newsfirstkannada.com

×

ಈ ವಿಡಿಯೋಗಳನ್ನ ಅಪ್ಪಿ, ತಪ್ಪಿಯೂ ನೋಡಬೇಡಿ; ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು

Share :

Published September 23, 2024 at 11:44am

    ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್​ನಿಂದ ತೀರ್ಪು

    ಮದ್ರಾಸ್ ಹೈಕೋರ್ಟ್​​ ಆದೇಶ ರದ್ದು ಮಾಡಿದ ಅಪೇಕ್ಸ್ ಕೋರ್ಟ್

    ಏನಿದು ಪ್ರಕರಣ..? ಕೋರ್ಟ್ ಮೆಟ್ಟಿಲೇರಿದ್ದು ಯಾರು?

ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಫೋಟೋ, ವಿಡಿಯೋ ಡೌನ್‌ಲೋಡ್ ಮಾಡುವುದು, ನೋಡುವುದು ಹಾಗೂ ಹೊಂದಿರುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಈ ಸಂಬಂಧ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇಂತಹ ಫೋಟೋ, ವಿಡಿಯೋವನ್ನು ಹೊಂದಿರುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಂಡಿದ್ದಾನೆ ಎಂದು ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಪ್ರಕರಣವನ್ನು ರದ್ದು ಮಾಡಿತ್ತು. ಡೌನ್​ಲೋಡ್ ಮಾಡಿಕೊಂಡಿದ್ದ ವ್ಯಕ್ತಿ ಬೇರೆಯವರಿಗೆ ಕಳುಹಿಸಿರಲಿಲ್ಲ ಎಂದು ಪೋಕ್ಸ್​ ಪ್ರಕರಣವೆಂದು ಪರಿಗಣಿಸಿರಲಿಲ್ಲ.

ಇದನ್ನೂ ಓದಿ:ಸುಪ್ರೀಂ ಕೋರ್ಟ್​​ಗೆ ಬಿಗ್ ಶಾಕ್ ಕೊಟ್ಟ ಹ್ಯಾಕರ್ಸ್​.. ಎಷ್ಟು ಇರಬೇಡ ಹೇಳಿ!

ಮದ್ರಾಸ್ ಹೈಕೋರ್ಟ್​ನ ತೀರ್ಪು ಪ್ರಶ್ನಿಸಿ ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಎಂಬ ಎನ್‌ಜಿಒ ಸುಪ್ರೀಂಗೆ ಅರ್ಜಿ ಹಾಕಿತ್ತು. ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ನೋಡುವುದು ಅಪರಾಧ ಎಂದು ಮದ್ರಾಸ್ ಹೈಕೋರ್ಟ್ ಪರಿಗಣಿಸಿಲ್ಲ. ವ್ಯಕ್ತಿಯೊಬ್ಬರು ತಮ್ಮ ಎಲೆಕ್ಟ್ರಾನಿಕ್ ಸಾಧನದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ವೀಕ್ಷಿಸುವುದು ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು. ಮದ್ರಾಸ್ ಹೈಕೋರ್ಟ್ ಇದನ್ನು ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಿರಲಿಲ್ಲ.

ಇದೀಗ ಸುಪ್ರೀಂ ಕೋರ್ಟ್ ಅದು ದೊಡ್ಡ ಅಪರಾಧ ಎಂದಿದೆ. ಮಕ್ಕಳ ಪೋರ್ನೋಗ್ರಫಿ ಪದವನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಸ್ತು (CSAEM : child sexually abusive and exploitative material)ನೊಂದಿಗೆ ಬದಲಾಯಿಸುವ ಮೂಲಕ POCSO ಕಾಯ್ದೆಯನ್ನು ಬದಲಾಯಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಇದನ್ನೂ ಓದಿ:‘ಡಿವೋರ್ಸ್​ ನಂತರವೂ ಮಹಿಳೆ ಗಂಡನಿಂದ ಜೀವನಾಂಶಕ್ಕೆ ಅರ್ಹಳು’- ಸುಪ್ರೀಂ ಕೋರ್ಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಿಡಿಯೋಗಳನ್ನ ಅಪ್ಪಿ, ತಪ್ಪಿಯೂ ನೋಡಬೇಡಿ; ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು

https://newsfirstlive.com/wp-content/uploads/2024/09/mobile-use.jpg

Load More