newsfirstkannada.com

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣಗೆ ಬಿಗ್‌ ಶಾಕ್; ಇವತ್ತೇ ಅರೆಸ್ಟ್ ಆಗ್ತಾರಾ?

Share :

Published June 22, 2024 at 8:28pm

Update June 22, 2024 at 8:35pm

    ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ FIR ದಾಖಲು

    ಸೆನ್ ಪೊಲೀಸ್ ಠಾಣೆಗೆ ಆಗಮಿಸಿರುವ ಸೂರಜ್ ರೇವಣ್ಣ

    ಸೂರಜ್ ರೇವಣ್ಣ ಮೊಬೈಲ್‌ನಲ್ಲಿರುವ ಆಡಿಯೋ ರಿಕವರಿ?

ಹಾಸನ: MLC ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್‌ ರೇವಣ್ಣ ವಿರುದ್ಧ ಈಗ FIR ದಾಖಲಾಗಿದೆ. ಅಸಹಜ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾದ ಬೆನ್ನಲ್ಲೆ ಆರೋಪಿ ಸೂರಜ್‌ ರೇವಣ್ಣ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಸೆನ್ ಪೊಲೀಸ್ ಠಾಣೆಯಲ್ಲಿ ಸೂರಜ್‌ ರೇವಣ್ಣ ಅವರು ವಿಚಾರಣೆ ಎದುರಿಸುತ್ತಿದ್ದಾರೆ.

ಆರೋಪಿ ಸೂರಜ್ ರೇವಣ್ಣ ಅವರಿಂದ ಪೊಲೀಸರು ತಾಂತ್ರಿಕ ಸಾಕ್ಷ್ಯವನ್ನು ಸಂಗ್ರಹ ಮಾಡಿದ್ದಾರೆ. ಸಂತ್ರಸ್ತ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಸೂರಜ್ ರೇವಣ್ಣ ಅವರ ಮೊಬೈಲ್‌ನಲ್ಲಿರುವ ಆಡಿಯೋ ರಿಕವರಿ ಮಾಡಲು ಮುಂದಾಗಿದ್ದಾರೆ. ಇನ್ನು, FIR ದಾಖಲಾದ ಹಿನ್ನೆಲೆಯಲ್ಲಿ ಸೆನ್ ಪೊಲೀಸ್ ಠಾಣೆಯಿಂದಲೇ ಎಂಎಲ್‌ಸಿ ಸೂರಜ್‌ ರೇವಣ್ಣ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಹಾಸನದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ಸೂರಜ್ ರೇವಣ್ಣ ಹೇಳಿದ್ದೇನು?​​ 

ಸೂರಜ್ ರೇವಣ್ಣ ಬಂಧನ ಗ್ಯಾರಂಟಿ?
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಯಾವುದೇ ಕ್ಷಣದಲ್ಲೂ ಸೂರಜ್ ರೇವಣ್ಣ ಅವರನ್ನು ಬಂಧಿಸುವ ಸಾಧ್ಯತೆ ಇದೆ. ವಿಚಾರಣೆ ಮುಗಿಯುತ್ತಿದ್ದಂತೆ ಸೂರಜ್‌ ರೇವಣ್ಣ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಈಗಾಗಲೇ ಸೂರಜ್‌ ರೇವಣ್ಣ ಬಂಧನಕ್ಕೆ ಪೊಲೀಸರು ಅಗತ್ಯವಾದ ತಯಾರಿ ನಡೆಸಿದ್ದಾರೆ. ಹಾಸನದ ಎನ್.ಆರ್. ವೃತ್ತದಲ್ಲಿರುವ ಸೆನ್ ಪೊಲೀಸ್ ಠಾಣೆ ಸುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣಗೆ ಬಿಗ್‌ ಶಾಕ್; ಇವತ್ತೇ ಅರೆಸ್ಟ್ ಆಗ್ತಾರಾ?

https://newsfirstlive.com/wp-content/uploads/2024/06/suraj2.jpg

Load More