ಏಕದಿನ ಮಾದರಿಯಲ್ಲಿ ಸೂರ್ಯ ಕುಮಾರ್ ಬ್ಯಾಟಿಂಗ್ ವೈಫಲ್ಯ
360 ಖ್ಯಾತಿ ಆಟಗಾರನ ಹೊಡಿಬಡಿ ಆಟಕ್ಕಿದೆ ಬೇಜಾನ್ ಕ್ರೇಜ್
ವಿಶ್ವಕಪ್ ತಂಡದಲ್ಲಿ ಸೂರ್ಯನಿಗೆ ಸ್ಥಾನ ನೀಡಿದ್ಯಾಕೆ ಬಿಸಿಸಿಐ.?
ಬಹುತೇಕ ನಿರೀಕ್ಷಿತ ಟೀಮ್ ಇಂಡಿಯಾವನ್ನೇ ಸೆಲೆಕ್ಷನ್ ಕಮಿಟಿ ವಿಶ್ವಕಪ್ ಮೆಗಾ ಟೂರ್ನಿಗೆ ಪ್ರಕಟಿಸಿದೆ. ಅದ್ರೂ ಸೂರ್ಯ ಕುಮಾರ್ ಯಾದವ್ ಆಯ್ಕೆ ಸ್ವಲ್ಪ ಮಟ್ಟಿಗೆ ಸರ್ಪ್ರೈಸ್ ಅನಿಸ್ತಿದೆ. ಅಷ್ಟಕ್ಕೂ ಸೂರ್ಯ ಕುಮಾರ್ ವಿಶ್ವಕಪ್ ತಂಡಕ್ಕೆ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದೇಗೆ? ಸೂರ್ಯನ ಸೆಲೆಕ್ಷನ್ ಸೀಕ್ರೆಟ್ ಏನು?
ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್- 4ಗೆ ಕ್ವಾಲಿಫೈ ಆಗ್ತಿದ್ದಂತೆ, ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಅಧಿಕೃತ ಸಿದ್ಧತೆ ಆರಂಭವಾಗಿದೆ. ತವರಿನಲ್ಲಿ ನಡೆಯೋ ಮೆಗಾ ಟೂರ್ನಿಗೆ ಟೀಮ್ ಇಂಡಿಯಾ ಸೀನಿಯರ್ ಸೆಲೆಕ್ಷನ್ ಕಮಿಟಿ 15 ಬಲಿಷ್ಠ ಆಟಗಾರರ ತಂಡವನ್ನ ಪ್ರಕಟಿಸಿದೆ. ಅಳೆದು ತೂಗಿ ಲೆಕ್ಕಾಚಾರ ಹಾಗಿ ಪರ್ಫೆಕ್ಟ್ ಫಿಫ್ಟೀನ್ಗೆ ಮಣೆ ಹಾಕಲಾಗಿದೆ.
ಬಹುತೇಕ ನಿರೀಕ್ಷಿತ, ಆದ್ರೂ ಸರ್ಪ್ರೈಸ್ ತಪ್ಪಿಲ್ಲ..!
ವಿಶ್ವಕಪ್ಗೆ ಆಯ್ಕೆ ಮಾಡಲಾಗಿರುವ ತಂಡದ ಬಹುತೇಕ ನಿರೀಕ್ಷಿತವೇ ಆಗಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ಅನುಭವಿಗಳಿಗೆ ಚಾನ್ಸ್ ನೀಡಲಾಗಿದೆ. ಆದ್ರೂ, ಟಿ20ಯ ನಂಬರ್- 1 ಬ್ಯಾಟ್ಸ್ಮನ್ ಸೂರ್ಯಕುಮಾರ್ರನ್ನ ಏಕದಿನ ವಿಶ್ವಕಪ್ಗೆ ಆಯ್ಕೆ ಮಾಡಿರೋದು ಸ್ವಲ್ಪ ಮಟ್ಟಿಗೆ ಆಶ್ಚರ್ಯ ಮೂಡಿಸಿದೆ.
ಟಿ20 ಫಾರ್ಮೆಟ್ನಲ್ಲಿ ಸೂರ್ಯ ಕುಮಾರ್ ಯಾದವ್ ಒಬ್ಬ ವಿಸ್ಫೋಟಕ ಬ್ಯಾಟ್ಸ್ಮನ್. ತನ್ನ 360 ಡಿಗ್ರಿ ಆಟದಿಂದಲೇ ಎದುರಾಳಿಯ ಗೇಮ್ಪ್ಲಾನ್ ಉಲ್ಟಾ ಮಾಡಬಲ್ಲ ತಾಕತ್ತು ಸೂರ್ಯನಿಗಿದೆ. ಚುಟುಕು ಫಾರ್ಮೆಟ್ನಲ್ಲಿ ಈವರೆಗೆ ಮಾಡಿರುವ ವಿಧ್ವಂಸಕ ಬ್ಯಾಟಿಂಗ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಏಕದಿನ ಮಾದರಿಯಲ್ಲಿ ಸೂರ್ಯಕುಮಾರ್ ಸೈಲೆಂಟ್.!
ಟಿ20 ಫಾರ್ಮೆಟ್ ಅಮೋಘ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಸೂರ್ಯ ಕುಮಾರ್ ಯಾದವ್ ಏಕದಿನ ಫಾರ್ಮೆಟ್ನಲ್ಲಿ ಮಕಾಡೆ ಮಲಗಿದ್ದಾರೆ. ಒಡಿಐ ಕ್ರಿಕೆಟ್ನಲ್ಲಿ ರನ್ಗಳಿಕೆಗೆ ಪರದಾಟ ನಡೆಸಿರುವ ಸೂರ್ಯ ಕುಮಾರ್, ಎದುರಾಳಿಗಳಿಗೆ ಸುಲಭದ ತುತ್ತಾಗಿದ್ದಾರೆ. ಈ ಹಿಂದಿನ ವೆಸ್ಟ್ ಇಂಡೀಸ್ ಟೂರ್ನಲ್ಲಿ ಕೂಡ ಸೂರ್ಯ ಬ್ಯಾಟ್ ರನ್ ಬರ ಎದುರಿಸ್ತು.
ಏಕದಿನ ಮಾದರಿಯಲ್ಲಿ ಸೂರ್ಯಕುಮಾರ್
ಏಕದಿನ ಮಾದರಿಯಲ್ಲಿ ಈವರೆಗೆ 26 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್, ಕೇವಲ 511 ರನ್ಗಳಿಸಿದ್ದಾರೆ. 24.00ರ ಕಳಪೆ ಸರಾಸರಿಯಲ್ಲಿ ರನ್ಗಳಿಸಿರೋ ಸೂರ್ಯಕುಮಾರ್, ಕೇವಲ 2 ಬಾರಿ ಅರ್ಧಶತಕದ ಗಡಿದಾಟಿದ್ದಾರೆ.
ವಿಶ್ವಕಪ್ಗೆ ಸೂರ್ಯನ ಸೆಲೆಕ್ಷನ್ ಸೀಕ್ರೆಟ್ ಏನು.?
ಏಕದಿನ ಫಾರ್ಮೆಟ್ನಲ್ಲಿ ರನ್ಗಳಿಕೆಗೆ ಪರದಾಡ್ತಾ ಇದ್ರೂ, ಮಹತ್ವದ ವಿಶ್ವಕಪ್ ಟೂರ್ನಿಗೆ ಸೂರ್ಯಕುಮಾರ್ನ ಸೆಲೆಕ್ಟ್ ಮಾಡಿದ್ಯಾಕೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಟೀಮ್ ಮ್ಯಾನೇಜ್ಮೆಂಟ್ & ಸೆಲೆಕ್ಷನ್ ಕಮಿಟಿ ಕೂಡ ಈ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದೆ. ಹಾಗಿದ್ರೂ, ಚಾನ್ಸ್ ನೀಡಿರೋದ್ರ ಹಿಂದೆ ಒಂದು ಸೀಕ್ರೆಟ್ ಇದೆ.
6ನೇ ಸ್ಲಾಟ್ನಲ್ಲಿ ರಿಯಲ್ ಆಟ ಆಡೋ ಟಾಸ್ಕ್.!
ಹೇಳಿ ಕೇಳಿ ಸೂರ್ಯ ಕುಮಾರ್ ಯಾದವ್ ಹೊಡಿ ಬಡಿ ಆಟಗಾರ. ಇದೇ ಸೂರ್ಯ ಕುಮಾರ್ ಸ್ಟ್ರೆಂಥ್. ಇದನ್ನ ಅರಿತಿರೂ ಮ್ಯಾನೇಜ್ಮೆಂಟ್ ಸೂರ್ಯನನ್ನ 6ನೇ ಕ್ರಮಾಂಕದಲ್ಲಿ ಆಡಿಸೋ ಪ್ಲಾನ್ ರೂಪಿಸಿದೆ. ಅಂತಿಮ ಹಂತದಲ್ಲಿ ಅಂದ್ರೆ, ಕೊನೆಯ 10 ಓವರ್ಗಳ ವೇಳೆ ಕಣಕ್ಕಿಳಿದು ಸ್ಫೋಟಕ ಆಡವಾಡೋದು ಸದ್ಯ ಸೂರ್ಯನ ಮುಂದಿರೋ ಟಾಸ್ಕ್.
ಟೀಮ್ ಇಂಡಿಯಾದ ಈ ಸ್ಟ್ರಾಟಜಿ ಏನೋ ಸಖತ್ತಾಗಿದೆ. ಆದ್ರೆ, ಆನ್ಫೀಲ್ಡ್ನಲ್ಲಿ ಇದೆಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದೆ ಪ್ರಶ್ನೆಯಾಗಿದೆ. ಆಲ್ರೆಡಿ ದ್ವಿಪಕ್ಷೀಯ ಸರಣಿಗಳಲ್ಲಿ ಫೇಲ್ ಆಗಿರುವ ಸೂರ್ಯ, ವಿಶ್ವಕಪ್ನಂತಹ ಬಿಗ್ಸ್ಟೇಜ್ನಲ್ಲಿ ಪರ್ಫಾಮ್ ಮಾಡ್ತಾರಾ.? ಅನ್ನೋ ಅನುಮಾನ ಸಹಜವಾಗಿಯೇ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ