4 ವರ್ಷದಿಂದ ವಿದೇಶದಲ್ಲಿ ಅಡಗಿದ್ದ ಆರೋಪಿ ಅರ್ಷದ್
ವಿದೇಶದಲ್ಲಿ ಉಗ್ರ ಜುನೈದ್ ಜೊತೆ ಒಂದು ವರ್ಷ ವಾಸ್ತವ್ಯ
ಅರ್ಷದ್ ಖಾನ್ ತನ್ನ ತಾಯಿಯನ್ನ ನೋಡಲು ಬಂದಿದ್ದ
ಬೆಂಗಳೂರು: ಆತ ನಟೋರಿಯಸ್ ರೌಡಿ ಶೀಟರ್, ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ತಗಲಾಕ್ಕೊಂಡಿದ್ದ 5 ಶಂಕಿತ ಉಗ್ರರ ಮಾಸ್ಟರ್ ಮೈಂಡ್ ಜುನೈದ್ ಸಹಚರ. ಇಷ್ಟು ದಿನ ಪೊಲೀಸರ ಕಣ್ಣು ತಪ್ಪಿಸಿ ಓಡಾಡ್ತಿದ್ದ. ಆದ್ರೆ, ಎಷ್ಟು ದಿನ ಅಂತಾ ಕಣ್ಣಾಮುಚ್ಚಾಲೆ ಆಡಕ್ಕಾಗುತ್ತೆ ಹೇಳಿ. ಕೊನೆಗೂ ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸ್ ಪಡೆ ನಡೆಸಿದ ಮುಂಜಾನೆ ಕಾರ್ಯಾಚರಣೆಯೇ ರೋಚಕ.
ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನ ಅರೆಸ್ಟ್ ಮಾಡಿದ್ರು. ತನಿಖೆ ವೇಳೆ ಅವರ ಬಳಿ ಗ್ರೆನೇಡ್ ಇರೋದು ಕೂಡ ಪತ್ತೆಯಾಗಿತ್ತು. ಅದರ ಮೂಲಕ ಹುಡುಕುತ್ತಾ ಹೊರಟ ಪೊಲೀಸರಿಗೆ ಗ್ರೆನೇಡ್ ತಂದುಕೊಟ್ಟಿದ್ದು, ಶಂಕಿತ ಉಗ್ರ ಜುನೈದ್ ಅನ್ನೋದು ಗೊತ್ತಾಗಿತ್ತು. ಸದ್ಯ ಜುನೈದ್ ತಲೆ ಮರೆಸಿಕೊಂಡಿದ್ದು, 2017ರ ಕೇಸೊಂದ್ರಲ್ಲಿ ಆತನ ಜೊತೆಗಿದ್ದ ಸಹಚರ ಅರೆಸ್ಟ್ ಆಗಿದ್ದಾನೆ.
ಹೆಸರು ಮೊಹಮ್ಮದ್ ಅರ್ಷದ್ ಖಾನ್. ಆರ್.ಟಿ.ನಗರ ಪೊಲೀಸ್ ಠಾಣೆಯ ರೌಡಿ ಶೀಟರ್. ಕೊಲೆ ,ಕೊಲೆ ಯತ್ನ, ರಾಬರಿ, ಕಳ್ಳತನ ಸೇರಿದಂತೆ 17 ಕೇಸ್ ಗಳು ಈತನ ಮೇಲಿದೆ. ಅಷ್ಟೇ ಅಲ್ಲ, 2017 ರಲ್ಲಿ ನಡೆದ ನೂರ್ ಅಹಮ್ಮದ್ ಎಂಬಾತನ ಕಿಡ್ನಾಪ್ ಮತ್ತು ಕೊಲೆ ಕೇಸ್ ನಲ್ಲಿ ಜುನೈದ್ ಸೇರಿದಂತೆ 21 ಜನ ಆರೋಪಿಗಳ ಪೈಕಿ ಈತನು ಒಬ್ಬ. ಅಂದು ಜೈಲಿಗೆ ಹೋಗಿ ಬಂದವನು ಕ್ರಿಮಿನಲ್ ಆಗಿ ಬೆಳೆದುಬಿಟ್ಟಿದ್ದ. ಅಟ್ಟಹಾ ಸ ಮೆರೆಯುತ್ತಾ. ತಲೆ ಮರೆಸಿಕೊಂಡಿದ್ದ.
ಅರ್ಷದ್ಗೆ ಬಲೆ ಬೀಸಿದ್ದು ಹೇಗೆ..?
4 ವರ್ಷದಿಂದ ವಿದೇಶದಲ್ಲಿ ಅಡಗಿದ್ದ ಆರೋಪಿ ಅರ್ಷದ್, ವಿದೇಶದಲ್ಲಿ ಉಗ್ರ ಜುನೈದ್ ಜೊತೆ ಒಂದು ವರ್ಷ ವಾಸವಾಗಿದ್ದ. ಇತ್ತೀಚೆಗೆ ವಿದೇಶದಿಂದ ತನ್ನ ತಾಯಿಯನ್ನ ನೋಡಲು ಅರ್ಷದ್ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅರ್ಷದ್ನನ್ನ ಬಂಧಿಸಿದ್ದಾರೆ. ಅಚ್ಚರಿ ಅಂದ್ರೆ, ಅರ್ಷದ್ ಫೋನ್ ಲೊಕೇಶನ್ ಕೋಲಾರದಲ್ಲಿ ತೋರಿಸಿದೆ. ಆದ್ರೆ, ಆತ ಸಿಕ್ಕಿದ್ದು ಆರ್.ಟಿ ನಗರದಲ್ಲಿ. ಕೊನೆಗೆ ಹರ್ಷದ್ ತಾಯಿಯ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು, ಮನೆ ಬಾಗಿಲು ಒಡೆದು ನೋಡಿದಾಗ ತಾಯಿ ಜೊತೆ ಅರ್ಷದ್ ಇರುವುದು ಗೊತ್ತಾಗಿದೆ. ಸದ್ಯ 10 ದಿನಗಳ ಕಾಲ ಅರ್ಷದ್ನನ್ನ ಕಸ್ಟಡಿಗೆ ಪೊಲೀಸರು ಪಡೆದಿದ್ದಾರೆ.
ಚಾಕುವಿನಿಂದ ಕತ್ತು ಕೊಯ್ದುಕೊಂಡು ಹೈಡ್ರಾಮಾ
ಮೊಹಮ್ಮದ್ ಅರ್ಷದ್ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಅಷ್ಟೇ ಅಲ್ಲ, ಸ್ವತಃ ತಾನೆ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋಕೆ ಮುಂದಾಗಿದ್ದ. ಅಲ್ಲದೇ ಎರಡನೇ ಮಹಡಿಯಿಂದ ಜಿಗಿಯಲು ರೆಡಿಯಾಗಿದ್ದ. ಅಷ್ಟರಲ್ಲೇ ಲಾಕ್ ಮಾಡಿ ಪೊಲೀಸರು ಎತ್ತಾಕ್ಕೊಂಡು ಬಂದಿದ್ದಾರೆ.
ಸದ್ಯ ಆರೋಪಿಯನ್ನ ವಶಕ್ಕೆ ಪಡೆದುಕೊಂಡಿರೊ ಪೊಲೀಸರು ಜುನೈದ್ ಜೊತೆಗೆ ಈಗಲೂ ಸಂಪರ್ಕದಲ್ಲಿದ್ದಾನಾ? ಉಗ್ರ ಚಟುವಟಿಕೆಯಲ್ಲಿ ಏನಾದ್ರು ಭಾಗಿಯಾಗಿದ್ದಾನಾ ಅನ್ನೋದರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕ್ತಿದ್ದಾರೆ. ಸಿಸಿಬಿ ಪೊಲೀಸರು ಕೂಡ ಮಾಹಿತಿ ಪಡೆದುಕೊಂಡಿದ್ದು, ವಿಚಾರಣೆ ಬಳಿಕ ಈತನ ಇಡೀ ಹಿಸ್ಟರಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ