ಸೆಪ್ಟೆಂಬರ್ 1ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
ನಾವು ನೀರಿನ ಹಂಚಿಕೆ ವಿಷಯದಲ್ಲಿ ತಜ್ಞರಲ್ಲ-ಸುಪ್ರೀಂ
ಪ್ರಾಧಿಕಾರ ಪ್ರಕಾರವೇ ನೀರು ಹಂಚಿಕೆ ಆಗಿದ್ಯಾ? ವರದಿ ಸಲ್ಲಿಸಿ
ಕಾವೇರಿ ನೀರು ಹಂಚಿಕೆ ವಿಚಾರ ಸಂಬಂಧ ಸುಪ್ರೀಂ ಕೊರ್ಟ್ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಿತು. ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ, ಸೆಪ್ಟೆಂಬರ್ 1ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಸದ್ಯಕ್ಕೆ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಮೂಲಕ ಸದ್ಯ ವಿವಾದ ಬಗೆಹರಿಸುವುದನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಬಿಟ್ಟಿದೆ. ಸುಪ್ರೀಂ ಕೋರ್ಟ್ ತೀರ್ಮಾನದಿಂದ ತಮಿಳುನಾಡಿಗೆ ನಿರಾಸೆಯಾಗಿದೆ. ಹೀಗಾಗಿ ಮುಂದಿನ ಸೋಮವಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ತೀರ್ಮಾನ ತುಂಬಾನೇ ಮಹತ್ವ ಪಡೆದುಕೊಂಡಿದೆ.
ಸುಪ್ರೀಂ ಕೋರ್ಟ್ ಇವತ್ತು ಹೇಳಿದ್ದೇನು..?
ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯು ಮುಂದಿನ ಸೋಮವಾರ ನಡೆಯಲಿದೆ. ಮುಂದಿನ 15 ದಿನಗಳ ತನಕ ನೀರು ಹಂಚಿಕೆ ಬಗ್ಗೆ ಈ ಸಭೆಯಲ್ಲಿ ಪರಿಶೀಲಿಸಿ ಸೂಕ್ತ ಆದೇಶವನ್ನು ಆ ಸಮಿತಿ ನೀಡಲಿದೆ. ನಂತರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ ಆಗಿದೆಯೇ? ಇಲ್ಲವೇ? ಎಂಬುವುದನ್ನು ಗಮನಿಸಲಿದೆ. ಪ್ರಾಧಿಕಾರ ನೀಡಿದ್ದ ಆದೇಶ ರಾಜ್ಯದ ಹಿತಾಸಕ್ತಿಗೆ ವಿರುದ್ಧ ಎಂದು ಕರ್ನಾಟಕ ಹೇಳಿದೆ. ಈ ವಾದವನ್ನು ತಮಿಳುನಾಡು ವಿರೋಧಿಸಿದ್ದು ನೀರಿನ ಪ್ರಮಾಣ ಹೆಚ್ಚಬೇಕು ಎಂದು ಹೇಳಿದೆ. ಹೀಗಾಗಿ ಮುಂದಿನ ಶುಕ್ರವಾರ ನಾವು ಮತ್ತೆ ವಿಚಾರಣೆ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕರ್ನಾಟಕದ ವಾದ
ಕರ್ನಾಟಕದ ಪರ ಹಿರಿಯ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದರು. ಕರ್ನಾಟಕದಲ್ಲಿ ಈ ಬಾರಿ ಮಳೆಯ ಕೊರತೆಯಾಗಿದೆ. ಮಳೆ ಕೊರತೆಯ ನಡುವೆಯೂ ನೀರು ಬಿಡಲಾಗುತ್ತಿದೆ. ಇಂದಿನವರೆಗೂ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಶೇಕಡಾ 47 ರಷ್ಟು ಮಳೆ ಕೊರತೆ ಇದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಿಂದ ತಮಿಳುನಾಡು ಅಧಿಕಾರಿಗಳು ಎದ್ದು ಹೋಗಿದ್ದಾರೆ ಎಂದು ಕೋರ್ಟ್ಗೆ ತಿಳಿಸಲಾಯಿತು. ಇತ್ತ ತಮಿಳುನಾಡು ವಾದ ಮಂಡಿಸಿ, ಈ ಬಾರಿ ನಮಗೆ ನೀರಿನ ಅಭಾವ ಇದೆ. ನಮ್ಮಲ್ಲೂ ಮಳೆಯ ಕೊರತೆ ಇದೆ. ಇರುವ ಮಳೆ ನೀರನ್ನು ಇಬ್ಬರು ಹಂಚಿಕೊಳ್ಳಬೇಕು ಎಂದು ಬೇಡಿಕೆ ಇಟ್ಟರು.

ಎರಡೂ ರಾಜ್ಯಗಳ ವಾದ ಬಳಿಕ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ, ಕರ್ನಾಟಕ ನೀರು ಬಿಡುಗಡೆ ಮಾಡಿದ್ದೇವೆ ಎಂದಿದೆ. ಬಿಡುಗಡೆಯಾದ ನೀರು ತಮಿಳುನಾಡು ತಲುಪಲು ಮೂರು ದಿನ ಬೇಕು. ನಾವು ಹೇಗೆ ಆದೇಶ ನೀಡಲು ಸಾಧ್ಯ? ನಾವು ನೀರಿನ ಹಂಚಿಕೆ ವಿಷಯದಲ್ಲಿ ತಜ್ಞರಲ್ಲ. ನಿವು ದಯವಿಟ್ಟು ಪ್ರಾಧಿಕಾರವನ್ನು ಸಂಪರ್ಕಿಸಿ ಎಂದರು.
ಇನ್ನು ಕೇಂದ್ರ ಸರ್ಕಾರದ ಪರ ವಕೀಲೆ ಅಡಿಷನಲ್ ಸಾಲಿಸಿಟರ್ ಜನರಲ್ ಐಶ್ಚರ್ಯಾ ಭಾಟಿ ವಾದ ಮಂಡಿಸಿದರು. ಇದು ಮಳೆ ಕೊರತೆಯ ವರ್ಷ. ಇರುವ ನೀರನ್ನೇ ಹಂಚಿಕೊಳ್ಳಬೇಕಾಗಿದೆ. ಸೋಮವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೆ. ಹೀಗಾಗಿ ಇಂದಿನ ವಿಚಾರಣೆಯನ್ನು ಮುಂದೂಡಬಹುದು ಎಂದರು.
ಕಾವೇರಿ ನೀರು ಪ್ರಾಧಿಕಾರವೇ ತೀರ್ಮಾನ ಕೈಗೊಳ್ಳಲಿ
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಮುಂದಿನ ಶುಕ್ರವಾರ ವಿಚಾರಣೆಯನ್ನು ನಡೆಸೋಣ. ಅಷ್ಟರೊಳಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಲಿ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಮುಂದಿನ 15 ದಿನಗಳಲ್ಲಿ ನೀರು ಹಂಚಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಹೀಗಾಗಿ ಕಾವೇರಿ ನೀರು ಪ್ರಾಧಿಕಾರವು ಈ ಹಿಂದೆ ನೀಡಿದ್ದ ಆದೇಶದಂತೆ ನೀರು ಹರಿಸಲಾಗಿದೆಯೇ ಇಲ್ಲವೇ ಅನ್ನೋದ್ರ ಬಗ್ಗೆ ವರದಿ ಸಲ್ಲಿಸುವುದು ಸೂಕ್ತ. ಏತನ್ಮಧ್ಯೆ ಕಾವೇರಿ ನೀರು ಪ್ರಾಧಿಕಾರದ ಮುಂದಿನ ಆದೇಶದ ದಾಖಲೆಯೂ ಲಭ್ಯ ಇರುತ್ತೆ ಎಂದು ಕೋರ್ಟ್ ಹೇಳಿತು.
ಸುಪ್ರೀಂ ಕೋರ್ಟ್ನ ಇಂದಿನ ಆದೇಶವನ್ನು ಕಾವೇರಿ ನೀರು ಪ್ರಾಧಿಕಾರಕ್ಕೆ ತಿಳಿಸಲು ಎಎಸ್‌ಜಿ ಐಶ್ಟರ್ಯಾ ಭಾಟಿಗೆ ಮನವಿ ಮಾಡಿದ್ದೇವೆ. ನಮಗೆ ಮುಂದಿನ ಶುಕ್ರವಾರದೊಳಗೆ ಕಾವೇರಿ ನೀರು ಪ್ರಾಧಿಕಾರದ ಆದೇಶದ ಪ್ರತಿ ಸಲ್ಲಿಸಲಿ. ಕರ್ನಾಟಕವು ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶವು ಅದರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ವಾದಿಸಿದೆ. ಜೊತೆಗೆ ನೀರು ಬಿಡುಗಡೆಯ ಪ್ರಮಾಣ ಕಡಿಮೆ ಮಾಡಲು ಕೋರಿದೆ. ಆದರೆ ಇದಕ್ಕೆ ವಿರುದ್ಧವಾಗಿ ತಮಿಳುನಾಡು ನೀರಿನ ಪ್ರಮಾಣ ಹೆಚ್ಚಿಸಲು ಮನವಿ ಮಾಡಿದೆ. ಇದರ ಬಗ್ಗೆ ಕಾವೇರಿ ನೀರು ಪ್ರಾಧಿಕಾರವೇ ತೀರ್ಮಾನ ಕೈಗೊಳ್ಳಲಿ. ಮುಂದಿನ ಶುಕ್ರವಾರ ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿ ಎಂದು ನ್ಯಾಯಮೂರ್ತಿ ಬಿ.ಆರ್.ಗವಾಯಿ ಸೂಚಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ