ದೇಶದ ಬೇರೆ ಪ್ರಕರಣಗಳಿಗಿಂತ ಮಣಿಪುರ ಭಿನ್ನವಾಗಿದೆ
ತನಿಖೆ ವಿಳಂಬವಾದಷ್ಟು ಸಾಕ್ಷ್ಯ ನಾಶವಾಗುವ ಸಾಧ್ಯತೆ
ಪೊಲೀಸರು FIR ದಾಖಲಿಸಲು 14 ದಿನ ಯಾಕಾಯ್ತು?
ನವದೆಹಲಿ: ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಮಣಿಪುರದ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆಯು ವ್ಯಕ್ತವಾಗಿದೆ. ಇಂದು ಸಂತ್ರಸ್ತ ಮಹಿಳೆಯರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಣಿಪುರ ಸರ್ಕಾರ ಕೈಗೊಂಡ ಕ್ರಮಗಳಿಗೆ ಗರಂ ಆಗಿದ್ದು, ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಮಣಿಪುರ ಹಿಂಸಾಚಾರ, ಮಹಿಳಾ ದೌರ್ಜನ್ಯದ ಬಗ್ಗೆ ಸುಪ್ರೀಂಕೋರ್ಟ್ ಸಿಜೆ ಚಂದ್ರಚೂಢ ಅವರಿದ್ದ ಪೀಠ ಇಂದು ಅರ್ಜಿ ವಿಚಾರಣೆ ನಡೆಸಿತು. ಈ ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ರೆ ಸಾಕಾಗಲ್ಲ. ದೇಶದ ಬೇರೆ ಪ್ರಕರಣಗಳಿಗಿಂತ ಮಣಿಪುರ ಭಿನ್ನವಾಗಿದೆ. ತನಿಖೆ ವಿಳಂಬವಾದಷ್ಟು ಸಾಕ್ಷ್ಯ ನಾಶವಾಗಬಹುದು. ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿದೆ. ಇಷ್ಟಾದ್ರೂ ತನಿಖೆಯಲ್ಲಿ ವಿಳಂಬವೇಕೆ. ಹೀಗಾಗಿ ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ
ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಪ್ರಕರಣ ನಡೆದಿದ್ದು ಮೇ 4ರಂದು. ಆದರೆ ಎಫ್.ಐ.ಆರ್. ದಾಖಲಿಸಿದ್ದು ಮೇ 18 ರಂದು. ಪೊಲೀಸರು ಎಫ್.ಐ.ಆರ್ ದಾಖಲಿಸಲು 14 ದಿನ ತೆಗೆದುಕೊಂಡಿದ್ದು ಯಾಕೆ. ಮೇ 4 ರಿಂದ ಮೇ 18 ರವರೆಗೆ ಪೊಲೀಸರು ಏನ್ ಮಾಡುತ್ತಿದ್ದರು? ಪೊಲೀಸರು ವಿಡಿಯೋ ವೈರಲ್ ಆಗುವವರೆಗೆ ಕಾದು FIR ದಾಖಲಿಸಿದ್ದು ಏಕೆ ಎಂದು ಸುಪ್ರೀಂಕೋರ್ಟ್ ಖಡಕ್ ಪ್ರಶ್ನೆಗಳನ್ನು ಕೇಳಿದೆ.
ಮಣಿಪುರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡನೆ ಮಾಡಿದರು. ಮೇ 18 ರಂದು ಘಟನೆ ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವಿಡಿಯೋ ಬಹಿರಂಗವಾದ 24 ಗಂಟೆಯಲ್ಲಿ 7 ಮಂದಿ ಬಂಧನವಾಗಿದೆ. ಆ ನಿರ್ದಿಷ್ಟ ಪೊಲೀಸ್ ಠಾಣೆಯಲ್ಲಿ 20, ಮಣಿಪುರ ರಾಜ್ಯದಲ್ಲಿ 6 ಸಾವಿರ FIR ದಾಖಲಿಸಲಾಗಿದೆ ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಿವರಣೆ ಆಲಿಸಿದ ಸುಪ್ರೀಂ ಕೋರ್ಟ್, ವೈರಲ್ ವಿಡಿಯೋ ಒಂದೇ ಒಂದು ಅಪರಾಧವಲ್ಲ. ಮಣಿಪುರದಲ್ಲಿ ವ್ಯವಸ್ಥಿತವಾದ ಹಿಂಸಾಚಾರ ನಡೆದಿದೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ