newsfirstkannada.com

ಮೊದಲ ಇನ್ನಿಂಗ್ಸ್​​ನಲ್ಲಿ ವಿಲನ್​​​, 2ನೇ ಇನ್ನಿಂಗ್ಸ್​​​ನಲ್ಲಿ ಹೀರೋ.. ಸೂರ್ಯ ರಿಯಲ್​ ಮ್ಯಾಚ್​​ ವಿನ್ನರ್​​!

Share :

Published June 30, 2024 at 6:56pm

  ಫೈನಲ್​ ಪಂದ್ಯದಲ್ಲಿ ಸೂರ್ಯಕುಮಾರ್​ ಕೈಯಲ್ಲಿದ್ದಳಾ ವಿಜಯಲಕ್ಷ್ಮಿ?

  ಎರಡನೇ ಇನ್ನಿಂಗ್ಸ್​​ನಲ್ಲಿ ರೋಚಕ ತಿರುವು ತಂದುಕೊಟ್ಟ ಸೂರ್ಯ..!

  ವಿಜಯಲಕ್ಷ್ಮಿ ಭಾರತ- ಆಫ್ರಿಕಾ ಎರಡು ಟೀಮ್​ಗೂ ಆಸೆ ಹುಟ್ಟಿಸಿದ್ದಳು

ಟಿ20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ರೋಚಕವಾಗಿ ಗೆದ್ದು ಬೀಗಿದೆ. ಪಂದ್ಯ ನಡೆಯುವ ವೇಳೆ ವಿಜಯಲಕ್ಷ್ಮಿ ಎರಡು ತಂಡಗಳಿಗೂ ಆಸೆ ಹುಟ್ಟಿಸಿದ್ದಳು. ಲಾಸ್ಟ್​ ಬಾಲ್​ವರೆಗೂ ಪಂದ್ಯ ತೀವ್ರ ಕುತೂಹಲ ಹುಟ್ಟಿಸಿತ್ತು. ಆದರೆ ಕೊನೆಯದಾಗಿ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಮಾಡಿದ ಆ ಒಂದು ಮ್ಯಾಜಿಕ್​ನಿಂದ ವಿಜಯಲಕ್ಷ್ಮಿ ಭಾರತಕ್ಕೆ ಒಲಿದು ಬಂದಳು.

ಇದನ್ನೂ ಓದಿ: ಧೋನಿ, ಕೊಹ್ಲಿಯನ್ನೇ ಮೀರಿಸಿದ ರೋಹಿತ್.. T20 ವಿಶ್ವಕಪ್​​ನಲ್ಲಿ ವರ್ಲ್ಡ್​​​ ರೆಕಾರ್ಡ್​ ಮಾಡಿದ ಹಿಟ್​​ಮ್ಯಾನ್

T20 ಪಂದ್ಯಗಳಲ್ಲಿ ಸೂರ್ಯಕುಮಾರ್ ಅವರು ಹೇಳಿ ಮಾಡಿಸಿದಂಥ ಪ್ಲೇಯರ್. ಆದರೆ ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಸೂರ್ಯಕುಮಾರ್ ಯಾದವ್ ಸಂಪೂರ್ಣವಾಗಿ ವಿಫಲವಾಗಿದ್ದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಕ್ರೀಸ್​ಗೆ ಆಗಮಿಸಿದ್ದ ಸೂರ್ಯ ಕೇವಲ 4 ಎಸೆತ ಎದುರಿಸಿ 3 ರನ್​ಗಳಿಗೆ ಔಟ್ ಆಗಿ ಪೆವಿಲಿಯನ್​ ಕಡೆ ನಡೆದರು. ಇದು ತಂಡಕ್ಕೆ ಭಾರೀ ಪೆಟ್ಟು ಕೊಟ್ಟಿತ್ತು. ಭಾರತ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತಾದ್ರೂ ವಿರಾಟ್ ಅವರ ಅಮೋಘವಾದ ಬ್ಯಾಟಿಂಗ್ ಎಲ್ಲರನ್ನ ಪುಟಿದೇಳುವಂತೆ ಮಾಡಿತು.

ಇದನ್ನೂ ಓದಿ: ಕಾಲೇಜು ಮುಂಭಾಗ ಸ್ಕಿಡ್ ಆಗಿ ಬಿದ್ದ ಬೈಕ್.. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು, ಯುವಕ ಗಂಭೀರ

2ನೇ ಇನ್ನಿಂಗ್ಸ್​​ನಲ್ಲಿ ಟಾರ್ಗೆಟ್ ಬೆನ್ನತ್ತಿದ್ದ ಸೌತ್ ಆಫ್ರಿಕಾ ತಂಡ ಆರಂಭದಲ್ಲಿ ಆಘಾತಕ್ಕೆ ಒಳಗಾದರು ಮಧ್ಯಮ ಕ್ರಮಾಂಕದಲ್ಲಿ ಕ್ಲಾಸೆನ್, ಸ್ಟಬ್ಸ್​ ಅವರ ಉತ್ತಮ ಬ್ಯಾಟಿಂಗ್​ನಿಂದ ಗೆಲುವಿನ ಆಸೆ ಚಿಗುರೊಡೆದಿತ್ತು. ಡೇವಿಡ್ ಮಿಲ್ಲರ್ ಪಂದ್ಯ ಗೆಲ್ಲಿಸುವ ಪಣತೊಟ್ಟಿದ್ದರು. ಈ ವೇಳೆ ಮಿಲ್ಲರ್ ಬಾರಿಸಿದ್ದ ಬಾಲ್ ಅನ್ನು ಬೌಂಡರಿ ಗೆರೆ ಬಳಿ ಫೀಲ್ಡಿಂಗ್​ ಮಾಡ್ತಿದ್ದ ಸೂರ್ಯಕುಮಾರ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಇದೇ ಇಡೀ ತಂಡಕ್ಕೆ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಒಂದು ವೇಳೆ ಮಿಲ್ಲರ್ ಇನ್ನೊಂದೆರಡು ಬಾಲ್ ಆಡಿದ್ರೆ ಭಾರತದಿಂದ T20 ವಿಶ್ವಕಪ್​ ಕೈ ಜಾರಿ ಹೋಗುತ್ತಿತ್ತು. ಆದರೆ ಸೂರ್ಯಕುಮಾರ್ 2 ಕ್ಯಾಚ್​ಗಳನ್ನ ಹಿಡಿದಿದ್ದರಿಂದ ವಿಜಯಲಕ್ಷ್ಮಿ ಭಾರತಕ್ಕೆ ಒಲಿದಳು ಎಂದು ಹೇಳಬಹುದು. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮೊದಲ ಇನ್ನಿಂಗ್ಸ್​​ನಲ್ಲಿ ವಿಲನ್​​​, 2ನೇ ಇನ್ನಿಂಗ್ಸ್​​​ನಲ್ಲಿ ಹೀರೋ.. ಸೂರ್ಯ ರಿಯಲ್​ ಮ್ಯಾಚ್​​ ವಿನ್ನರ್​​!

https://newsfirstlive.com/wp-content/uploads/2024/06/SURYA_KUMAR-1.jpg

Load More