ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೂಲ್ ಕ್ಯಾಪ್ಟನ್ ಧೋನಿ ಬಗ್ಗೆ ಅಚ್ಚರಿ ಹೇಳಿಕೆ
ಕನ್ನಡಿಗನನ್ನು ಆಡಿಸಲು ಧೋನಿ ನನ್ನ ಪರ್ಮೀಷನ್ ಪಡೆದಿದ್ರು ಎಂದ ರೈನಾ..!
ಧೋನಿ ತನ್ನ ಪರ್ಮೀಷನ್ ಪಡೆದ ಬಗ್ಗೆ ಸತ್ಯ ಬಿಚ್ಚಿಟ್ಟ ಸುರೇಶ್ ರೈನಾ ಏನಂದ್ರು?
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2023 ಸೀಸನ್ನಲ್ಲಿ ಕಪ್ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮಧ್ಯೆ ರಾಬಿನ್ ಉತ್ತಪ್ಪಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯಿಂಗ್ ಎಲೆವೆನ್ನಲ್ಲಿ ಸ್ಥಾನ ನೀಡಲು ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ರೈನಾ ಪರ್ಮೀಷನ್ ಪಡೆದಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಖುದ್ದು ರೈನಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸಂವಾದವೊಂದರಲ್ಲಿ ರಾಬಿನ್ ಉತ್ತಪ್ಪ ಜತೆಗೆ ಮಾತಾಡಿದ ಸುರೇಶ್ ರೈನಾ ಹಳೇ ಘಟನೆ ಬಗ್ಗೆ ಮೆಲುಕು ಹಾಕಿದ್ದಾರೆ. ನಾನು ಗಂಭೀರವಾಗಿ ಗಾಯಗೊಂಡಿದ್ದೆ. ಟೂರ್ನಿಯಿಂದಲೇ ಹೊರಗೆ ಬರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನನ್ನೊಂದಿಗೆ ಮಾತಾಡುವಾಗ ಧೋನಿ ಅವರಿಗೆ ರಾಬಿನ್ ಉತ್ತಪ್ಪ ಅವರನ್ನು ಟ್ರೈ ಮಾಡಿ ಎಂದು ಸಲಹೆ ನೀಡಿದ್ದೆ ಎಂದರು.
ನಾನು ಈ ಬಾರಿ ಕಪ್ ಗೆಲ್ಲಬೇಕು ಎಂದಿದ್ದೇನೆ. 2008 ರಿಂದಲೂ ನಾವಿಬ್ಬರೂ ಜೊತೆಯಲ್ಲೇ ಆಡುತ್ತಿದ್ದೇವೆ. ಹೀಗಾಗಿ ನಾನೇನು ಮಾಡಬೇಕು ಎಂದು ಧೋನಿ ನನ್ನ ಬಳಿ ಕೇಳಿದರು. ಅದಕ್ಕೆ ನಾನು ಉತ್ತಪ್ಪಗೆ ಅವಕಾಶ ನೀಡಿ. ನಾನು ಆಡಿದ್ರೂ, ಉತ್ತಪ್ಪ ಆಡಿದ್ರೂ, ಇಬ್ಬರು ಒಂದೇ ಎಂದೆ. ನನ್ನ ಮಾತಿನ ಮೇಲೆ ನಂಬಿಕೆ ಇಡಿ ಎಂದು ಧೋನಿ ಅವರಿಗೆ ಒಪ್ಪಿಸಿದೆ ಎಂದು ರಾಬಿನ್ ಉತ್ತಪ ಜತೆಗಿನ ಸಂವಾದದಲ್ಲಿ ರಿವೀಲ್ ಮಾಡಿದ್ರು ರೈನಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ