newsfirstkannada.com

ಕರ್ನಾಟಕಕ್ಕೆ ಅತೃಪ್ತಿ, ತಮಿಳುನಾಡಿಗೆ 15 ದಿನ ನೀರು ಹರಿಸುವಂತೆ ಶಿಫಾರಸು; ಸೆ.1ರಂದು ಸುಪ್ರೀಂಕೋರ್ಟ್​ ವಿಚಾರಣೆ

Share :

29-08-2023

    ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು

    ಕರ್ನಾಟಕದ ವಾದ ಒಪ್ಪದ ಕಾವೇರಿ ನಿಯಂತ್ರಣ ಸಮಿತಿ

    ಕಾವೇರಿ ನದಿ ನೀರು ಪ್ರಾಧಿಕಾರದ ಎದುರು ಪ್ರಶ್ನಿಸಲು ನಿರ್ಧಾರ

ಮುಂಗಾರಿನ ಅಭಿಷೇಕದಿಂದ ನಳನಳಿಸ್ಬೇಕಿದ್ದ ಕರ್ನಾಟಕ ಈ ಬಾರಿ, ಮಳೆ ಕಾಣದೇ ಕಳೆ ಕಳೆದ್ಕೊಂಡಿದೆ. ಇಂಥಾ ಹೊತ್ತಲ್ಲೇ ಕಾವೇರಿ ಕೊಳ್ಳದಲ್ಲಿ ನೀರಿನ ಕಿಚ್ಚು ಧಗಧಗಿಸ್ತಿದೆ. ತಮಿಳುನಾಡಿಗೆ ನೀರು ಹರಿಸಬೇಕು ಅನ್ನೋ ಶಿಫಾರಸು ಹೆಗಲೇರಿದೆ. ಹೀಗಾಗಿ ಇವತ್ತು ದೆಹಲಿಯಲ್ಲಿ ನಡೆಯಲಿರೋ ಕಾವೇರಿ ಮೀಟಿಂಗ್ ಹೈವೋಲ್ಟೇಜ್ ಸ್ವರೂಪ ಪಡೆದುಕೊಂಡಿದೆ.

ಕರುನಾಡಲ್ಲಿ ಈ ಬಾರಿ ವರುಣ ಕೈಕೊಟ್ಟಿದ್ದಾನೆ. ಕಾವೇರಿ ಕೊಳ್ಳದ ಜಲಾಶಯಗಳ ಒಡಲು ಬರಿದಾಗಿವೆ. ಮಳೆ ಇಲ್ಲದೇ ಬೆಳೆಗಳು ಒಣಗುತ್ತಿವೆ. ನೀರಿಲ್ಲದಿದ್ರೂ ನೀರು ಕೇಳ್ತಿದೆ ತಮಿಳುನಾಡು. ಕಾವೇರಿ ಜಲಜ್ವಾಲೆ ಭುಗಿಲೆದ್ದಿರುವ ಹೊತ್ತಲ್ಲೇ ಕರ್ನಾಟಕಕ್ಕೆ ಹಿನ್ನಡೆ ಆಗಿದೆ.

ತಮಿಳುನಾಡಿಗೆ 15 ದಿನ ನೀರು ಹರಿಸಲು ಶಿಫಾರಸು

ಕಳೆದ 25ರಂದು ಸುಪ್ರೀಂಕೋರ್ಟ್​​ನಲ್ಲಿ ಕಾವೇರಿದ ವಾದ-ಪ್ರತಿವಾದ ನಡೆದಿತ್ತು. ನೀರು ಬಿಡುವ ಬಗ್ಗೆ ನಿರ್ಧಾರವನ್ನು ಕಾವೇರಿ ಪ್ರಾಧಿಕಾರದ ಹೆಗಲಿಗೆ ಹೊರಿಸಿತ್ತು.. ಅದರಂತೆ ನಿನ್ನೆ ಕಾವೇರಿ ನೀರು ನಿಯಂತ್ರಣಾ ಮಂಡಳಿ ನವದೆಹಲಿಯಲ್ಲಿ ಸಭೆ ನಡೆಸಿತ್ತು. ಎರಡೂ ರಾಜ್ಯಗಳ ವಾದವನ್ನು ಆಲಿಸಿದ ಸಮಿತಿ ತಮಿಳುನಾಡಿಗೆ ಮುಂದಿನ 15 ದಿನ ನೀರು ಹರಿಸುಂತೆ ಶಿಫಾರಸು ಮಾಡಿದೆ.

CWRC ಶಿಫಾರಸನ್ನು ಪ್ರಶ್ನಿಸಲು ಕರ್ನಾಟಕ ಸರ್ಕಾರ ನಿರ್ಧಾರ

ಇಂದಿನಿಂದ ಮುಂದಿನ 15 ದಿನ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ.. ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದಿದೆ. ಆದ್ರೆ, 3 ಸಾವಿರ ಕ್ಯೂಸೆಕ್​ಗೆ ಕಡಿಮೆ ಮಾಡಬೇಕು ಅನ್ನೋದು ಕರ್ನಾಟಕದ ವಾದ, ಸದ್ಯ ಈ ಮನವಿಗೆ ಕಾವೇರಿ ನಿಯಂತ್ರಣ ಸಮಿತಿ ಮಣೆ ಹಾಕಿಲ್ಲ. ಹೀಗಾಗಿ CWRC ಶಿಫಾರಸ್ಸನ್ನ ಕಾವೇರಿ ನದಿ ನೀರು ಪ್ರಾಧಿಕಾರದ ಎದುರು ಪ್ರಶ್ನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸು ಕರ್ನಾಟಕ ಅತೃಪ್ತಿ ತಂದಿದೆ. ಹೀಗಾಗಿ ಇಂದು ನವದೆಹಲಿಯಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರದ ಸಭೆ ನಡೆಯಲಿದ್ದು, ಅಲ್ಲಿ ಪ್ರಶ್ನೆ ಮಾಡಲು ನಿರ್ಧರಿಸಿದೆ.

ವರದಿ ಆಧರಿಸಿ ಸೆ.1ರಂದು ಸುಪ್ರೀಂಕೋರ್ಟ್​ ವಿಚಾರಣೆ

ಪ್ರಾಧಿಕಾರದ ಸಭೆಯಲ್ಲಿ 5 ಸಾವಿರ ಕ್ಯೂಸೆಕ್ ನೀರು ಬಿಡುವ ಬಗ್ಗೆ ರಾಜ್ಯ ಪ್ರಶ್ನಿಸಲಿದೆ. ಪ್ರಾಧಿಕಾರದ ಎದುರು ರಾಜ್ಯ ತನ್ನ ವಾದವನ್ನೂ ಮಂಡಿಸಲಿದೆ. ಸದ್ಯಕ್ಕೆ ನೋಡೋದಾದ್ರೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ಎರಡು ಆಯ್ಕೆಗಳಿವೆ. ಒಂದು ಈಗ ಸಮಿತಿ ನೀಡಿರುವ ಶಿಫಾರಸ್ಸಿಗೆ ಪ್ರಾಧಿಕಾರ ಆದೇಶದ ರೂಪ ಕೊಡಬಹುದು ಅಥವಾ ಈ ಶಿಫಾರಸ್ಸನ್ನ ಒಪ್ಪದೇ ತಡೆ ನೀಡಲೂಬಹುದು. ಹೀಗಾಗಿ ಇಂದು ನಡೆಯಲಿರೋ ಮೀಟಿಂಗ್ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇನ್ನು, ಇಂದಿನ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಪ್ರಾಧಿಕಾರ ಸುಪ್ರೀಂಕೋರ್ಟ್​​ಗೆ ಸಲ್ಲಿಸಲಿದೆ.. ಸೆಪ್ಟೆಂಬರ್ 1ರಂದು ಈ ವರದಿ ಆಧರಿಸಿ ಸುಪ್ರೀಂಕೋರ್ಟ್​ ವಿಚಾರಣೆ ನಡೆಸಲಿದೆ.
ಇನ್ನು, ರೈತರ ಸಮಸ್ಯೆಯನ್ನ, ನೀರಿನ ಕೊರತೆಯ ಬಗ್ಗೆ ಇಂದಿನ ಸಭೆಯಲ್ಲಿ ಪ್ರಸ್ತಾಪ ಮಾಡಲು ಸಿದ್ಧತೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ರೈತರ ಹಿತ ಕಾಯಲು ಸರ್ಕಾರ ಬದ್ಧ ಅಂತಲೂ ಹೇಳಿಕೊಂಡಿದೆ.

ಕೆಆರ್‌ಎಸ್ ನೀರಿನ ಮಟ್ಟ!

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 101.00 ಅಡಿಗಳು
ಒಳ ಹರಿವು – 1,378 ಕ್ಯೂಸೆಕ್
ಹೊರ ಹರಿವು – 2,345 ಕ್ಯೂಸೆಕ್

ಕೆಆರ್​ಎಸ್​ ಜಲಾಶಯದ ಗರಿಷ್ಠ ಮಟ್ಟ – 124.80 ಅಡಿಗಳಿದ್ದು ಇಂದಿನ ಮಟ್ಟ – 101.00 ಅಡಿಗಳಿಗೆ ಕುಸಿದಿದೆ.. ಒಳ ಹರಿವು – 1,378 ಕ್ಯೂಸೆಕ್ ಇದ್ದು, ಹೊರ ಹರಿವು – 2,345 ಕ್ಯೂಸೆಕ್ ಇದೆ.

ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಯಾವಾಗ್ಲೂ ಹಿನ್ನಡೆ ಆಗ್ತಾನೇ ಬಂದಿದೆ.. ಕಾವೇರಿ ನಿಯಂತ್ರಣ ಸಮಿತಿ ಕೂಡ ತಮಿಳುನಾಡಿಗೆ ನೀರು ಬಿಡುವಂತೆ ಶಿಫಾರಸು ಮಾಡಿದೆ.. ಹೀಗಾಗಿ ನಡೆಯಲಿರುವ ಪ್ರಾಧಿಕಾರದ ಸಭೆ ಮಹತ್ವ ಪಡೆದಿದೆ. ಆ ಸಭೆಯಲ್ಲಿ ಇನ್ನೂ ಏನೇನ್ ಆಗುತ್ತೋ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕಕ್ಕೆ ಅತೃಪ್ತಿ, ತಮಿಳುನಾಡಿಗೆ 15 ದಿನ ನೀರು ಹರಿಸುವಂತೆ ಶಿಫಾರಸು; ಸೆ.1ರಂದು ಸುಪ್ರೀಂಕೋರ್ಟ್​ ವಿಚಾರಣೆ

https://newsfirstlive.com/wp-content/uploads/2023/08/krs.jpg

Load More