ಉತ್ತರ ಭಾರತದ ಪ್ರವಾಸದಲ್ಲಿರೋ ಸೂಪರ್ ಸ್ಟಾರ್ ರಜಿನಿ
ಯೋಗಿ ಆದಿತ್ಯನಾಥ್‌ಗಿಂತ ರಜಿನಿಕಾಂತ್ 21 ವರ್ಷ ಹಿರಿಯರು
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಜೈಲರ್ ಸಿನಿಮಾದ ಯಶಸ್ಸಿನ ಅಲೆಯಲ್ಲಿದ್ದು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸಿಎಂ ಯೋಗಿ ಆದಿತ್ಯನಾಥ್ರನ್ನು ಭೇಟಿ ಮಾಡಿ ಅವರ ಕಾಲಿಗೆ ನಮಸ್ಕಾರ ಮಾಡಿದ್ದಾರೆ.
ರಜಿನಿಕಾಂತ್ ಅವರು ಬಾಬಾ ಗುಹೆ, ಬದ್ರಿನಾಥ್, ಹೃಷಿಕೇಶ, ಇನ್ನಿತರೆ ಧಾರ್ಮಿಕ ಸ್ಥಳಗಳ ದರ್ಶನ ಮುಗಿಸಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್ರನ್ನು ಭೇಟಿಯಾದ ರಜಿನಿಕಾಂತ್, ಅವರ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರಜಿನಿಕಾಂತ್ ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯವನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಲಕ್ನೋದ ಸ್ಪೆಷಲ್ ಸ್ಕ್ರೀನ್ನಲ್ಲಿ ಜೈಲರ್ ಸಿನಿಮಾವನ್ನು ಉತ್ತರ ಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಜೊತೆ ರಜಿನಿಕಾಂತ್ ಸಿನಿಮಾ ನೋಡಿದ್ದಾರೆ. ಈ ವೇಳೆ ಪತ್ನಿ ಲತಾ ರಜಿನಿಕಾಂತ್ ಕೂಡ ಇದ್ದರು. ಬಳಿಕ ಮಾತನಾಡಿದ ಡಿಸಿಎಂ, ರಜಿನಿಕಾಂತ್ ಆ್ಯಕ್ಟಿಂಗ್ ಸೂಪರ್ ಆಗಿದೆ. ನಾನು ಈ ಮೊದಲು ರಜಿನಿಕಾಂತ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ಆದ್ರೆ ಜೈಲರ್ ಸಿನಿಮಾ ನೋಡಲು ವಿಶೇಷವಾಗಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಸಿನಿಮಾ ಒಳ್ಳೆಯ ಕಥೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. ರಜಿನಿಕಾಂತ್ಅವರು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ರನ್ನೂ ಭೇಟಿಯಾದರು.
ಜೈಲರ್ ಸಿನಿಮಾದ ತಮಿಳು ವರ್ಷನ್ 186.05 ಕೋಟಿ ಗಳಿಸಿದ್ರೆ, ತೆಲುಗಿನಲ್ಲಿ 46.99 ಕೋಟಿ ಗಳಿಸಿದೆ. ಕನ್ನಡ ಹಾಗೂ ಹಿಂದಿ 1.9 ಕೋಟಿ ಗಳಿಸಿದೆ. ನಿನ್ನೆಯವರೆಗೆ ಈ ಸಿನಿಮಾದ ಒಟ್ಟು ಕಲೆಕ್ಷನ್ 470.17 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಜೈಲರ್ ಸಿನಿಮಾ ಮೂಡಿ ಬಂದಿದ್ದು ಅನಿರುದ್ಧ್ ಸಂಗೀತ ನೀಡಿದ್ದಾರೆ. ಇದಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ. ತಮನ್ನಾ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣ, ಸುನೀಲ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ