newsfirstkannada.com

ರಾಹುಲ್ ಗಾಂಧಿ ಈಗಾಗಲೇ ಸಂಸತ್​​ನ 122 ದಿನಗಳನ್ನು ಕಳೆದುಕೊಂಡಿದ್ದಾರೆ -ಸುಪ್ರೀಂ ಕೋರ್ಟ್​​ನಲ್ಲಿ ರಾಹುಲ್ ಪರ ವಾದ ಹೇಗಿತ್ತು..?

Share :

21-07-2023

    ಎರಡು ವರ್ಷ ಜೈಲು ಶಿಕ್ಷೆ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ

    ಪೂರ್ಣೇಶ್ ಮೋದಿ, ಗುಜರಾತ್ ಸರ್ಕಾರಕ್ಕೆ ನೋಟಿಸ್

    ಸುಪ್ರೀಂ ಕೋರ್ಟ್​ ರಾಹುಲ್ ಪರ ವಕೀಲರಿಗೆ ಹೇಳಿದ್ದೇನು..?

ನವದೆಹಲಿ: ‘ಮೋದಿ ಉಪನಾಮ’ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ. ತಮಗೆ ನೀಡಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿರುವ ಕೋರ್ಟ್​ ಮುಂದಿನ ವಿಚಾರಣೆಯನ್ನು ಆಗಸ್ಟ್​ 4ಕ್ಕೆ ಮುಂದೂಡಿದೆ.

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ‘ಮೋದಿ ಎಂಬ ಉಪನಾಮ ಹೊಂದಿರೋರೆಲ್ಲ ಕಳ್ಳರೇ’ ಎಂದಿದ್ದರು. ರಾಹುಲ್ ಈ ಹೇಳಿಕೆ ಪ್ರಶ್ನಿಸಿ ಗುಜರಾತ್​ನ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಧಾವೆ ಹೂಡಲಾಗಿತ್ತು.

ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯವು, ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿತ್ತು. ಈ ಬೆನ್ನಲ್ಲೇ, ರಾಹುಲ್ ಗಾಂಧಿ ತಮ್ಮ ಸಂಸತ್ ಸ್ಥಾನವನ್ನು ಕಳೆದುಕೊಂಡರು. ಕೋರ್ಟ್​​ನ ಈ ತೀರ್ಪನ್ನು ಪ್ರಶ್ನಿಸಿ ರಾಹುಲ್ ಗಾಂಧಿ, ಗುಜರಾತ್​ನ ಹೈಕೋರ್ಟ್ ಮೊರೆ ಹೋಗಿದ್ದರು. ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್​ ವಜಾ ಮಾಡಿ, ಕೆಳ ನ್ಯಾಯಾಲಯದ ಆದೇಶ ಸರಿ ಇದೆ ಎಂದಿತ್ತು. ಹೀಗಾಗಿ ರಾಹುಲ್ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು.

ಇಂದು ರಾಹುಲ್​ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್​ ವಿಚಾರಣೆಯನ್ನು ಆಗಸ್ಟ್​ 04ಕ್ಕೆ ಮುಂದೂಡಿದೆ. ಮಾತ್ರವಲ್ಲ ರಾಹುಲ್ ವಿರುದ್ಧ ಕೇಸ್ ದಾಖಲಿಸಿರುವ ಪೂರ್ಣೇಶ್ ಮೋದಿ ಹಾಗೂ ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಿ 10 ದಿನಗಳಲ್ಲಿ  ಉತ್ತರಿಸುವಂತೆ ಸುಪ್ರೀಂ ಕೋರ್ಟ್​ ಸೂಚಿಸಿದೆ.

ಸುಪ್ರೀಂಕೋರ್ಟ್​ನಲ್ಲಿ ಏನಾಯ್ತು?

ಸುಪ್ರೀಂ ಕೋರ್ಟ್​ನಲ್ಲಿ ರಾಹುಲ್ ಗಾಂಧಿ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಕಕ್ಷಿದಾರ ರಾಹುಲ್​ ಗಾಂಧಿ 122 ದಿನಗಳಿಂದ ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ಈಗಾಗಲೇ ಅವರು ಒಂದು ಸಂಸತ್ ಅಧಿವೇಶನವನ್ನು ಕಳೆದುಕೊಂಡಿದ್ದಾರೆ. ಕೇರಳದ ವಯನಾಡಿನ ಲೋಕಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ‌ ವಿಚಾರಣೆಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಮನವಿ ಮಾಡಿಕೊಂಡರು.

ನ್ಯಾಯಮೂರ್ತಿ ಗವಾಯಿ ಅವರು, ನಾವು ನಿಮ್ಮದಷ್ಟೇ ವಾದ ಕೇಳಿದರೆ ಸೂಕ್ತ ಎನಿಸುವುದಿಲ್ಲ. ಎರಡು ಕಡೆಯಿಂದ ವಾದ-ಪ್ರತಿವಾದ ಕೇಳಬೇಕಾಗಿದೆ. ಇದರಿಂದ ಇನ್ನೊಂದು ಕಡೆಯವರ ವಾದ ಕೇಳಬೇಕಾಗಿದೆ. ಹೀಗಾಗಿ ಆಗಸ್ಟ್​ 4 ರಂದು ಈ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್ ಗಾಂಧಿ ಈಗಾಗಲೇ ಸಂಸತ್​​ನ 122 ದಿನಗಳನ್ನು ಕಳೆದುಕೊಂಡಿದ್ದಾರೆ -ಸುಪ್ರೀಂ ಕೋರ್ಟ್​​ನಲ್ಲಿ ರಾಹುಲ್ ಪರ ವಾದ ಹೇಗಿತ್ತು..?

https://newsfirstlive.com/wp-content/uploads/2023/07/Rahul-Gandhi.jpg

Load More