newsfirstkannada.com

VIDEO: ವಿಶ್ವದಲ್ಲೇ ಅತಿ ದೊಡ್ಡ ಆಫೀಸ್‌ ಕಟ್ಟಡ; ಪೆಂಟಗನ್ ದಾಖಲೆ ಬರೆದ ಸೂರತ್‌ ಬಿಲ್ಡಿಂಗ್‌ನಲ್ಲಿ ಏನೇನಿದೆ ಗೊತ್ತಾ?

Share :

19-07-2023

    ಈ ಬಿಲ್ಡಿಂಗ್​ನಲ್ಲಿ ಬರೋಬ್ಬರಿ 131 ಎಲಿವೇಟರ್‌ಗಳಿವೆ

    ಡೈಮಂಡ್​ ಬೋರ್ಸ್ ಕಟ್ಟಡದಲ್ಲಿ 65,000 ಕಾರ್ಮಿಕರು

    ಕಟ್ಟಡದಲ್ಲಿ ಎಷ್ಟು ಸಾವಿರ ಜನ ಕೆಲಸ ಮಾಡಬಹುದು..?

ಗಾಂಧಿನಗರ: ಅಮೆರಿಕದ ಪೆಂಟಗನ್​ನಲ್ಲಿರುವ ಬಿಲ್ಡಿಂಗ್​ ಇಲ್ಲಿವರೆಗೆ ವಿಶ್ವದ ಅತಿ ದೊಡ್ಡ ಆಫೀಸ್​ ಕಟ್ಟಡವಾಗಿತ್ತು. ಸದ್ಯ ಪೆಂಟಗನ್​ ಅನ್ನು ಹಿಂದಿಕ್ಕಿ ಗುಜರಾತ್​ನ ಸೂರತ್​​ನಲ್ಲಿನ ಡೈಮಂಡ್​ ಬೋರ್ಸ್​ ವಿಶ್ವದ ಅತಿ ದೊಡ್ಡ ಕಚೇರಿ ಸಮುಚ್ಚಯ ಹೊಂದಿದ ಹಿರಿಮೆಗೆ ಪಾತ್ರವಾಗಿದೆ. ಸೂರತ್​ನ ಡೈಮಂಡ್​ ಬೋರ್ಸ್​ ಕಟ್ಟಡವು 35 ಎಕರೆಗಳಲ್ಲಿ ವಿಸ್ತಾರಗೊಂಡಿದ್ದು ಇದು ಒಟ್ಟು 15 ಅಂತಸ್ತಗಳನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ.

ಸೂರತ್​ ನಗರದಲ್ಲಿನ ಡೈಮಂಡ್​ ಬೋರ್ಸ್​ (SDB)ಕಟ್ಟಡವು ನೆಲ ಮಾಳಿಗೆಯಲ್ಲಿ ಸುಮಾರು 7.1 ಮಿಲಿಯನ್​ (71 ಲಕ್ಷ) ಚದರ ಅಡಿಗಳನ್ನು ಹೊಂದಿದೆ. ಹೀಗಾಗಿ ಅಮೆರಿಕದಲ್ಲಿರುವ ಪೆಂಟಗನ್​  ಆಫೀಸ್​ಗಿಂತ ಇದು ದೊಡ್ಡದಾಗಿದೆ. ಅಲ್ಲದೇ SDBಯ ಕಟ್ಟದಲ್ಲಿ ವಜ್ರದ ಪಾಲಿಷರ್‌ಗಳು ಮತ್ತು ವ್ಯಾಪಾರಿಗಳು ಸೇರಿದಂತೆ 65,000ಕ್ಕೂ ಹೆಚ್ಚು ವಜ್ರದ ಬಗ್ಗೆ ಕೆಲಸ ಮಾಡುವ ಕಾರ್ಮಿಕರ ಕೇಂದ್ರವಾಗಲಿದೆ. ಅಲ್ಲದೇ ವಜ್ರೋದ್ಯಮಕ್ಕೆ ಉತ್ತೇಜನ ಕೊಡಲು ಇದು ಇನ್ನಷ್ಟು ಸಹಕಾರಿ ಆಗಲಿದೆ. ಪೆಂಟಗನ್​ ಕಟ್ಟಡವು 66 ಲಕ್ಷ ಚದರ ಅಡಿ ಹೊಂದಿದ್ದು 7 ಮಹಡಿಗಳನ್ನು ಹೊಂದಿತ್ತು. ಆದರೆ ಸೂರತ್​ನಲ್ಲಿನ ಬೋರ್ಸ್​ ಇದಕ್ಕಿಂತ ದೊಡ್ಡದಾಗಿದೆ.

ಕೊರೊನಾ ಸಮಯದಲ್ಲಿ ಕಟ್ಟಡ ಕೆಲಸ ಸ್ಟಾಪ್

ಈ SDB ಕಟ್ಟಡವನ್ನು ಇದೇ ವರ್ಷದ ಕೊನೆಯಲ್ಲಿ ಅಂದರೆ ನವೆಂಬರ್​ನಲ್ಲಿ ಉದ್ಘಾಟನೆ ಮಾಡಲು ಯೋಜನೆ ರೂಪಿಸಲಾಗಿದೆ. ಸಮಾರಂಭಕ್ಕೆ ಪ್ರಧಾನಿ ಮೋದಿಯವರು ಆಗಮಿಸಿ ಲೋಕಾರ್ಪಣೆ ಮಾಡುತ್ತಾರೆ ಎಂದು ವರದಿಗಳು ತಿಳಿಸಿವೆ. ಇನ್ನು ಈ ಕಟ್ಟಡವನ್ನು 4 ವರ್ಷಗಳ ಕಾಲ ನಿರ್ಮಾಣ ಮಾಡಲಾಗಿದ್ದು ಕೊರೊನಾ ಸಮಯದಲ್ಲಿ ಕೆಲಸವನ್ನು ನಿಲ್ಲಿಸಲಾಗಿತ್ತು. ಇದೀಗ ಎಲ್ಲ ಕಾರ್ಯ ಹಂತ, ಹಂತವಾಗಿ ಪೂರ್ಣಗೊಳಿಸಲಾಗಿದೆ. ಅಲ್ಲಲ್ಲಿ ಫಿನಿಷಿಂಗ್​ ಕೆಲಸಗಳಿದ್ದು ಅವುಗಳು ಮುಗಿದ ಮೇಲೆ ಉದ್ಘಾಟನೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

ಈ ಭವ್ಯ ಬಿಲ್ಡಿಂಗ್​ನಲ್ಲಿ ಏನೇನು ಇವೆ..?

SDBಯ ಒಳಗೆ ಸುಮಾರು 4,700ಕ್ಕೂ ಅಧಿಕ ಕಚೇರಿಗಳು ಇವೆ. ವಜ್ರ ಕತ್ತರಿಸುವ ಮತ್ತು ಪಾಲಿಶ್ ಮಾಡುವ ಸಣ್ಣ ಉದ್ಯಮದವರಿಗು ಅನುಕೂಲವಾಗುವಂತೆ ಮಾಡಲಾಗಿದೆ. ಬಿಲ್ಡಿಂಗ್​ನಲ್ಲಿ 131 ಎಲಿವೇಟರ್‌ಗಳು, ಚಿಲ್ಲರೆ ವ್ಯಾಪಾರ, ವಜ್ರದ ಪಾಲಿಸಿಂಗ್ ಕೆಲಸ, ಊಟ-ಉಪಾಹಾರಕ್ಕೆ ಕ್ಯಾಂಟೀನ್​ ವ್ಯವಸ್ಥೆ, ಕಾನ್ಫರೆನ್ಸ್ ಹಾಲ್​ಗಳು ಸೇರಿದಂತೆ ಇನ್ನಿತರ ಸೌಲಭ್ಯಗಳು ಈ ಭವ್ಯ ಬಿಲ್ಡಿಂಗ್​ನಲ್ಲಿವೆ.

ಇನ್ನು ಈ ಬಿಲ್ಡಿಂಗ್​ ಅನ್ನು ವಿನ್ಯಾಸ ಮಾಡಿರುವ ಮಾಸ್ಟರ್​ ಮೈಂಡ್​ ಎಂದರೆ ಇಂಟರ್​ನ್ಯಾಷನಲ್​ ಡಿಸೈನ್​ ಸ್ಪರ್ಧೆಯಲ್ಲಿ ​ವಿನ್​ ಆಗಿದ್ದ ಇಂಡಿಯನ್ ಆರ್ಕಿಟೆಕ್ಚರ್​ ಸಂಸ್ಥೆ ಮಾರ್ಫೋಜೆನೆಸಿಸ್ ಆಗಿದೆ. ನಿರ್ಮಾಣಕ್ಕೆ ಮೊದಲೇ ಹಲವು ವಜ್ರದ ಕಂಪನಿಗಳು ಸ್ಥಳ, ಆಫೀಸ್​ ಅನ್ನು ಖರೀದಿ ಮಾಡಿದ್ದವು. ನಂತರವೇ ಈ ದೊಡ್ಡದಾದ ಬೋರ್ಸ್​ ಅನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಿಶ್ವದಲ್ಲೇ ಅತಿ ದೊಡ್ಡ ಆಫೀಸ್‌ ಕಟ್ಟಡ; ಪೆಂಟಗನ್ ದಾಖಲೆ ಬರೆದ ಸೂರತ್‌ ಬಿಲ್ಡಿಂಗ್‌ನಲ್ಲಿ ಏನೇನಿದೆ ಗೊತ್ತಾ?

https://newsfirstlive.com/wp-content/uploads/2023/07/SURAT_Diamond_Bourse.jpg

Load More