newsfirstkannada.com

ಸೂರ್ಯ, ಅಯ್ಯರ್​​ಗೆ ಆಘಾತ; ಟೆಸ್ಟ್​ಗೆ ಕಂಬ್ಯಾಕ್ ಮಾಡುವ ಕನಸಿಗೆ ಆರಂಭದಲ್ಲೇ ಭಗ್ನ..!

Share :

Published September 1, 2024 at 12:13pm

    ಬುಚ್ಚಿಬಾಬು ಟೂರ್ನಿಯಲ್ಲಿ ಸೂರ್ಯನಿಗೆ ಏನಾಯ್ತು..?

    ಬುಚ್ಚಿಬಾಬು ಟೂರ್ನಿಯಲ್ಲಿ ಶ್ರೇಯಸ್​​​ ಅಟ್ಟರ್ ಫ್ಲಾಪ್​​..!

    ಬಾಂಗ್ಲಾ ಟೆಸ್ಟ್​​ ಸರಣಿಯಿಂದ ಹೊರಬೀಳ್ತಾರಾ ಶ್ರೇಯಸ್​​..!

ಸೂರ್ಯಕುಮಾರ್​ ಯಾದವ್​ ಹಾಗೂ ಶ್ರೇಯಸ್ ಅಯ್ಯರ್​​. ಇವರಿಬ್ಬರ ಮುಂದಿನ ಗುರಿ ಒಂದೇ, ಬಾಂಗ್ಲಾದೇಶ ಟೆಸ್ಟ್​​ ಸರಣಿಯಲ್ಲಿ ಸ್ಥಾನ ಪಡೆಯೋದು. ಆದ್ರೆ ಇವರು ಕಂಡು ಕನಸು ಬರೀ ಕನಸಾಗಿಯೇ ಉಳಿಯುತ್ತಾ ಅನ್ನೋ ಅನುಮಾನ ಕಾಡ್ತಿದೆ.

ಟೀಮ್ ಇಂಡಿಯಾ ಆಟಗಾರರು ದುಲೀಪ್​ ಟ್ರೋಫಿ ಮೇಲೆ ಗಮನ ಹರಿಸಿದ್ದಾರೆ. ಸೆಪ್ಟೆಂಬರ್​​ 5 ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಬಿಸಿಸಿಐ ಆಯ್ಕೆ ಸಮಿತಿ ಆಟಗಾರರ ಪ್ರದರ್ಶನದ ಮೇಲೆ ಹದ್ದಿನ ಕಣ್ಣಿಡಲಿದೆ. ಉತ್ತಮ ಪ್ರದರ್ಶನದ ನೀಡಿದವರಿಗೆ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಡೋರ್​ ತೆರೆಯಲಿದೆ. ಹೀಗಾಗಿ ಪ್ರತಿಯೊಬ್ಬ ಆಟಗಾರರು ಈ ಬಾರಿಯ ದುಲೀಪ್ ಟ್ರೋಫಿಯನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆ ಪೈಕಿ ವಿಧ್ವಂಸಕ ಬ್ಯಾಟರ್ ಸೂರ್ಯಕುಮಾರ್​​​ ಯಾದವ್ ಕೂಡ ಒಬ್ಬರು. ಆದ್ರೀಗ ಈ ಬೆಂಕಿ ಬ್ಯಾಟರ್ ದೇಶಿ ಟೂರ್ನಿಯಿಂದ ಹೊರಬೀಳ್ತಾರೆ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ಗೆ ಶಾಕ್.. ರೋಹಿತ್​​ ಖರೀದಿಸಲು ಪ್ಲಾನ್ ರೆಡಿ ಎಂದ ಸ್ಟಾರ್ ಕೋಚ್..!

ಬುಚ್ಚಿಬಾಬು ಟೂರ್ನಿಯಲ್ಲಿ ಸೂರ್ಯನಿಗೆ ಗಂಭೀರ ಗಾಯ..!
ದುಲೀಪ್​ ಟ್ರೋಫಿ ಆರಂಭಕ್ಕೆ ಕ್ಷಗಣನೆ ಶುರುವಾಗ್ತಿದ್ದಂತೆ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್​​​ ಇಂಜುರಿ ಭೂತ ಬೆನ್ನೇರಿದೆ. ಬುಚ್ಚಿಬಾಬು ಟೂರ್ನಿಯ ವೇಳೆ ಸ್ಕೈ ಗಂಭೀರ ಗಾಯಗೊಂಡಿದ್ದಾರೆ. ಫೀಲ್ಡಿಂಗ್​ ವೇಳೆ ಬಾಲ್​​​​​​​ ಅನ್ನ ತಡೆಯುವ ಯತ್ನದಲ್ಲಿ ಕೈಗೆ ಗಂಭೀರ ಗಾಯಮಾಡಿಕೊಂಡಿದ್ದಾರೆ. ಹೀಗಾಗಿ ಅವರು 2ನೇ ಇನ್ನಿಂಗ್ಸ್​ನಲ್ಲಿ ಮುಂಬೈ ಪರ ಬ್ಯಾಟಿಂಗ್​​​ ಮಾಡಲು ಆಗಮಿಸಲಿಲ್ಲ. ಸ್ಕೈ ಇಂಜುರಿ ಸುದ್ದಿ ಗೊತ್ತಾಗ್ತಿದ್ದಂತೆ ಫ್ಯಾನ್ಸ್ ಆತಂಕಕ್ಕೊಳಗಾಗಿದ್ದಾರೆ.

ದುಲೀಪ್​ ಟ್ರೋಫಿಯಿಂದ ಸೂರ್ಯಕುಮಾರ್​ ಔಟ್
ಕೈಗೆ ಗಂಭೀರ ಗಾಯಮಾಡಿಕೊಂಡಿರೋ ಸೂರ್ಯಕುಮಾರ್​ ಆನ್​ಫೀಲ್ಡ್​ನಲ್ಲಿ ಕಾಣಿಸಿಕೊಂಡಿಲ್ಲ. ಗಂಭೀರ ಇಂಜುರಿ ಹಿನ್ನಲೆ ಚೇತರಿಕೆಗೆ ಸಮಯ ಅಗತ್ಯವಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್​​ 5 ರಿಂದ ದುಲೀಪ್ ಟ್ರೋಫಿ ರಂಗೇರಲಿದ್ದು, ಹೊಡಿ ಬಡಿ ಬ್ಯಾಟ್ಸ್​​ಮನ್ ಸೂರ್ಯಕುಮಾರ್​​​​ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗ್ತಿದೆ.

ಸೂರ್ಯರ ಟೆಸ್ಟ್​ ಕಮ್​ಬ್ಯಾಕ್​ ಕನಸು ಛಿದ್ರ
ದುಲೀಪ್​​​​ ಟ್ರೋಫಿಯ ಇಂಡಿಯಾ ಸಿ ತಂಡದಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ಯಾದವ್​​​​​ ಬಾಂಗ್ಲಾ ಟೆಸ್ಟ್​ ಸರಣಿಗೆ ಆಯ್ಕೆಯಾಗಿ ತಂಡಕ್ಕೆ ಕಮ್​ಬ್ಯಾಕ್​​ ಮಾಡುವ ಕನಸು ಕಂಡಿದ್ರು. ಅದಕ್ಕಾಗಿನೇ ಮುಂಬರೋ ದುಲೀಫ್​ ಟ್ರೋಫಿಯನ್ನ ಗಂಭೀರವಾಗಿ ತೆಗೆದುಕೊಂಡಿರೋದಾಗಿ ಹೇಳಿದ್ರು. ಆದ್ರೀಗ ಬುಚ್ಚಿಬಾಬು ಟೂರ್ನಿಯಲ್ಲಿ ಗಾಯಗೊಂಡು ಟೀಮ್ ಇಂಡಿಯಾಗೆ ಎಂಟ್ರಿಕೊಡುವ ಕನಸು ಕಮರುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದೆಡೆ ಸ್ಕೈ ಈ ಟೂರ್ನಿಯಲ್ಲಿ ಸ್ಕೈ ಇಂಪ್ರೆಸ್ಸಿವ್​ ಆಟವಾಡಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ಬರೀ 30 ರನ್ ಗಳಿಸಿದ್ದಾರೆ. ಇದು ಕೂಡ ಕೂಡ ಬಾಂಗ್ಲಾ ಟೆಸ್ಟ್​​ ಸರಣಿ ಆಯ್ಕೆಗೆ ತಣ್ಣೀರೆರೆಚಿದೆ.

ಇದನ್ನೂ ಓದಿ: ಮೂವರು ಕನ್ನಡಿಗರ ಖರೀದಿಗೆ RCB ಪಕ್ಕಾ ಪ್ಲಾನ್.. KL ರಾಹುಲ್ ಸೇರಿ ಇನ್ನಿಬ್ಬರು ಯಾರು?

ಒಂದೆಡೆ ಸೂರ್ಯಕುಮಾರ್ ಯಾದವ್ ಬುಚ್ಚಿಬಾಬು ಟೂರ್ನಿಯಲ್ಲಿ ಗಾಯಗೊಂಡಿದ್ರೆ ಇನ್ನೊಂದೆಡೆ ಇದೇ ಟೂರ್ನಿಯಲ್ಲಿ ಸ್ಟಾರ್ ಕ್ರಿಕೆಟರ್ ಶ್ರೇಯಸ್ ಅಯ್ಯರ್​​ ಅಟ್ಟರ್ ಫ್ಲಾಪ್ ಶೋ ನೀಡ್ತಿದ್ದಾರೆ. ಶಾರ್ಟ್​ ಬಾಲ್​ಗೆ ಟ್ರ್ಯಾಪ್​​​ ಆಗಿದ್ದಾರೆ. ಇಲ್ಲೆ ಹೀಗೆ ಆಡಿದ್ರೆ ದುಲೀಪ್​ ಟ್ರೋಫಿಯ ಕಥೆಯೇನು ಅಂತ ಫ್ಯಾನ್ಸ್ ಮಾತನಾಡಿಕೊಳ್ತಿದ್ದಾರೆ.

ಬುಚ್ಚಿಬಾಬು ಟೂರ್ನಿಯಲ್ಲಿ ಶ್ರೇಯಸ್​​​..!
ಸದ್ಯ ನಡೆಯುತ್ತಿರುವ ಬುಚ್ಚಿಬಾಬು ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್​ 2 ಇನ್ನಿಂಗ್ಸ್​ಗಳನ್ನ ಆಡಿದ್ದು ಬರೀ 24 ರನ್ ಗಳಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 82 ಎಸೆತ ತೆಗೆದುಕೊಂಡಿದ್ದಾರೆ. ಇನ್ನೂ 22 ಬೆಸ್ಟ್ ಸ್ಕೋರ್ ಆಗಿದೆ. ಶ್ರೇಯಸ್​ ಮುಂಬರೋ ಬಾಂಗ್ಲಾ ಟೆಸ್ಟ್​ ಸರಣಿಗೆ ಆಯ್ಕೆ ಆಗುವ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಬುಚ್ಚಿಬಾಬು ಟೂರ್ನಿಯಲ್ಲಿ ದಯನೀಯ ವೈಫಲ್ಯ ಕಂಡಿದ್ದಾರೆ. ಇದು ಶ್ರೇಯಸ್​ಗೆ ದೊಡ್ಡ ಸೆಟ್​ಬ್ಯಾಕ್ ಆಗಿದೆ. ಯಾಕಂದ್ರೆ ಈ ಟೂರ್ನಿಯಲ್ಲಿ ರನ್​​​​ ದರ್ಬಾರ್ ನಡೆಸಿದ್ರೆ ದುಲೀಪ್ ಟ್ರೋಫಿಯಲ್ಲಿ ಕಾನ್ಫಿಡೆನ್ಸ್​​​ನಿಂದ ಬ್ಯಾಟ್​ ಬೀಸಬಹುದಿತ್ತು. ಆ ಅವಕಾಶವನ್ನ ಶ್ರೇಯಸ್ ಕೈಚೆಲ್ಲಿದ್ದಾರೆ. ಈಗ ಇವರ ಅವರ ಮುಂದೆ ಇರೋದು ಒಂದೇ ದಾರಿ. ದುಲೀಪ್​ ಟ್ರೋಫಿಯಲ್ಲಿ ರನ್​​ ಗಳಿಸೋದು. ಅದ್ರಲ್ಲಿ ಸಕ್ಸಸ್ ಕಾಣ್ತಾರಾ ? ಇಲ್ಲ ಅಲ್ಲೂ ರನ್​ ಬರ ಕಂಟಿನ್ಯೂ ಆಗುತ್ತಾ ಅನ್ನೋದನ್ನ ಕಾದು ನೋಡೋಣ.

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರ್ಯ, ಅಯ್ಯರ್​​ಗೆ ಆಘಾತ; ಟೆಸ್ಟ್​ಗೆ ಕಂಬ್ಯಾಕ್ ಮಾಡುವ ಕನಸಿಗೆ ಆರಂಭದಲ್ಲೇ ಭಗ್ನ..!

https://newsfirstlive.com/wp-content/uploads/2024/09/SURYA-SHREYAS.jpg

Load More