newsfirstkannada.com

ಸುಪ್ರೀಂ ಕೋರ್ಟ್​ನಿಂದ ಕೈದಿಗಳಿಗೆ ಗುಡ್​ನ್ಯೂಸ್.. 2 ತಿಂಗಳಲ್ಲಿ ಬಿಡುಗಡೆ ಭಾಗ್ಯ

Share :

Published August 24, 2024 at 8:39pm

Update August 24, 2024 at 8:41pm

    ಜೈಲಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ರಿಲೀಸ್ ಆಗೋದು ಹೇಗೆ?

    ಸೆಕ್ಷನ್ 479 ಪೂರ್ವಾನ್ವಯ ಆಗುವಂತೆ ಸುಪ್ರೀಂ ಕೋರ್ಟ್ ಜಾರಿ

    ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳು ರಿಲೀಸ್ ಆಗ್ತಾರಾ..?

ನವದೆಹಲಿ: ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಸುಪ್ರೀಂ ಕೋರ್ಟ್ ಗುಡ್​ನ್ಯೂಸ್ ನೀಡಿದೆ. ಮೊದಲ ಭಾರಿಗೆ ಅಪರಾಧ ಎಸಗಿದಂತ ಕೈದಿಗಳು ಶಿಕ್ಷೆಯ ಪ್ರಮಾಣದ ಮೂರನೇ ಒಂದರಷ್ಟು ಶಿಕ್ಷೆ ಅನುಭವಿಸಿದ್ರೆ, ಅಂತವರನ್ನು ಜಾಮೀನಿನ ಮೇಲೆ ಬಿಡುಗಡೆಗೆ ಕ್ರಮ ಕೈಗೊಳ್ಳಿ ಎಂದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: ರಜನಿಕಾಂತ್​​​ಗೆ ಠಕ್ಕರ್ ಕೊಡ್ತಾರಾ ಉಪೇಂದ್ರ..? ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಪಾತ್ರವೇನು?

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌)ಯ ಸೆಕ್ಷನ್ 479 ಪೂರ್ವಾನ್ವಯ ಆಗುವಂತೆ ಸುಪ್ರೀಂ ಕೋರ್ಟ್ ಜಾರಿ ಮಾಡಿದೆ. ಇದರಿಂದ ಮೊದಲ ಬಾರಿಗೆ ಅಪರಾಧ ಎಸಗಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳನ್ನ ಬಿಡುಗಡೆ ಮಾಡಬಹುದು. ಈಗಾಗಲೇ ಶಿಕ್ಷೆಯ ಪ್ರಮಾಣದ ಮೂರನೇ ಒಂದರಷ್ಟು ಶಿಕ್ಷೆ ಅನುಭವಿಸಿದ್ರೆ, ಜಾಮೀನಿನ ಮೇಲೆ ಬಿಡುಗಡೆಗೆ ಕ್ರಮ ಕೈಗೊಳ್ಳಿ ಎಂದು ದೇಶಾದ್ಯಂತ ಇರುವ ಜೈಲುಗಳ ಸೂಪರಿಂಟೆಂಡ್​ಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್​.. ಆಸ್ತಿ ವಿವರ ಘೋಷಿಸಿಲ್ಲ ಎಂದ್ರೆ ಈ ತಿಂಗಳ ಸಂಬಳ ಕಟ್

ಶಿಕ್ಷೆಯ ಅವಧಿ 3ನೇ ಒಂದರಷ್ಟು ಜೈಲು ಶಿಕ್ಷೆ ಅನುಭವಿಸಿದ್ರೆ, ಈ ದೀಪಾವಳಿಯನ್ನು ಅವರ ಕುಟುಂಬದ ಜೊತೆ ಆಚರಿಸಲಿ. ಮುಂದಿನ 2 ತಿಂಗಳೊಳಗಾಗಿ ಈ ಮಾನದಂಡ ಪೂರೈಸಿದವರ ಬಿಡುಗಡೆಗೆ ಕೋರ್ಟ್​​ಗೆ ಅರ್ಜಿ ಸಲ್ಲಿಸಿ. ಬಳಿಕ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ಈ ವರದಿ ಸಲ್ಲಿಸಿ. ಕೈದಿಗಳು ಯಾವಾಗಲೇ ಆರೆಸ್ಟ್ ಆಗಿರಲಿ, ಯಾವಾಗಲೇ ಜೈಲಿಗೆ ಹೋಗಿರಲಿ ಬಿಎನ್‌ಎಸ್‌ಎಸ್‌ ಸೆಕ್ಷನ್ ಪೂರ್ವಾನ್ವಯವಾಗುವಂತೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠ ಹೇಳಿದೆ.

ಇನ್ನು ಎಎಸ್​ಜಿ ಐಶ್ವರ್ಯ ಭಾಟಿ ಅವರು ಸುಪ್ರೀಂ ಕೋರ್ಟ್​ಗೆ ಈ ಮನವಿಯನ್ನು ಸಲ್ಲಿಸಿದ್ದರು. ಇದನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತ್ತು. ಬಿಎನ್‌ಎಸ್‌ಎಸ್ ಸೆಕ್ಷನ್ 479ರಡಿ ಮಾನದಂಡ ಪೂರೈಸಿದವರ ಬಿಡುಗಡೆ ಜೊತೆಗೆ ಮೊದಲ ಭಾರಿ ಅಪರಾಧಿಗಳಾಗದೇ, ಅರ್ಧಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ಪೂರೈಸಿದ್ದವರ ಬಿಡುಗಡೆಗೂ ಮನವಿ ಮಾಡಿದ್ದರು. ಈ 2 ವರ್ಗದ ವಿಚಾರಣಾಧೀನ ಕೈದಿಗಳ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸ್ಥಿತಿಗತಿ ವರದಿಯನ್ನು 2 ತಿಂಗಳಲ್ಲಿ ಸುಪ್ರೀಂಕೋರ್ಟ್​ಗೆ ಸಲ್ಲಿಸಲು ಎಲ್ಲ ರಾಜ್ಯಗಳಿಗೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ಆಕ್ಟೋಬರ್​ಗೆ ಸುಪ್ರೀಂ ಕೋರ್ಟ್ ಮುಂದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಪ್ರೀಂ ಕೋರ್ಟ್​ನಿಂದ ಕೈದಿಗಳಿಗೆ ಗುಡ್​ನ್ಯೂಸ್.. 2 ತಿಂಗಳಲ್ಲಿ ಬಿಡುಗಡೆ ಭಾಗ್ಯ

https://newsfirstlive.com/wp-content/uploads/2024/08/COURT.jpg

Load More