ವಾಸವಾಗಿದ್ದ ಬಂಗಲೆಯಲ್ಲೇ ಸುಪ್ರೀಂಕೋರ್ಟ್ ವಕೀಲೆ ಬರ್ಬರ ಹತ್ಯೆ
ಹತ್ಯೆ ಬಳಿಕ ಮನೆಯ ಸ್ಟೋರ್ ರೂಂನಲ್ಲೇ ಅಡಗಿ ಕುಳಿತಿದ್ದ ಕೊಲೆಗಾರ
ಪತಿಯ ಮೇಲೆ ಹತ್ಯೆ ಅನುಮಾನ, ಮೊಬೈಲ್ ಕಾಲ್ ರೆಕಾರ್ಡ್ಸ್ ತನಿಖೆ
ನವದೆಹಲಿ: ಸುಪ್ರೀಂಕೋರ್ಟ್ ವಕೀಲೆಯನ್ನು ಆಕೆಯ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೇಣು ಸಿನ್ಹಾ (61) ಕೊಲೆಯಾದ ವಕೀಲೆ.
ಸುಪ್ರೀಂಕೋರ್ಟ್ ವಕೀಲೆ ರೇಣು ಸಿನ್ಹಾ ಅವರ ಮೃತದೇಹ ನೋಯ್ಡಾ ಸೆಕ್ಟರ್ 30ರಲ್ಲಿ ಅವರ ಬಂಗಲೆಯ ಸ್ನಾನಗೃಹದಲ್ಲಿ ಪತ್ತೆಯಾಗಿತ್ತು. ವಕೀಲೆ ಮಗ ವಿದೇಶದಲ್ಲಿ ವಾಸಿಸುತ್ತಿದ್ದು ರೇಣು ಸಿನ್ಹಾ ತನ್ನ ಪತಿಯೊಂದಿಗೆ ಬಂಗಲೆಯಲ್ಲಿ ವಾಸವಾಗಿದ್ದರು. ರೇಣು ಸಿನ್ಹಾ ಎರಡು ದಿನಗಳಿಂದ ಕರೆ ಮಾಡಿದರೂ ಉತ್ತರಿಸುತ್ತಿರಲಿಲ್ಲ. ಹೀಗೆ ಅನುಮಾನಗೊಂಡ ವಕೀಲರ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಂಗಲೆ ಬಳಿ ಬಂದ ಪೊಲೀಸರು ಸುತ್ತಮುತ್ತ ಪರಿಶೀಲನೆ ನಡೆಸಿದ್ದಾಗ ವಕೀಲೆ ರೇಣು ಸಿನ್ಹಾ ಅವರ ಶವ ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ವಕೀಲೆ ರೇಣು ಸಿನ್ಹಾ ಪತಿ ಕಾಣೆಯಾಗಿದ್ದರು.
ರೇಣು ಅವರನ್ನು ಕೊಲೆ ಮಾಡಿದ ಪತಿ ನಿತಿನ್ ನಾಥ ಸಿನ್ಹಾ ಅವರು ಮನೆಯ ಸ್ಟೋರ್ ರೂಂನಲ್ಲಿ 36 ಗಂಟೆಗಳಿಗೂ ಹೆಚ್ಚು ಕಾಲ ಅಡಗಿ ಕುಳಿತಿದ್ದರು. ಆರೋಪಿಯನ್ನು ಬಂಧಿಸಲು ಪೊಲೀಸರು ಆತನ ಫೋನ್ ಟ್ರ್ಯಾಕ್ ಮಾಡಿ ಹಿಡಿದಿದ್ದಾರೆ. ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ. ತನಿಖೆ ವೇಳೆ ಪತಿ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಬಂಗಲೆಯ ಮಾರಾಟ ವಿಚಾರಕ್ಕೆ ಗಂಡ, ಹೆಂಡತಿ ನಡುವೆ ಗಲಾಟೆ ನಡೆದಿದ್ದಂತೆ. ವಾಸವಾಗಿದ್ದ ಬಂಗಲೆಯನ್ನು ಮಾರಲು ಪತಿ ನಿತಿನ್ ಸಿನ್ಹಾ ನಿರ್ಧರಿಸಿದ್ದರು. ಆದರೆ ಬಂಗಲೆ ಮಾರಲು ಪತ್ನಿ ರೇಣು ಸಿನ್ಹಾ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ಅತಿರೇಕಕ್ಕೆ ತಿರುಗಿ ವಕೀಲೆ ರೇಣು ಸಿನ್ಹಾ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ