newsfirstkannada.com

ಬೆಂಗಳೂರನ್ನೇ ಟಾರ್ಗೆಟ್​​ ಮಾಡಿದ ನರಹಂತಕರು; ಶಂಕಿತ ಉಗ್ರರಿಗಿದ್ಯಾ ಪಾಕಿಸ್ತಾನದ ಲಿಂಕ್​?

Share :

20-07-2023

    ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ

    ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಶಂಕಿತರ ಸ್ಕೆಚ್‌

    ರಕ್ತಪಿಪಾಸುಗಳ ಬಳಿ ಇದ್ದವು ಸ್ಫೋಟಕ ವಸ್ತುಗಳು..!

ಬೆಂಗಳೂರು: ಕರ್ನಾಟಕ ಶಾಂತಿಯ ತವರೂರು. ಜನರ ವಾಸಕ್ಕೆ ಸೇಫೆಸ್ಟ್‌ ರಾಜ್ಯ ಎಂದೇ ಖ್ಯಾತಿ. ಆದ್ರೀಗ ರಾಜ್ಯ ರಾಜಧಾನಿ ನರರಕ್ಕಸರ ಕೂಪವಾಗ್ತಿದ್ಯಾ? ಹೀಗೊಂದು ಪ್ರಶ್ನೆ ಜನರನ್ನ ಕಾಡತೊಡಗಿದೆ. ಸಿಲಿಕಾನ್ ಸಿಟಿಯ ಬಿಲಗಳಲ್ಲಿ ಅಡಗಿ ಕೂತು ನರಪಾತಕಿಗಳು ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ರು ಎಂಬ ಸ್ಫೋಟಕ ಸಂಗತಿ ಬಯಲಾಗಿದೆ. ‘ಉಗ್ರ’ ಕೃತ್ಯಕ್ಕೆ ಕೈಹಾಕಿದ್ದ ನರಹಂತಕರ ಜಾಲ ಸಿಸಿಬಿ ಬಲೆಗೆ ಬಿದ್ದಿದೆ.

ಇನ್ನು, ಬೆಂಗಳೂರು ರಾಜ್ಯ ಹೊರರಾಜ್ಯದ ಜನರನ್ನ ತನ್ನ ಮಡಿಲಲ್ಲಿ ಇಟ್ಟುಕೊಂಡು ಸಾಕುತ್ತಿರೋ ಸಿಟಿ. ಎಲ್ಲಿಂದಲೋ ಬಂದವರಿಗೂ ನೆಲೆ ಕಲ್ಪಿಸಿಕೊಡ್ತಿರೋ ನಗರ. ಹೀಗೆ ಎಲ್ಲರಿಗೂ ಉದ್ಯೋಗ-ಸೂರು ನೀಡುತ್ತಿರೋ ಸಿಟಿ ಮೇಲೆ ಉಗ್ರರ ಕರಿಛಾಯೆ ಬಿದ್ದಿದೆ. ಉದ್ಯಾನಗರಿ ಸೇರಿದಂತೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಆಗುಂತಕರ ಗುಂಪೊಂದು ಸ್ಕೆಚ್ ಹಾಕಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ

ಗ್ರೇನೆಡ್, ಪಿಸ್ತೂಲ್, ಬುಲೆಟ್ಸ್‌, ಮೊಬೈಲ್ಸ್‌, ಲ್ಯಾಪ್‌ಟಾಪ್‌.. ಇದೆಲ್ಲಾ ಯಾವುದೋ ಪಾಕ್ ಉಗ್ರರ ಕ್ಯಾಂಪ್‌ನ ದೃಶ್ಯವಲ್ಲ. ರಾಜ್ಯರಾಜಧಾನಿಯ ಬಿಲಗಳಲ್ಲಿ ಅಡಗಿ ಕೂತಿದ್ದ ರಕ್ತಪಿಪಾಸುಗಳ ಬಳಿ ಇದ್ದ ಸ್ಫೋಟಕ ವಸ್ತುಗಳು. ಯೆಸ್‌, ರಾಜ್ಯದ ಮೇಲೆ ನರಹಂತಕರ ಕಣ್ಣು ಬಿದ್ದಿದೆ ಅಂತ ಸಿಸಿಬಿ ಅಧಿಕಾರಿಗಳಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿತ್ತು. ಇದನ್ನೇ ಹಿಂಬಾಲಿಸಿ ಹೊರಟಿದ್ದ ಪೊಲೀಸರಿಗೆ ಬೆಂಗಳೂರಿನಲ್ಲಿ ಉಗ್ರರು ಅಡಗಿ ಕೂತಿರೋದು ತಿಳಿದುಬಂದಿತ್ತು. ಈ ಮಾಹಿತಿ ಆಧರಿಸಿ ಇವತ್ತು ಐವರು ಶಂಕಿತ ಉಗ್ರರಿಗೆ ಸಿಸಿಬಿ ಪೊಲೀಸರು ಖೆಡ್ಡಾ ತೋಡಿದ್ದಾರೆ. ಆರ್‌ಟಿ ನಗರ, ಹೆಬ್ಬಾಳ, ಡಿಜೆ ಹಳ್ಳಿಯಲ್ಲಿ ಅಡಗಿ ಕೂತಿದ್ದ ಐವರು ಶಂಕಿತ ಉಗ್ರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಐವರು ಉಗ್ರರು ಅರೆಸ್ಟ್‌

ಬಂಧಿತ ಶಂಕಿತ ಉಗ್ರರ ಟೀಂ ತಾವು ವಾಸವಿರೋ ಮನೆಯಲ್ಲಿ ಪಿಸ್ತೂಲ್, ಬಾಂಬ್, ರಾ ಮೆಟೀರಿಯಲ್ಸ್ ಸೇರಿದಂತೆ ಸ್ಫೋಟಕ್ಕೆ ​​ಬೇಕಾದ ವಸ್ತುಗಳನ್ನ ರೆಡಿಮಾಡಿಕೊಂಡಿದ್ರು. ಇದೇ ವಿಚಾರಕ್ಕೆ ಬೆಂಗಳೂರಿನ ಸುಲ್ತಾನಪಾಳ್ಯದ ಮಸೀದಿ ಬಳಿ ಟೆರರ್​ ಮೀಟಿಂಗ್ ಮಾಡ್ತಿದ್ದಾಗ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ​ಸೈಯದ್ ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ ಎಂಬ ಐವರು ಶಂಕಿತ ಉಗ್ರರನ್ನ ಸಿಸಿಬಿ ಅರೆಸ್ಟ್ ಮಾಡಿದೆ. ಮತ್ತೊಬ್ಬ ಪ್ರಮುಖ ಶಂಕಿತ ಉಗ್ರ ಜುನೈದ್ ಎಸ್ಕೇಪ್ ಆಗಿ ಸೌದಿಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.

ಉಗ್ರರಿಂದ ಸ್ಫೋಟಕ ವಸ್ತುಗಳನ್ನ ವಶಕ್ಕೆ ಪಡೆದ ಸಿಸಿಬಿ

ಶಂಕಿತ ಉಗ್ರರಾದ ​ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌, ಮತ್ತು ಎಸ್ಕೇಪ್ ಆಗಿರೋ ಜುನೈದ್‌ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸ್ಫೋಟಕ್ಕೆ ಪ್ಲಾನ್ ಮಾಡಿಕೊಂಡಿದ್ರು ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೇ ಉಗ್ರ ಕೃತ್ಯಕ್ಕೆ ಬೇಕಾದ ರಾ ಮೆಟೀರಿಯಲ್​​ಗಳನ್ನ ಒಗ್ಗೂಡಿಸುತ್ತಿದ್ರು ಎಂದು ತಿಳಿದುಬಂದಿದೆ. ಶಂಕಿತರು ಜಮಾತ್ ಇ ಇಸ್ಲಾಮಿ ಉಗ್ರ ‌ಸಂಘಟನೆಗೆ ಸೇರಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಇನ್ನೂ ಸಿಸಿಬಿ ಅಧಿಕಾರಿಗಳ ದಾಳಿಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ದಾಳಿ ವೇಳೆ ಸಿಕ್ಕಿದ್ದೇನು?

ಸಿಸಿಬಿ ಅಧಿಕಾರಿಗಳ ದಾಳಿಯಲ್ಲಿ ಉಗ್ರರ ಅಡಗಿದ್ದ ಮನೆಯಲ್ಲಿ 7 ನಾಡ ಪಿಸ್ತೂಲ್‌ಗಳು ಪತ್ತೆಯಾಗಿವೆ. ಜೊತೆಗೆ 42 ಗುಂಡುಗಳನ್ನ ಸಿಸಿಬಿ ವಶಕ್ಕೆ ಪಡೆದಿದೆ. ಅಲ್ಲದೇ 2 ಡ್ಯಾಗರ್ , 2 ವಾಕಿಟಾಕಿ, ಮೊಬೈಲ್‌ ಫೋನ್‌, ವಿವಿಧ ಕಂಪನಿಗಳ ಸಿಮ್‌ ಕಾರ್ಡ್‌ಗಳು, ಲ್ಯಾಪ್‌ಟಾಪ್ ಸೇರಿದಂತೆ ಸ್ಫೋಟಕ ವಸ್ತುಗಳನ್ನ ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.

ಈಗಾಗಲೇ ಎಲ್‌ಇಟಿಯ ಶಂಕಿತ ಉಗ್ರ ನಜೀರ್ ಜೈಲಿನಲ್ಲಿದ್ದು, ಈ ಬಂಧಿತ ಶಂಕಿತ ಉಗ್ರರು 2017ರಲ್ಲಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ದಾಗ ನಜೀರ್‌ ಪರಿಚಯವಾಗಿದೆ. ಈ ವೇಳೆ ನಜೀರ್ ಎಲ್ಲರ ಬ್ರೈನ್ ವಾಶ್ ಮಾಡಿದ್ದ. ಹೊರಗೆ ಬಂದ ಶಂಕಿತ ಉಗ್ರರು ಒಬ್ಬ ಡ್ರೈವರ್‌, ಒಬ್ಬ ಮೆಕ್ಯಾನಿಕ್‌ ಆಗಿ ಕೆಲಸ ಮಾಡ್ತಿದ್ರು ಅಂತಾ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಮಾಹಿತಿ ನೀಡಿದ್ದಾರೆ.

7 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಶಂಕಿತ ಉಗ್ರರು

ಶಂಕಿತ ಉಗ್ರರನ್ನ ಬಂಧಿಸಿದ ಬಳಿಕ ಸಿಸಿಬಿ ಪೊಲೀಸರು 50ನೇ ಸಿಸಿಹೆಚ್ ಕೋರ್ಟ್​ಗೆ ಹಾಜರುಪಡಿಸಿದ್ರು. ಈ ವೇಳೆ ಹೆಚ್ಚಿನ ವಿಚಾರಣೆಗೆ 15 ದಿನ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಕೇಳಿದ್ರು. ಸದ್ಯ ಐವರು ಶಂಕಿತ ಉಗ್ರರನ್ನ 7 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ಹೊರಡಿಸಿದೆ.

ಒಟ್ಟಾರೆ, ಶಾಂತಿಯ ತವರೂರಿನ ಮೇಲೆ ಉಗ್ರರ ಕರಿಛಾಯೆ ಬಿದ್ದಿದೆ. ರಾಜ್ಯದಲ್ಲಿ ನರರಕ್ಕಸರ ಜಾಲವೇ ಅಡಗಿ ಕೂತಿರೋ ಶಂಕೆ ವ್ಯಕ್ತವಾಗಿದೆ. ಇದೀಗ ಸಿಸಿಬಿ ವಿಚಾರಣೆಯಲ್ಲಿ ಬಂಧಿತ ಶಂಕಿತ ಉಗ್ರರು ಯಾವ ಸಂಘಟನೆಗೆ ಸೇರಿದವರು? ಇವರಿಗೆ ಪಾಕ್‌ ಲಿಂಕ್‌ ಇದ್ಯಾ? ಹೀಗೆ ಮತ್ತೇನೆಲ್ಲಾ ಸ್ಫೋಟಕ ಮಾಹಿತಿ ಹೊರಬೀಳುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರನ್ನೇ ಟಾರ್ಗೆಟ್​​ ಮಾಡಿದ ನರಹಂತಕರು; ಶಂಕಿತ ಉಗ್ರರಿಗಿದ್ಯಾ ಪಾಕಿಸ್ತಾನದ ಲಿಂಕ್​?

https://newsfirstlive.com/wp-content/uploads/2023/07/Terrorist-2.jpg

Load More