ವಿವಾಹೇತರ ಮದುವೆಗಳಿಂದ ಹುಟ್ಟಿದ ಮಕ್ಕಳಿಗೂ ಆಸ್ತಿ ಮೇಲೆ ಹಕ್ಕು
ಬದಲಾಗುತ್ತಿರೋ ಸಮಾಜದಲ್ಲಿ ಕಾನೂನು ಸ್ಥಿರವಾಗಿರೋದು ಸೂಕ್ತವಲ್ಲ
ಮುಖ್ಯ ನ್ಯಾಯಮೂರ್ತಿ ಚಂದ್ರಚೂಢ ಅವರ ನೇತೃತ್ವದ ಪೀಠ ತೀರ್ಪು
ನವದೆಹಲಿ: ಇನ್ಮುಂದೆ ದೇಶದಲ್ಲಿ ವಿವಾಹೇತರ ಸಂಬಂಧದಿಂದ ಹುಟ್ಟಿದ ಮಕ್ಕಳು ಪಿತ್ರಾರ್ಜಿತ ಆಸ್ತಿಗೆ ಅರ್ಹರಾಗುತ್ತಾರೆ. ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಯಾರಿಗೆಲ್ಲಾ ಪಾಲಿದೆ ಅನ್ನೋದರ ಬಗ್ಗೆ ಸುಪ್ರೀಂಕೋರ್ಟ್ ಇವತ್ತು ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ ಮಾನ್ಯತೆ ಇಲ್ಲದ ಮದುವೆಗಳಿಂದ ಹುಟ್ಟಿದ ಮಕ್ಕಳಿಗೂ ಪೋಷಕರ ಆಸ್ತಿಯಲ್ಲಿ ಪಾಲಿದೆ ಎಂದು ಸ್ಪಷ್ಟಪಡಿಸಿದೆ.
ಪಿತ್ರಾರ್ಜಿತ ಆಸ್ತಿಯ ಬಗ್ಗೆ 2011ರಲ್ಲಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಬದಲಾಗುತ್ತಿರುವ ಸಮಾಜದಲ್ಲಿ ಕಾನೂನು ಸ್ಥಿರವಾಗಿರೋದು ಸೂಕ್ತವಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಢ ಅವರ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಇನ್ಮುಂದೆ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಮಾನ್ಯತೆ ಇಲ್ಲದ ಮದುವೆಗಳಿಂದ ಹುಟ್ಟಿದ ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಇದೆ. ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯ ಪಾಲುದಾರಿಕೆ ಈ ಹಿಂದೆ ಅಕ್ರಮವಾಗಿದ್ದು, ಇದೀಗ ಸಕ್ರಮವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ