newsfirstkannada.com

×

ರಾಜಕೀಯದಿಂದ ದೇವರನ್ನು ದೂರವಿಡಿ; ಆಂಧ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಕ್ಲಾಸ್​​

Share :

Published October 1, 2024 at 6:13am

    ಸುಪ್ರೀಂಕೋರ್ಟ್ ಕಟಕಟೆ ಹತ್ತಿದ ತಿರುಪತಿ ಲಡ್ಡು ವಿವಾದ

    ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಲಡ್ಡು ವಿಚಾರಣೆ..!

    ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ

ಹೈದಾರಾಬಾದ್​: ತಿರುಪತಿ ಲಡ್ಡು ವಿವಾದ ಕೊನೆಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ದೇವರ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಆಂಧ್ರ ಸರ್ಕಾರಕ್ಕೆ ಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ತಿರುಪತಿ ತಿರುಮಲಕ್ಕೆ ಭೇಟಿ ನೀಡಿರುವ ಎಸ್​ಐಟಿ ಲಡ್ಡು ತಯಾರಿಕೆಯನ್ನು ಪರಿಶೀಲನೆ ನಡೆಸಿದೆ. ಈ ಮಧ್ಯೆ ತಿರುಪತಿ ದೇವಾಲಯವನ್ನು ಹಿಂದೂಗಳ ಸುಪರ್ದಿಗೆ ನೀಡಿ ಅಂತ ಆರ್​ಎಸ್​ಎಸ್ ಆಗ್ರಹಿಸಿದೆ.

ಇದು ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದ ಪ್ರಕರಣ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಪುಣ್ಯಕ್ಷೇತ್ರ ತಿರುಪತಿಯ ಪರಮಪ್ರಸಾದ ಕಲಬೆರಕೆಯಾಗಿದ್ದು ಅಕ್ಷಮ್ಯ. ಹಾಲಿ ಸಿಎಂ ನಾಯ್ಡು ಹಾಗೂ ಮಾಜಿ ಸಿಎಂ ಜಗನ್ ರೆಡ್ಡಿ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿದ್ದ ಲಡ್ಡು ವಿವಾದ ಕೊನೆಗೂ ಸುಪ್ರೀಂಕೋರ್ಟ್ ಅಂಗಳ ತಲುಪಿದೆ.

ಸುಪ್ರೀಂಕೋರ್ಟ್​ ಕಟಕಟೆಯಲ್ಲಿ ತಿರುಪತಿ ಲಡ್ಡು ವಿವಾದ!
ದೇವರನ್ನು ರಾಜಕೀಯದಿಂದ ದೂರವಿಡಿ ಎಂದ ಕೋರ್ಟ್​

ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪಗಳ ಕುರಿತು ಪರಿಶೀಲನೆ ನಡೆಸಲು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹಾಗೂ ವೈಎಸ್​ಆರ್​​​ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ ಅರ್ಜಿ ಸಲ್ಲಿಸಿದೆ. ಇಂದು ಸುಪ್ರೀಂಕೋರ್ಟ್​​ ನ್ಯಾಯಮೂರ್ತಿ ಬಿ.ಆರ್ ಗವಾಯಿ ಹಾಗೂ ಕೆ.ವಿ ವಿಶ್ವನಾಥ್​ ಪೀಠದಲ್ಲಿ ವಿಚಾರಣೆ ನಡೆಯಿತು. ಆಂಧ್ರ ಸರ್ಕಾರದ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ರು. ಅರ್ಜಿ ವಿಚಾರಣೆ ವೇಳೆ ಗರಂ ಆಗದ ಸುಪ್ರೀಂಕೋರ್ಟ್​ ದೇವಸ್ಥಾನಗಳನ್ನು ರಾಜಕೀಯದಿಂದ ದೂರ ಇಡಿ ಅಂತ ಕ್ಲಾಸ್ ತೆಗೆದುಕೊಂಡಿದೆ.

ಸುಪ್ರೀಂಕೋರ್ಟ್​​ನಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ!

ಸುಪ್ರೀಂಕೋರ್ಟ್: ಕಲಬೆರಕೆ ತುಪ್ಪವನ್ನು ಪ್ರಸಾದಕ್ಕೆ ಬಳಸುತ್ತಾರೆಯೇ, ಇದಕ್ಕೆ ಖಚಿತ ಸಾಕ್ಷಿ, ಆಧಾರ ಇದ್ಯಾ?

ಸಿದ್ಧಾರ್ಥ್ ಲೂತ್ರಾ: ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸುಪ್ರೀಂಕೋರ್ಟ್: ತನಿಖೆ ನಡೆಯುವಾಗ ಕಲಬೆರಕೆ ತುಪ್ಪವನ್ನೇ ಲಡ್ಡು ತಯಾರಿಕೆಗೆ ಬಳಸಲಾಗಿದೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ?

ಸಿದ್ಧಾರ್ಥ್ ಲೂತ್ರಾ: ಇದೇ ಕಂಟ್ರಾಕ್ಟರ್ ಈ ಹಿಂದೆಯೂ ತುಪ್ಪ ಪೂರೈಸಿದ್ದಾರೆ.

ಸುಪ್ರೀಂಕೋರ್ಟ್: ಕಂಟ್ರಾಕ್ಟರ್​ ಅನ್ನು ಹೇಗೆ ಪ್ರತ್ಯೇಕಿಸುತ್ತೀರಿ? ಕಲಬೆರಕೆ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ.

ಸಿದ್ಧಾರ್ಥ್ ಲೂತ್ರಾ: ನಾವು ಅಧಿಕಾರಕ್ಕೆ ಬರುವ ಮುನ್ನ ಲಡ್ಡು ಬಗ್ಗೆ ದೂರುಗಳಿದ್ದವು. ಈ ಬಗ್ಗೆ ದೀರ್ಘಕಾಲದಿಂದಲೂ ದೂರುಗಳಿದ್ದವು.

ಸುಪ್ರೀಂಕೋರ್ಟ್: ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು, ಸಿಎಂ ಹುದ್ದೆ ಸಂವಿಧಾನಿಕ ಹುದ್ದೆ, ತನಿಖೆಯಾಗುವಾಗ ಸಿಎಂ ಹೇಳಿಕೆ ನೀಡಿದ್ದು ಏಕೆ? ದೇವರನ್ನು ರಾಜಕೀಯದಿಂದ ದೂರವಿಡಿ, ಇದು ಒಬ್ಬರಲ್ಲ, ಅನೇಕ ಭಕ್ತಾದಿಗಳ ನಂಬಿಕೆಯ ವಿಷಯ, ನಿಮ್ಮ ಸಿಎಂಗೆ ಜವಾಬ್ದಾರಿಯುತ ಹೇಳಿಕೆ ನೀಡಲು ಸೂಚಿಸಿ.

ತಿರುಪತಿ ತಿರುಮಲದಲ್ಲಿ ಎಸ್​​ಐಟಿಯಿಂದ ಪರಿಶೀಲನೆ

ಇತ್ತ ತಿರುಪತಿ ಲಡ್ಡು ಅಪವಿತ್ರ ಬಗ್ಗೆ ಆಂಧ್ರ ಸರ್ಕಾರ ಎಸ್​ಐಟಿ ರಚಿಸಿದ್ದು, ತಿರುಪತಿಗೆ ಆಗಮಿಸಿದ ಎಸ್‌ಐಟಿ ತಂಡ ಲಡ್ಡುಗೆ ಬಳಸುವ ಪದಾರ್ಥಗಳ ಬಗ್ಗೆ ಪರಿಶೀಲನೆ ನಡೆಸಿದೆ. ತುಪ್ಪ ಸೇರಿದಂತೆ ವಿವಿಧ ಪದಾರ್ಥಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದೆ. ಜೊತೆಗೆ ಲ್ಯಾಬ್ ವರದಿಗಳ ಬಗ್ಗೆಯೂ ಪರಿಶೀಲನೆ ನಡೆಸಲಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​​ ಸೀರೀಸ್​ನಿಂದ ದ್ರಾವಿಡ್​​ ಪುತ್ರ ಔಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಕೀಯದಿಂದ ದೇವರನ್ನು ದೂರವಿಡಿ; ಆಂಧ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಕ್ಲಾಸ್​​

https://newsfirstlive.com/wp-content/uploads/2024/09/TIRUPATI_LADDU_CM.jpg

Load More