಬಾಟಲಿಯನ್ನು ಬಸ್ ಮೂಲಕ ಮನೆಗೆ ತರುತ್ತಿದ್ದರು. ಇದು ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಕಣ್ಣಿಗೆ ಬಿದ್ದಿದೆ.
ಕೂಡಲೇ ವಿಚಾರಿಸಿದ ಬಸ್ ಚಾಲಕ, ಹಾಗೆಲ್ಲ ಬಸ್ಸಿನಲ್ಲಿ ಮದ್ಯವನ್ನು ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಈ ವೇಳೆ ವಾಗ್ವಾದ ನಡೆದಿದೆ. ಕೊನೆಗೆ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಆ ಮಹಿಳೆಯರನ್ನು ಮಧ್ಯ ರಸ್ತೆಯಲ್ಲಿ ಇಳಿಸಿದ್ದಾರೆ. ಇದರಿಂದ ಬೇಸರಗೊಂಡಿದ್ದ ಮಹಿಳೆಯರು ಠಾಣೆಗೆ ಬಂದು ಕಂಡಕ್ಟರ್ ಹಾಗೂ ಬಸ್ ಡ್ರೈವರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್ನು ಮಹಿಳೆಯರಿಗೆ ‘ನಿವೃತ್ತ ಯೋಧರ ಸಂಘ ಸಾಥ್’ ನೀಡಿದೆ. ನಾವು ಈ ಹಿಂದೆ ಹಲವು ಬಾರಿ ಮದ್ಯ ತೆಗೆದುಕೊಂಡು ಬಂದಿದ್ದೇವೆ. ಅವತ್ತು ಇಲ್ಲದ ರೂಲ್ಸ್ ಇವತ್ತು ಯಾಕೆ? ಹಾಗಾದರೆ ಮದ್ಯ ತರಲು ನಮಗೆ ಯಾವುದಾದರೂ ದಾರಿ ತೋರಿಸಲಿ. ಕುಡಿದು ಬಂದವರಿಗೆ ಅವಕಾಶ ಕೊಡ್ತೀರಿ. ಆದ್ರೆ ಮನೆಗೆ ಮದ್ಯದ ಬಾಟಲ್ ತರಲು ಅವಕಾಶ ಯಾಕಿಲ್ಲ ಎಂದು ಮಹಿಳೆಯರು ಪ್ರಶ್ನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ