newsfirstkannada.com

ಮಂಗಳೂರಲ್ಲಿ ಭಯ ಹುಟ್ಟಿಸಿದೆ ಡ್ರಗ್ಸ್ ಲೇಪಿತ ಚಾಕೊಲೇಟ್.. ಬರೋಬ್ಬರಿ ಒಂದು ಕ್ವಿಂಟಾಲ್ ಶಂಕಿತ ಚಾಕೊಲೇಟ್ ಸೀಜ್..!

Share :

21-07-2023

    ವಿದ್ಯಾರ್ಥಿಗಳಿಗೆ ಕದ್ದು-ಮುಚ್ಚಿ ನೀಡ್ತಿರುವ ಆರೋಪ

    ಡ್ರಗ್​ ಮಿಶ್ರಿತ ಚಾಕೊಲೇಟ್ ಕಂಡು ದಂಗಾದ ಪೊಲೀಸ್

    ಇದನ್ನು ಎಲ್ಲಿಂದ ತರಿಸುತ್ತಿದ್ದರಂತೆ ಗೊತ್ತಾ..?

ಮಂಗಳೂರು‌ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಾದಕ ವಸ್ತು ಮಿಶ್ರಿತ ಬಾಂಗ್ ಚಾಕೊಲೇಟ್​​ಗಳನ್ನು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ನಗರದ ಕಾರ್ ಸ್ಟ್ರೀಟ್ ಹಾಗೂ ಹೈಲ್ಯಾಂಡ್ ಎಂಬಲ್ಲಿನ‌ ಅಂಗಡಿಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದರು. ಡ್ರಗ್ಸ್​​ ಲೇಪಿತ ಚಾಕೊಲೇಟ್​ಗಳನ್ನು ತಂದು ಮಕ್ಕಳಿಗೆ ನೀಡುತ್ತಿದ್ದಾರೆ ಅನ್ನೋದ್ರ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಅಂತೆಯೇ ದಾಳಿ ಮಾಡಿ, ಮತ್ತು ಬರುವ ಚಾಕೊಲೇಟ್​ಗಳನ್ನು ಸೀಜ್ ಮಾಡಿದ್ದಾರೆ.

ಉತ್ತರ ಭಾರತದಿಂದ ತಂದು ಅದನ್ನು ರಹಸ್ಯವಾಗಿ ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಮಾರಾಟ ಮಾಡ್ತಿದ್ದರಂತೆ. ದಾಳಿಯಲ್ಲಿ ಬರೋಬ್ಬರಿ 100 ಕೆಜಿ ಬಾಂಗ್ ಚಾಕೊಲೇಟ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಚಾಕೊಲೇಟ್​ಗೆ ಏನೆಲ್ಲಾ ಬೆರೆಸಲಾಗಿದೆ ಅನ್ನೋದನ್ನು ತಿಳಿಯಲು ಸ್ಯಾಂಪಲ್ಸ್​ ಎಫ್ಎಸ್ಎಲ್​ಗೆ ರವಾನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಗಳೂರಲ್ಲಿ ಭಯ ಹುಟ್ಟಿಸಿದೆ ಡ್ರಗ್ಸ್ ಲೇಪಿತ ಚಾಕೊಲೇಟ್.. ಬರೋಬ್ಬರಿ ಒಂದು ಕ್ವಿಂಟಾಲ್ ಶಂಕಿತ ಚಾಕೊಲೇಟ್ ಸೀಜ್..!

https://newsfirstlive.com/wp-content/uploads/2023/07/MNG_BANG.jpg

Load More