ನಾಪತ್ತೆಯಾದ ಶಂಕಿತ ಉಗ್ರ ಜುನೈದ್ ಸಾಮಾನ್ಯ ಅಲ್ವೇ ಅಲ್ಲ
21ನೇ ವಯಸ್ಸಿನಲ್ಲೇ ಮಾಡಬಾರದ್ದು ಮಾಡಿ ಜೈಲು ಸೇರಿದ್ದ
ಉಗ್ರರೊಂದಿಗೆ ಬೆರೆತು ಡೇಂಜರಸ್ ಟೀಂ ರಚಿಸಿದ್ದ ಜುನೈದ್
ಸಿಸಿಬಿ ಕಾರ್ಯಚರಣೆ ವೇಳೆ ಐವರು ಶಂಕಿತ ಉಗ್ರರು ಪೊಲೀಸರ ಬಲೆಗೆ ಬಿದ್ದರೆ ಜುನೈದ್ ಎಂಬಾತ ನಾಪತ್ತೆಯಾಗಿದ್ದಾನೆ. ಈ ನಾಪತ್ತೆ ಯಾದ ಜುನೈದ್ ಹಲವು ಕೇಸ್ನಲ್ಲಿ ಭಾಗಿಯಾಗಿದ್ದು, ಆತನ ಕುರಿತಾದ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ.
ನೂರ್ ಅಹ್ಮದ್ನ ಕೊಲೆ
29 ವರ್ಷದ ಜುನೈದ್ ಕಿಡ್ನಾಪ್, ಕೊಲೆ ಸೇರಿ ಜೈಲು ಸೇರಿದ್ದವನು ಶಂಕಿತ ಉಗ್ರನಾಗಿ ಕಾಣಿಸಿಕೊಂಡಿದ್ದಾನೆ. ಈತನ ಮೇಲೆ 2017ರಲ್ಲೇ ಹಲವು ಪ್ರಕರಣಗಳು ದಾಖಲಾಗಿದ್ದವು. ಈತ ಮತ್ತು ಈತನ ಟೀಂ 21 ವರ್ಷದ ನೂರ್ ಅಹ್ಮದ್ ಎಂಬಾತನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದರು. ಇದೇ ವಿಚಾರಕ್ಕೆ ಜುನೈದ್, ಸುಹೈಲ್, ಮುದಾಸಿರ್, ಜಾನಿದ್ ಸೇರಿ 21 ಜನ ಅರೆಸ್ಟ್ ಆಗಿದ್ದರು.
ಡೇಂಜರಸ್ ಟೀಂ ರಚಿಸಿದ್ದ ಜುನೈದ್
ಮಠದಹಳ್ಳಿಯಲ್ಲಿ ಕಿಡ್ನಾಪ್ ಮಾಡಿ ಗೌರಿ ಬಿದನೂರಿನಲ್ಲಿ ನೂರ್ ಅಹ್ಮದ್ನನ್ನು ಕೊಲೆ ಮಾಡಿದ್ದರು.ಈ ವೇಳೆ ಆರ್ ಟಿ ನಗರದ ಪೊಲೀಸರು ಏರ್ ಫೈರ್ ಮಾಡಿ ಅವರನ್ನು ಬಂಧಿಸಿದ್ದರು. ನಂತರ ಇಡೀ ಟೀಂ ಅನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಈ ವೇಳೆ ಒಳ ಹೋಗಿದ್ದ ಜುನೈದ್ ಹೊರ ಬರುವಾಗ ಡೇಂಜರಸ್ ಟೀಂ ರಚಿಸಿ ಹೊರಬಂದಿದ್ದ.
ಬಾಂಬ್ ಬ್ಲಾಸ್ಟಿಂಗ್ ಟ್ರೈನಿಂಗ್
ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಜುನೈದ್ ಉಗ್ರರ ಜೊತೆ ಕಾಂಟ್ಯಾಕ್ಟ್ ಬೆಳಸಿಕೊಂಡಿದ್ದ. ತಾನು ತನ್ನ ಟೀಂ ಸಮೇತ ಉಗ್ರ ಸಂಘಟನೆಗಾಗಿ ಕೆಲಸ ಮಾಡ್ತೀವಿ ಅಂತಾ ಕಾಂಟ್ಯಾಕ್ಟ್ ತೆಗೆದುಕೊಂಡಿದ್ದ. ಇದರ ಜೊತೆಗೆ ಉಗ್ರ ಸಂಘಟನೆಯೊಂದರ ಹ್ಯಾಂಡ್ಲರ್ಸ್ ನ ಜುನೈದ್ ತಂಡ ಕಾಂಟ್ಯಾಕ್ಟ್ ಮಾಡಿದ್ದರು. ಬಳಿಕ ವಿದ್ವಂಸಕ ಕೃತ್ಯಗಳ ಬಗ್ಗೆ ಟ್ರೈನಿಂಗ್, ಬಾಂಬ್ ಬ್ಲಾಸ್ಟಿಂಗ್ ಸೇರಿದಂತೆ ಹಲವು ಕೃತ್ಯಗಳ ಬಗ್ಗೆ ಟ್ರೈನಿಂಗ್ ಪಡೆದರು.
ಆದರೆ ಈ ವಿಚಾರ ತಿಳಿದಂತೆ ಸಿಸಿಬಿ ಪೊಲೀಸರು ಜುನೈದ್ ಟೀಂ ಅನ್ನು ಬಂಧಿಸಿದ್ದಾರೆ. ಅದರಲ್ಲಿ ಐವರು ಸಿಸಿಬಿ ವಶದಲ್ಲಿದ್ದರೆ ಜುನೈದ್ ಮಾತ್ರ ತಪ್ಪಿಸಿಕೊಂಡಿದ್ದಾನೆ. ಸದ್ಯ ಈತನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಬಂಧಿತ ಶಂಕಿತ ಉಗ್ರರನ್ನ ಮಡಿವಾಳ ಟೆಕ್ನಿಕಲ್ ಸೆಲ್ ನಲ್ಲಿ ತೀವ್ರ ವಿಚಾರಣೆ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ