newsfirstkannada.com

ವಿರಾಟ್​ ಕೊಹ್ಲಿ- ಸೂರ್ಯ ಕುಮಾರ್ ಮಧ್ಯೆ ಬಿಗ್ ಫೈಟ್​.. ಕ್ರಿಕೆಟ್​ ಕಿಂಗ್​ ಅನ್ನೇ ಹಿಂದಿಕ್ಕಿದ್ರಾ SKY?  

Share :

Published June 22, 2024 at 2:41pm

  ಇಂದು ಬಾಂಗ್ಲಾ ಎದುರು ಕಮ್​​ಬ್ಯಾಕ್ ಮಾಡ್ತಾರಾ ವಿರಾಟ್.?

  ಕಿಂಗ್ ಕೊಹ್ಲಿ- ಸೂರ್ಯ ಕುಮಾರ್ ನಡುವೆ ಏರ್ಪಟ್ಟ ಸಮರ

  ಪಾಕ್​ ಕ್ಯಾಪ್ಟನ್ ಬಾಬರ್ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕೊಹ್ಲಿ?

ಡಿಸ್ಟ್ರಕ್ಟಿವ್ ಸೂರ್ಯಕುಮಾರ್​ ಯಾದವ್​​​ ವರ್ಸಸ್ ಕಿಂಗ್​​​. ಈ ಇಬ್ಬರಲ್ಲಿ ಯಾರು ದಿ ಬೆಸ್ಟ್​ ರನ್ ಮಷೀನ್. ಕೊಹ್ಲಿನಾ ಅಥವಾ ಹೊಡಿಬಡಿ ಸೂರ್ಯನಾ ಇಂತಹದೊಂದು ಡಿಬೇಟ್​​​​​ ಮುನ್ನಲೆಗೆ ಬಂದಿದೆ. ಇಂತಹ ಬಿಸಿಬಿಸಿ ಚರ್ಚೆಗೆ ಕಾರಣ ಸ್ಕೈರ ಆ ವೊಂದು ಸುನಾಮಿ ಇನ್ನಿಂಗ್ಸ್​​​. ಅಷ್ಟಕ್ಕೂ ಆ ಇನ್ನಿಂಗ್ಸ್ ಯಾವುದು?. ಬೆಸ್ಟ್ ರೇಸ್​ಗಾಗಿ ಇಬ್ಬರ ಮಧ್ಯೆ ವಾರ್ ನಡೆಯುತ್ತಿರೋದ್ಯಾಕೆ?.

T20 ಕ್ರಿಕೆಟ್​​​​​ನಲ್ಲಿ ಯಾರು ದಿ ಬೆಸ್ಟ್​ ಪ್ಲೇಯರ್​​..?

ಟಿ20 ವಿಶ್ವಕಪ್​​​​ ಸೂಪರ್​​​-8ನಲ್ಲಿ ರೋಹಿತ್​​ ಪಡೆ ಭರ್ಜರಿ ಶುಭಾರಂಭ ಮಾಡಿದೆ. ಭಾರತದ ಡೆಡ್ಲಿ ಸ್ಪೆಲ್​ಗೆ ಅಫ್ಘಾನ್​​​ ಉಡೀಸ್ ಆಯ್ತು. ಸೂರ್ಯಕುಮಾರ್​ ಯಾದವ್​ ಕಟ್ಟಿದ ಸುನಾಮಿ ಇನ್ನಿಂಗ್ಸ್​​ನಿಂದ ಭಾರತಕ್ಕೆ ಗೆಲುವು ದಕ್ಕಿತು. ಸಂಕಷ್ಟದಲ್ಲಿ ದಿಟ್ಟ ಇನ್ನಿಂಗ್ಸ್ ಕಟ್ಟಿದ ಬೌಲರ್​​ ಹಂಟರ್ ಸೂರ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಬಾಚಿಕೊಂಡ್ರು. ಸದ್ಯ ಈ ಪ್ರಶಸ್ತಿಯಿಂದ ಟಿ20 ಕ್ರಿಕೆಟ್ ಲೋಕದಲ್ಲಿ ಕಿಂಗ್ ಕೊಹ್ಲಿ ಬೆಸ್ಟಾ ಅಥವಾ ಸ್ಕೈ ಬೆಸ್ಟಾ ಅನ್ನೋ ಅನ್ನೋ ಚರ್ಚೆಯನ್ನ ಹುಟ್ಟುಹಾಕಿದೆ.

ಇದನ್ನೂ ಓದಿ: ಹೆಂಡತಿಯನ್ನ ಕಟ್ಟಿ ಹಾಕಿ, ಗಂಡನಿಗೆ ಚೂರಿ ಇರಿತ​.. ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ ಗ್ಯಾಂಗ್

ಕೊಹ್ಲಿ-ಸ್ಕೈಗೆ ತಲಾ 15 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ

ಎಂದಿನಿಂದ ಡಿಸ್ಟ್ರಿಕ್ಟಿವ್​ ಇನ್ನಿಂಗ್ಸ್ ಕಟ್ಟಿದ ಸೂರ್ಯ ಅಫ್ಘಾನ್ ವಿರುದ್ಧ ಮ್ಯಾಚ್​​​ ಆಫ್ ದಿ ಮ್ಯಾಚ್​ ಅವಾರ್ಡ್​ ಗೆದ್ದು ಬೀಗಿದ್ರು. ಆ ಮೂಲಕ ವೃತ್ತಿಜೀವನದಲ್ಲಿ 15ನೇ ಸಲ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಬಾಚಿಕೊಂಡ್ರು. ಇದರೊಂದಿಗೆ ಕಿಂಗ್ ಕೊಹ್ಲಿಯನ್ನ ದಾಖಲೆಯನ್ನ ಸರಿಗಟ್ಟಿದ್ರು. ಸೆಂಚುರಿ ಮಾಸ್ಟರ್​ ಕೊಹ್ಲಿ ಕೂಡ 14 ವರ್ಷಗಳ ಟಿ20 ಕ್ರಿಕೆಟ್​ ಕರಿಯರ್​​ನಲ್ಲಿ ಸೂರ್ಯಕುಮಾರ್​ ಯಾದವ್​ರಷ್ಟೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಕಾರಿನಲ್ಲಿ ಮಹಿಳೆಯನ್ನು ಎಳೆದೊಯ್ದ ಪಾಪಿಗಳು.. ಗಂಡನ ಕಡೆಯವರಿಂದ ನಡೀತಾ ಕೃತ್ಯ?

ಈ ಪ್ರಶಸ್ತಿ ಸಮಬಲದ ಹೋರಾಟ ಸದ್ಯ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕ್ರಿಕೆಟ್​ ವಲಯದಲ್ಲಿ ಕೊಹ್ಲಿ ಹಾಗೂ ಸೂರ್ಯ ನಡುವೆ ಯಾರು ದಿ ಬೆಸ್ಟ್​ ಪ್ಲೇಯರ್ ಅನ್ನೋ ವಾದ-ಪ್ರತಿವಾದ ನಡೀತಿದೆ. ಕಮ್ಮಿ ಅವಧಿಯಲ್ಲಿ ಪ್ರಶಸ್ತಿಯಲ್ಲಿ ಲೆಜೆಂಡ್ರಿ ಕೊಹ್ಲಿಯನ್ನ ಸರಿಗಟ್ಟಿದ ಸೂರ್ಯ, ಒಟ್ಟಾರೆ ಟಿ20 ಕ್ರಿಕೆಟ್​ನಲ್ಲಿ ವಿಶ್ವ ವಿಕ್ರಮನಿಗೆ ಟಕ್ಕರ್ ಕೊಟ್ಟಿದ್ದಾರೆ.

T20 ಕ್ರಿಕೆಟ್​ನಲ್ಲಿ ಕೊಹ್ಲಿ-ಸೂರ್ಯ

ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 113 ಇನ್ನಿಂಗ್ಸ್​ಗಳನ್ನ ಆಡಿದ್ದಾರೆ. 1 ಶತಕವನ್ನ ಸಿಡಿಸಿದ್ರೆ, 137.59 ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ 61 ಇನ್ನಿಂಗ್ಸ್​ ಆಡಿರೋ ಸೂರ್ಯ ಆಗಲೇ 4 ಶತಕ ಹೊಡೆದಿದ್ದಾರೆ. 168.51 ರ ಇವರ ಬ್ಯಾಟಿಂಗ್ ಸ್ಟ್ರೈಕ್​ರೇಟ್ ಆಗಿದೆ.

ನಂ.1 ಪಟ್ಟ..ತಗ್ಗದ ಸೂರ್ಯ ದರ್ಬಾರ್​​​..!

2021 ರಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸೂರ್ಯ ಡಾನ್ ಆಗಿ ಮೆರೆದಾಡ್ತಿದ್ದಾರೆ. ಸ್ಫೋಟಕ ಆಟ, ರನ್​ ಮೇಲೆ ರನ್​​, ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ ಟಿ20 ಕ್ರಿಕೆಟ್​​​​​ನ ನಂ.1 ಆಟಗಾರ ಅನ್ನಿಸಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಸ್ಕೈ ಹವಾ ತಗ್ಗಿಲ್ಲ. ನಂ.1 ಪಟ್ಟವನ್ನ ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಏಯ್.. ದಯವಿಟ್ಟು..’ ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಕುಮಾರಸ್ವಾಮಿ ಫಸ್ಟ್ ರಿಯಾಕ್ಷನ್.. Video

ಮತ್ತೆ ಸಿಂಹಾಸನಪಟ್ಟಕ್ಕೇರಲು ಕೊಹ್ಲಿ ಕಾತರ..!

ಸೂರ್ಯ ನಂ.1 ಬ್ಯಾಟರ್ ಆದ್ರೆ ಕೊಹ್ಲಿ ಚುಟುಕು ಕ್ರಿಕೆಟ್​ನ ಚಕ್ರವರ್ತಿ ಆಗಲು ಹವಣಿಸ್ತಿದ್ದಾರೆ. ಸದ್ಯ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 4,066 ರನ್ ಗಳಿಸಿದ್ದಾರೆ. ಇನ್ನೂ 80 ರನ್ ಗಳಿಸಿ ಬಿಟ್ರೆ ಪಾಕ್​​ನ ಬಾಬರ್ ಅಝಂರನ್ನ ಹಿಂದಿಕ್ಕಿ, ಟಿ20 ಕ್ರಿಕೆಟ್​ನ ಕಿಂಗ್ ಅನ್ನಿಸಿಕೊಳ್ಳಲಿದ್ದಾರೆ. ವಿಶ್ವಕಪ್​ನಲ್ಲಿ ವಿರಾಟ್​ ಬರ ಎದುರಿಸ್ತಿದ್ದು, ಇಂದು ಬಾಂಗ್ಲಾ ಎದುರು ಕಮ್​​ಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಭೀಕರ ಘಟನೆ.. ಎಲ್ರೂ ನೋಡ್​ ನೋಡ್ತಿದ್ದಂತೆ ಟೆರಸ್​ ಮೇಲಿನಿಂದ ಬಿದ್ದ ಮಹಿಳೆ

ಸೂರ್ಯ ಹಾಗೂ ಕಿಂಗ್​ ಕೊಹ್ಲಿ ಟಿ20 ಕ್ರಿಕೆಟ್​ನ ಕ್ಲಾಸ್​​ & ಮಾಸ್​ ಕ್ರಿಕೆಟರ್ಸ್​. ವಿಭಿನ್ನ ಮ್ಯಾನರೀಸಮ್​ನಿಂದ ಫ್ಯಾನ್ಸ್ ರಂಜಿಸುವ ಕಲೆ ಈ ಭಲೇ ಜೋಡಿಗಳಿಗಿದೆ. ಹೀಗಾಗಿ ಇಬ್ಬರಲ್ಲಿ ಯಾರು ಬೆಸ್ಟ್​​ ಅನ್ನೋದು ಅತಿಶಯೋಕ್ತಿ ಮಾತು. ಹೋಲಿಕೆ ಬಿಟ್ಟು ಆಟವನ್ನ ಎಂಜಾಯ್ ಮಾಡಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್​ ಕೊಹ್ಲಿ- ಸೂರ್ಯ ಕುಮಾರ್ ಮಧ್ಯೆ ಬಿಗ್ ಫೈಟ್​.. ಕ್ರಿಕೆಟ್​ ಕಿಂಗ್​ ಅನ್ನೇ ಹಿಂದಿಕ್ಕಿದ್ರಾ SKY?  

https://newsfirstlive.com/wp-content/uploads/2024/06/SURYA_KOHLI.jpg

Load More