newsfirstkannada.com

×

ದಲಿತ ವಿದ್ಯಾರ್ಥಿಗೆ IIT ಸೀಟ್ ಕೊಡಿಸಿದ ಸುಪ್ರೀಂಕೋರ್ಟ್‌; ಇವನ ಹೋರಾಟವೇ ಮನ ಮಿಡಿಯುವ ಸ್ಟೋರಿ!

Share :

Published October 1, 2024 at 6:13am

    ಉತ್ತರ ಪ್ರದೇಶದ ಮುಜಫರ್‌ನಗರದ 18 ವರ್ಷದ ದಲಿತ ಹುಡುಗ

    ಆರ್ಟಿಕಲ್ 142ರ ಪ್ರಕಾರ ವಿಶೇಷ ಅಧಿಕಾರ ಬಳಸಿದ ಸುಪ್ರೀಂಕೋರ್ಟ್

    ಐಐಟಿ-ಧನ್​​ಬಾದ್​ನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಸೀಟ್!

ನವದೆಹಲಿ: ಐಐಟಿಯಲ್ಲಿ ಓದಬೇಕು. ಅತ್ಯುನ್ನತ ಅಂಕ ಪಡೆಯೋ ಒಳ್ಳೆಯ ವಿದ್ಯಾರ್ಥಿ ಆಗಬೇಕು. ಕೈ ತುಂಬಾ ಸಂಬಳ ಪಡೀಬೇಕು ಅನ್ನೋದು ಎಷ್ಟೋ ವಿದ್ಯಾರ್ಥಿಗಳ ಆಸೆ ಆಗಿರುತ್ತೆ. ಇದರಲ್ಲಿ ಐಐಟಿ ಪ್ರವೇಶ ಪರೀಕ್ಷೆ ಕ್ಲಿಯರ್ ಮಾಡೋದು ಕೂಡ ಕಷ್ಟದ ಕೆಲಸ. ಇದೆಲ್ಲವನ್ನು ಮಾಡಿದ್ರೂ ಕೂಡ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಕೇವಲ ಐಐಟಿಯ ಶುಲ್ಕ ಪಾವತಿ ಮಾಡೋಕಾಗದೆ ಆ ಆಸೆ ಕೈಚೆಲ್ಲುತ್ತೆ ಅಂದ್ರೆ ನೀವು ನಂಬ್ತೀರಾ? ಹೌದು ಉತ್ತರ ಪ್ರದೇಶದ ಮುಜಫರ್‌ನಗರದ 18 ವರ್ಷದ ದಲಿತ ಹುಡುಗ, ಭಾರತದಲ್ಲಿ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದನ್ನು ತೇರ್ಗಡೆ ಹೊಂದಿದ್ದ. ಆತನಿಗೆ ಐಐಟಿ-ಧನ್​​ಬಾದ್​ನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಸೀಟ್ ಕೂಡ ಸಿಕ್ಕಿತ್ತು.

ಇದನ್ನೂ ಓದಿ: ಸತತ 6ನೇ ಬಾರಿಯೂ ಮದ್ರಾಸ್ IITಗೆ ಅಗ್ರಸ್ಥಾನ.. ಟಾಪ್ 10ರಲ್ಲಿ ಬೆಂಗಳೂರು IIScಗೆ ಎಷ್ಟನೇ ಸ್ಥಾನ? 

ಅತುಲ್ ಕುಮಾರ್.. ನಾವು ಹೇಳುತ್ತಾ ಇರೋ ಈ ವಿದ್ಯಾರ್ಥಿಯ ಬಗ್ಗೆ. ಈ ಅತುಲ್ ಕುಮಾರ್ ಕೇವಲ 17,500 ರೂಪಾಯಿಯನ್ನು ಪಾವತಿ ಮಾಡಿ IIT ಸೀಟ್​ನ ಪಡೆದುಕೊಳ್ಳಬೇಕಿತ್ತು. ಆದ್ರೆ ವಿಧಿಯಾಟ.. ಅತುಲ್​ನ ತಂದೆ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ. ದಿನಕ್ಕೆ 450 ರೂಪಾಯಿ ಸಂಪಾದನೆ ಮಾಡುತ್ತಾ ಇದ್ದಾರೆ. ಅಷ್ಟು ಹಣ ಹೊಂದಿಸೋದು ಅತುಲ್ ಕುಮಾರ್‌ಗೆ ಕಷ್ಟವಾಗಿದೆ.

ಕಳೆದ ಜೂನ್ 24ರ ಸಂಜೆ 5ರವರೆಗೂ IIT ಸೀಟ್ ಪ್ರವೇಶಾತಿ ಫೀಜ್ ಕಟ್ಟೋದಕ್ಕೆ ಡೆಡ್​ಲೈನ್​ ಇರುತ್ತೆ. ಆದ್ರೆ ಆ ಸಮಯ ಮೀರಿದ್ರಿಂದ ಅತುಲ್​ನ ಸೀಟ್ ​ಆತನ ಕೈತಪ್ಪಿದೆ. ವಿಪರ್ಯಾಸ ಅಂದ್ರೆ ಅದೇ ದಿನ ಅಂದ್ರೆ ಜೂನ್ 24ರ ಸಂಜೆ 4.45ರ ವೇಳೆಗೆ ಹೇಗೋ ಬೇರೆಯವರ ಸಹಾಯದಿಂದ ಅತುಲ್ ಅವರ ಕುಟುಂಬ ಆ ಹಣವನ್ನು ಹೊಂದಿಸುತ್ತೆ. ಬಟ್ ಆನ್‌ಲೈನ್‌​ ಪೋರ್ಟಲ್​ಗೆ ಲಾಗಿನ್ ಆಗಿ ಆ ಹಣ ಪಾವತಿ ಮಾಡೋ ಅಷ್ಟರಲ್ಲಿ ಸಮಯ ಮುಗಿದಿರುತ್ತೆ. ಇದಾದ ಮೇಲೆ ಶುರುವಾಗೋದು ಅತುಲ್​ನ ಕಾನೂನು ಹೋರಾಟ.

ಇದನ್ನೂ ಓದಿ: IIT ಬಾಂಬೆಗೆ 315 ಕೋಟಿ ರೂಪಾಯಿ ದೇಣಿಗೆ ಕೊಟ್ಟ ನಂದನ್ ನಿಲೇಕಣಿ; ಉದ್ದೇಶವೇನು? 

IIT ಸೀಟ್ ಮಿಸ್ ಮಾಡಿಕೊಂಡ ಅತುಲ್‌ ಮೊದಲು ಜಾರ್ಖಂಡ್​ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಆ​ ನಂತರ ಮದ್ರಾಸ್ ಹೈಕೋರ್ಟ್‌ನಲ್ಲಿ ನಿರಾಸೆಯಾಗಿದೆ. ಎರಡೂ ಕಡೆ ಪ್ರಯತ್ನಿಸಿದ ನಂತರ ಇವರು ಹೋಗಿದ್ದು ಸುಪ್ರೀಂಕೋರ್ಟ್‌ಗೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ ಚಂದ್ರಚೂಡ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಈ ಕೇಸ್​ನ ವಿಚಾರಣೆ ನಡೆಸಿದೆ. CJI ಕೊಟ್ಟಿರೋದು ಈ ಐತಿಹಾಸಿಕ ತೀರ್ಪು. IIT seat allocation authorityಗೆ ಸರ್ವೋಚ್ಛ ನ್ಯಾಯಾಲಯ ತಾಕೀತು ಮಾಡಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿ, ಅದರಲ್ಲೂ ದಲಿತ ಸಮುದಾಯದ ವಿದ್ಯಾರ್ಥಿ ಹೀಗೆ ಕ್ಷುಲ್ಲಕ ಕಾರಣಗಳಿಗೆ ಅವನ ಭವಿಷ್ಯ ಹಾಳಾಗೋದು ಬೇಡ. ಆರ್ಟಿಕಲ್ 142ರ ಪ್ರಕಾರ ವಿಶೇಷ ಅಧಿಕಾರ ಬಳಸಿ ನಾವು ಒಂದು ನಿರ್ದೇಶನ ನೀಡುತ್ತಾ ಇದ್ದೇವೆ. ಈ ಹುಡುಗನಿಗೆ ಐಐಟಿ- ಧನ್​​ಬಾದ್​ನಲ್ಲಿ ಅಡ್ಮಿಷನ್ ಮಾಡಿಕೊಳ್ಳಿ ಅಂತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ನ್ಯಾಯಪೀಠ ಹೇಳಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಲ್‌ ದಿ ಬೆಸ್ಟ್ ಅಂತ ವಿದ್ಯಾರ್ಥಿಗೆ ಹೇಳಿದ ಕೂಡಲೇ ಅತುಲ್​ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡಿದ್ದಾನೆ. ನೀವು ಕೇವಲ ನನ್ನ ಭವಿಷ್ಯ ಕಾಪಾಡಿಲ್ಲ. ಬಟ್​ ನನ್ನ ಕುಟುಂಬವನ್ನು ಕಾಪಾಡಿದ್ರಿ ಅಂತ ಹೇಳಿದ್ದಾನೆ.

ಅನೇಕ ಕೇಸ್​ಗಳಲ್ಲಿ ಮಾನವೀಯತೆಯನ್ನು ಎತ್ತಿಹಿಡಿದಿರುವ ಸಿಜೆಐ ಚಂದ್ರಚೂಡ್​ರವರು ಮತ್ತೊಮ್ಮೆ ತಮ್ಮದು ಮಾತೃ ಹೃದಯ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಲಿತ ವಿದ್ಯಾರ್ಥಿಗೆ IIT ಸೀಟ್ ಕೊಡಿಸಿದ ಸುಪ್ರೀಂಕೋರ್ಟ್‌; ಇವನ ಹೋರಾಟವೇ ಮನ ಮಿಡಿಯುವ ಸ್ಟೋರಿ!

https://newsfirstlive.com/wp-content/uploads/2024/09/Atul-Kumar-IIT-Dhanbad.jpg

Load More