ನಾಳೆ ಬೆಳಗ್ಗೆ ಡಿ.ಕೆ. ಶಿವಕುಮಾರ್ ಸಿಎಂ ಆದರೆ ಜೆಡಿಎಸ್ ಬೆಂಬಲ!
ನಮ್ಮ ಎಂಎಲ್‌ಎಗಳಿಗೆ ದಿನ ಬೆಳಗಾದ್ರೆ ಪಕ್ಷಕ್ಕೆ ಬನ್ನಿ ಅಂತಿದ್ದಾರೆ
ನನಗೇನೂ ವೈರತ್ವ ಇಲ್ಲ ಬೆಂಬಲ ಕೊಡುತ್ತೇವೆ ಎಂದ ಹೆಚ್‌ಡಿಕೆ
ಬೆೆಂಗಳೂರು: ನಾನೇ ಸಿಎಂ.. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಯ ಬಹಿರಂಗ ಹೇಳಿಕೆಗಳು ಜೋರಾದ ಮೇಲೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಚಿವರು, ಶಾಸಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರು ಸಖತ್ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು ನಾಳೆ ಬೆಳಗ್ಗೆಯೇ ಡಿ.ಕೆ. ಶಿವಕುಮಾರ್ ಸಿಎಂ ಆದರೆ ಜೆಡಿಎಸ್ನ 19 ಶಾಸಕರೂ ಬೆಂಬಲ ಕೊಡುತ್ತೇವೆ. ಡಿಕೆ ಶಿವಕುಮಾರ್ ಅವರು ಬೇಕಿದ್ರೆ ಸಿಎಂ ಆಗಲಿ. ನಾವೂ ಸಹ ಅವರಿಗೆ ಬೆಂಬಲವನ್ನ ಕೊಡುತ್ತೇವೆ ಎಂದು ಘೋಷಣೆ ಮಾಡಿದರು.
HD Kumaraswamy : ಡಿ.ಕೆ. ಶಿವಕುಮಾರ್ ಸಿಎಂ ಆದರೆ ನಮ್ಮ ಬೆಂಬಲ
ಪ್ರತಿಕ್ಷಣದ ಸುದ್ದಿಗಾಗಿ ನ್ಯೂಸ್ ಫಸ್ಟ್ ಲೈವ್ ಲಿಂಕ್ ಕ್ಲಿಕ್ ಮಾಡಿ
Click Here to Watch NewsFirst Kannada Live Updates
LIVE Link : https://t.co/vIQrSuaVpj@hd_kumaraswamy @siddaramaiah @DKShivakumar @BJP4Karnataka pic.twitter.com/nT3UFrshBe— NewsFirst Kannada (@NewsFirstKan) November 4, 2023
ಸುದ್ದಿಗಾರರೊಂದಿಗೆ ವ್ಯಂಗ್ಯವಾಗೇ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ ಅವರು ನಾನ್ಯಾಕೆ ಅವರಿಗೆ ಅಡ್ಡಿಯಾಗಲಿ. ನಮ್ಮ ಎಂಎಲ್‌ಎಗಳಿಗೆ ದಿನ ಬೆಳಗಾದ್ರೆ ಪಕ್ಷಕ್ಕೆ ಬನ್ನಿ ಅಂತ ಅರ್ಜಿ ಹಾಕಿ ಕರೆಯುತ್ತಿದ್ದಾರೆ. ಯಾಕೆ ಸುಮ್ನೆ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಲು ಕರೆಯುತ್ತಿದ್ದಾರೆ. ನನಗೇನೂ ವೈರತ್ವ ಇಲ್ಲ ನಾವೇ ಡಿ.ಕೆ ಶಿವಕುಮಾರ್ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ