newsfirstkannada.com

ವಿಷಮ ಸ್ಥಿತಿಗೆ ತಲುಪಿದ ದೆಹಲಿ.. 4 ರಾಜ್ಯಗಳಿಗೆ ಸುಪ್ರೀಂ ಖಡಕ್‌ ಸೂಚನೆ; ಹೇಳಿದ್ದೇನು?

Share :

07-11-2023

  ದೆಹಲಿ ವಾಯುಮಾಲಿನ್ಯ ಗುಣಮಟ್ಟ ಭಾರೀ ಪ್ರಮಾಣದಲ್ಲಿ ಕುಸಿತ

  ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶಕ್ಕೆ ಮಹತ್ವದ ಸೂಚನೆ

  ದೆಹಲಿ ವಾಯುಮಾಲಿನ್ಯಕ್ಕೆ ಕಾರಣವಾದ ಕಾರ್ಯಕ್ಕೆ ಕೂಡಲೇ ಬ್ರೇಕ್ ಹಾಕಿ

ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಅಪಾಯದ ಮಟ್ಟ ತಲುಪುತ್ತಿದೆ. ವಾತಾವರಣ ವಿಷಮ ಸ್ಥಿತಿಯನ್ನು ತಲುಪಿದ್ದು, ಸದ್ಯ ನಾಗರಿಕರು ಉಸಿರಾಡೋದು ಕಷ್ಟಕರವಾಗಿದೆ. ವಾಯು ಗುಣಮಟ್ಟ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಕುಸಿದಿದ್ದು ಸುಪ್ರೀಂಕೋರ್ಟ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ದೆಹಲಿಯ ವಿಷಮ ಪರಿಸ್ಥಿತಿ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶಕ್ಕೆ ಮಹತ್ವದ ಸೂಚನೆ ನೀಡಿದೆ. ದೆಹಲಿ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಈ ಕೂಡಲೇ ಒಣ ಹುಲ್ಲುಗಳಿಗೆ ಬೆಂಕಿ ಹಚ್ಚುವುದನ್ನ ನಿಲ್ಲಿಸಿ ಎಂದು ನಿರ್ದೇಶನ ನೀಡಿದೆ.

ದೆಹಲಿ ಸುತ್ತಲಿನ ರಾಜ್ಯಗಳ ರೈತರು ಭಾರೀ ಪ್ರಮಾಣದಲ್ಲಿ ಒಣ ಹುಲ್ಲುಗಳನ್ನ ಸುಡುತ್ತಾರೆ. ಇದು ದೆಹಲಿಯ ವಾಯುಮಾಲಿನ್ಯಕ್ಕೆ ಪ್ರಮುಖವಾದ ಕಾರಣವಾಗಿದೆ. ಅಕ್ಕಪಕ್ಕ ರಾಜ್ಯದ ರೈತರು ಸುಡುವ ಒಣ ಹುಲ್ಲಿನ ಹೊಗೆ ದೆಹಲಿಯನ್ನು ಆವರಿಸುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶಕ್ಕೆ ತಕ್ಷಣವೇ ರೈತರು ಒಣಹುಲ್ಲು ಸುಡುವುದನ್ನ ನಿಲ್ಲಿಸಬೇಕು. ನಾಳೆಯೇ ಸರ್ಕಾರದ ಉನ್ನತ ಅಧಿಕಾರಿಗಳು, ಪೊಲೀಸರು ಈ ಬಗ್ಗೆ ಸಭೆ ಕಠಿಣ ನಿರ್ಧಾರಗಳನ್ನ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ದೆಹಲಿಯಲ್ಲಿ ಸದ್ಯ ವಾಯು ಗುಣಮಟ್ಟದ ಸೂಚ್ಯಂಕ 400-500 ಕ್ಕೂ ಮೀರಿದ್ದು, ಶಾಲೆ-ಕಾಲೇಜುಗಳನ್ನೇ ಬಂದ್ ಮಾಡಲಾಗಿದೆ. ಕಟ್ಟಡ ಕಾಮಗಾರಿ ಬಂದ್ ಆಗಿದ್ದು, ಹಲವಾರು ಕಂಪನಿಗಳು ತನ್ನ ಸಿಬ್ಬಂದಿಗಳಿಗೆ ವರ್ಕ್‌ ಫ್ರಂ ಹೋಮ್ ನೀಡಿದೆ. ವಾಯುಮಾಲಿನ್ಯವನ್ನ ನಿಯಂತ್ರಿಸಲು ಸಮ-ಬೆಸ ಸಂಖ್ಯೆ ವಾಹನಗಳ ನೀತಿಯನ್ನು ಜಾರಿಗೆ ತರಲಾಗಿದೆ. ಇಷ್ಟಾದ್ರೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಅಕ್ಕಪಕ್ಕದ ರಾಜ್ಯಗಳ ಸರ್ಕಾರಗಳು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಷಮ ಸ್ಥಿತಿಗೆ ತಲುಪಿದ ದೆಹಲಿ.. 4 ರಾಜ್ಯಗಳಿಗೆ ಸುಪ್ರೀಂ ಖಡಕ್‌ ಸೂಚನೆ; ಹೇಳಿದ್ದೇನು?

https://newsfirstlive.com/wp-content/uploads/2023/11/Delhi-Supreme-Court.jpg

Load More