2013ರಲ್ಲಿ ಮೊಬೈಲ್ ಫೋನ್‌ಗೆ ಬಂದ ಒಂದು ಮಿಸ್ಡ್ ಕಾಲ್
ಮೋಸ ಹೋದ ಆಸಾಮಿಯನ್ನು ಒಮ್ಮೆಯೂ ಭೇಟಿಯಾಗಿಲ್ಲ
ಪೂಜಾ, ಚೇತನಾ, ಮಧು ಹೆಸರಲ್ಲಿ ಮೋಸ ಮಾಡಿದ ಮಹಿಳೆ
ಸೂರತ್: ಒಂದಲ್ಲ, ಎರಡಲ್ಲ 10 ವರ್ಷ ಫೋನ್‌ನಲ್ಲಿ ಪ್ರಣಯದ ಮಾತನಾಡಿ ವ್ಯಕ್ತಿಯೊಬ್ಬರಿಗೆ 4 ಕೋಟಿ ರೂಪಾಯಿ ವಂಚಿಸಿರೋ ಪ್ರಕರಣ ಗುಜರಾತ್‌ನಲ್ಲಿ ಬೆಳಕಿಗೆ ಬಂದಿದೆ. ಆಶ್ಚರ್ಯ ಏನಂದ್ರೆ ಒಮ್ಮೆಯೂ ಆ ಮಹಿಳೆ ಮೋಸ ಹೋದ ಆಸಾಮಿಯನ್ನು ಭೇಟಿಯೇ ಆಗಿಲ್ಲ. ಆದರೂ ಪೂಜಾ, ಚೇತನಾ, ಮಧು ವಿಹೋಲ್ ಹೀಗೆ ನಾಲ್ಕೈದು ಹೆಸರಿನಲ್ಲಿ ಪರಿಚಯ ಮಾಡಿಕೊಂಡ ಮಹಿಳೆ ಈ ಮೋಹದ ಬಲೆ ಹೆಣೆದಿದ್ದಾಳೆ ಎನ್ನಲಾಗಿದೆ.
2012ರಲ್ಲಿ ಮುಖೇಶ್ ದೇಸಾಯಿ ಎಂಬ ವ್ಯಕ್ತಿ ದುಬೈನಲ್ಲಿದ್ದ ತನ್ನ ಜಾಗವನ್ನು ಮಾರಿ ಸೂರತ್‌ಗೆ ಬಂದಿದ್ದಾರೆ. 2013ರ ಏಪ್ರಿಲ್‌ನಲ್ಲಿ ದೇಸಾಯಿ ಅವರ ಮೊಬೈಲ್ ಫೋನ್‌ಗೆ ಒಂದು ಮಿಸ್ ಕಾಲ್ ಬರುತ್ತೆ. ಆ ನಂಬರ್‌ಗೆ ವಾಪಸ್ ಕರೆ ಮಾಡಿದಾಗ ಒಬ್ಬರು ಮಹಿಳೆ ಮಾತನಾಡುತ್ತಾರೆ. ಆಕೆ ತನ್ನನ್ನು ಸೋನಿಯಾ ಪಟೇಲ್ ಎಂದು ಪರಿಚಯ ಮಾಡಿಕೊಳ್ಳುತ್ತಾಳೆ. ಹಾಗೆ ಮಾತನಾಡುತ್ತಾ ನನ್ನ ಸ್ನೇಹಿತೆ ಪೂಜಾ ದೇಸಾಯಿ ಕಷ್ಟದಲ್ಲಿದ್ದಾಳೆ. ಅವಳಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಮತ್ತೆ ಬೇರೆ ಫೋನ್‌ನಿಂದ ತಾನೇ ಪೂಜಾ ದೇಸಾಯಿ ಎಂದು ಕರೆ ಮಾಡಿ ದೇಸಾಯಿ ಜೊತೆ ಮಾತನಾಡಿದ್ದಾಳೆ.
ಮುಖೇಶ್ ದೇಸಾಯಿ ಜೊತೆ ಪೂಜಾ ದೇಸಾಯಿ ಫೋನ್‌ನಲ್ಲೇ ಪ್ರಣಯದ ಸಂಭಾಷಣೆ ನಡೆಸಿ ಮೋಡಿ ಮಾಡುತ್ತಾಳೆ. ಒಂದು ಮಿಸ್ ಕಾಲ್‌ನಿಂದ ಶುರುವಾದ ಈ ಫೋನ್ ಪ್ರಣಯ ಹಾಗೇ ಮುಂದುವರಿಯುತ್ತೆ. ಪೂಜಾ ಎಂದು ಶುರುವಾದ ಈ ಫೋನ್ ಮಾತುಕತೆ ಬೇರೆ, ಬೇರೆ ಧ್ವನಿಯಲ್ಲಿ ವಂಚಿಸಲು ಶುರು ಮಾಡುತ್ತಾಳೆ. ಮೌಂಟ್ ಅಬುನಲ್ಲಿ ನನ್ನ ಕುಟುಂಬಕ್ಕೆ ಸಂಬಂಧಿಸಿದ 17 ಕೋಟಿ ಬೆಲೆ ಬಾಳುವ ಹೋಟೆಲ್ ಇದೆ. ಜೋಧ್‌ಪುರದಲ್ಲಿ 100 ಕೋಟಿ ಬೆಲೆ ಮಾಡುವ ಬಂಗಲೆ ಇದೆ ಎಂದು ಸುಳ್ಳು ಹೇಳುತ್ತಾಳೆ. 2018ರವರೆಗೂ ಮುಖೇಶ್ ದೇಸಾಯಿ 3.55 ಕೋಟಿ ರೂಪಾಯಿ ಹಣ ಕಳುಹಿಸುತ್ತಾನೆ. ಇದಾದ ಮೇಲೆ ಪೂಜಾ ಫೋನ್ ಮಾಡೋದನ್ನು ನಿಲ್ಲಿಸಿದಾಗ ಅನುಮಾನ ಶುರುವಾಗುತ್ತೆ. ಕೊನೆಗೊಂದು ದಿನ ಮುಖೇಶ್ ದೇಸಾಯಿ ಪೂಜಾಳನ್ನ ಹುಡುಕಲು ಪ್ರಯತ್ನಿಸುತ್ತಾನೆ. ಆದ್ರೆ ಆ ಮಹಿಳೆ ನಾಲ್ಕು ಬೇರೆ, ಬೇರೆ ಹೆಸರಿನಲ್ಲಿ ಯಾಮಾರಿಸುತ್ತಾಳೆ. ಕೊನೆಗೆ ರೇಪ್ ಮತ್ತು ದೌರ್ಜನ್ಯ ನಡೆಸಿರುವ ಆರೋಪಿಸಿ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಾಳೆ. ಇಷ್ಟೆಲ್ಲಾ ಆದ ಮೇಲೆ ದೇಸಾಯಿ ಪೊಲೀಸರಿಗೆ ದೂರು ಕೊಟ್ಟು ಮೋಸ ಹೋದ ಈ ಮಾಯಾಜಾಲವನ್ನು ಬಿಚ್ಚಿಟ್ಟಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ