ಜಗತ್ತಿನಲ್ಲಿ ಒಂದೇ ತರಹ ಏಳು ಜನ ಇರುತ್ತಾರೆ ನಿಜ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ
ವೈರಲ್ ಆದ ಈ ವಿಡಿಯೋ ಹಿಂದಿನ ಅಸಲಿಯತ್ತೇನು!
ಜಗತ್ತಿನಲ್ಲಿ ಒಂದೇ ತರಹ ಏಳು ಜನ ಇರುತ್ತಾರೆ ಎಂಬ ಮಾತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿ ಅಚ್ಚರಿ ಮೂಡಿಸಿದೆ. ಆ ವಿಡಿಯೋದಲ್ಲಿ ಸೇಮ್ ಟು ಸೇಮ್ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರಂತೆಯೇ ಕಾಣುವ ಮತ್ತೋರ್ವ ಯುವಕ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ಥೇಟ್ ಬಾಲಿವುಡ್ ನಟ ಸುಶಾಂತ್ ಸಿಂಗ್ ಜೆರಾಕ್ಸ್ ಕಾಪಿಯಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಸುಶಾಂತ್ ಜೀವಂತವಾಗಿದ್ದಾರೆ, ಥೇಟ್ ಸುಶಾಂತ್ ಸಿಂಗ್ ತರಹವೇ ಇದ್ದಾರೆ. ಮಿಸ್ ಯೂ ಸುಶಾಂತ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ವಿಡಿಯೋ ಫೇಕ್, ಲೈಕ್ಗಾಗಿ ಈ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ. ಇದನ್ನು ಫೇಸ್ ಌಪ್ ಬಳಸಿ ಮಾಡಲಾಗಿದೆ ಎಂದು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ವೈರಲ್ ಆಗಿದ್ದ ವಿಡಿಯೋಗೆ 20.1 ಮಿಲಿಯನ್ ವಿವ್ಸ್ ಪಡೆದುಕೊಂಡಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಭಾರತೀಯ ಚಿತ್ರರಂಗದಲ್ಲಿನ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿದ್ದರು. ಜೂನ್ 14 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ಅವರ ಹಠಾತ್ ನಿಧನದಿಂದ ಎಲ್ಲರಿಗೂ ಆಘಾತ ಉಂಟಾಗಿತ್ತು. ತನಿಖೆ ವೇಳೆ ಸುಶಾಂತ್ ಸಿಂಗ್ ಅವರದ್ದು ‘ಆತ್ಮಹತ್ಯೆ’ ಎಂದು ಹೇಳಲಾಯಿತು. ಆದರೆ, ಸುಶಾಂತ್ ಸಿಂಗ್ ಕುಟುಂಬಸ್ಥರಿಗೆ ಬೇರೆಯದ್ದೇ ಅನುಮಾನ ವ್ಯಕ್ತಪಡಿಸಿದ್ದರು.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ