newsfirstkannada.com

BREAKING: ಸ್ಪೀಕರ್​ ಸ್ಥಾನಕ್ಕೆ ಅವಮಾನ; ಅಶ್ವತ್ಥ್ ನಾರಾಯಣ್ ಸೇರಿ ಹಲವು ಬಿಜೆಪಿ ಶಾಸಕರು ಅಮಾನತು

Share :

19-07-2023

    ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರ ಮೇಲೆ ಪೇಪರ್ ಎಸೆದು ಆಕ್ರೋಶ

    ಈ ಬಾರಿ ಅಧಿವೇಶನ ಮುಗಿಯೋವರೆಗೂ ಬಿಜೆಪಿ ಸದಸ್ಯರು ಅಮಾನತು

    ಅಧಿವೇಶನದಿಂದ ಬಿಜೆಪಿ ಶಾಸಕರ ಅಮಾನತುಗೊಳಿಸಿದ ಯು.ಟಿ. ಖಾದರ್

ಉಪಸಭಾಧ್ಯಕ್ಷರ ಮೇಲೆ ಪೇಪರ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದ ಆರೋಪದಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರು ಬಿಜೆಪಿ ಸದಸ್ಯರನ್ನ ಅಮಾನತುಗೊಳಿಸಿದ್ದಾರೆ. ಬಿಜೆಪಿ ಸದಸ್ಯರಾದ ಆರ್.ಅಶೋಕ್, ವೇದವ್ಯಾಸ್ ಕಾಮತ್, ಕೋಟ್ಯಾನ್, ಭರತ್ ಶೆಟ್ಟಿ, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ್, ದೀರಜ್ ಮುನಿರಾಜ್, ಅಶ್ವತ್ಥ ನಾರಾಯಣ್, ಯಶ್‌ಪಾಲ್ ಸುವರ್ಣ ಸಸ್ಪೆಂಡ್ ಆದ ಬಿಜೆಪಿ ಶಾಸಕರಾಗಿದ್ದಾರೆ.

ಇವತ್ತು ಬೆಳಗ್ಗೆ ಆರಂಭವಾದ ಸದನದಲ್ಲಿ ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ನಿನ್ನೆ ಬೆಂಗಳೂರಲ್ಲಿ ನಡೆದ ಕಾಂಗ್ರೆಸ್ ಮಿತ್ರಪಕ್ಷಗಳ ಸಭೆಯಲ್ಲಿ IAS ಅಧಿಕಾರಿಗಳನ್ನು ನಿಯೋಜಿಸಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಲಾಯ್ತು. ಇದೇ ವಿಚಾರಕ್ಕೆ ಗದ್ದಲ, ಗಲಾಟೆ ನಡೆದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಹೋರಾಟ ನಡೆಸಿದರು. ಈ ವೇಳೆ ವಿಧಾನಸಭೆಯಲ್ಲಿ ಡೆಪ್ಯೂಟಿ‌ ಸ್ಪೀಕರ್ ರುದ್ರಪ್ಪ ಲಮಾಣಿ‌ ಅವರ ಮೇಲೆ ಪೇಪರ್ ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಸದನದಲ್ಲಿ ಉಪಸಭಾಧ್ಯಕ್ಷರ ಮೇಲೆ ಬಿಜೆಪಿ ಸದಸ್ಯರು ಎಸೆದು ಪ್ರತಿಭಟನೆ ನಡೆಸಿದರೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ‘ಪೇಪರ್‌’ ಫೈಟ್ ನಡೆದಿದ್ದೇಕೆ?
ಕಾಂಗ್ರೆಸ್ ಸಭೆಗೆ IAS ಅಧಿಕಾರಿಗಳ ಬಳಕೆಗೆ ವಿರೋಧಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರು. ಗದ್ದಲ, ಗಲಾಟೆಯ ಕಲಾಪದ ಮಧ್ಯೆ ಊಟದ ಸಮಯವಾಗಿತ್ತು. ಡೆಪ್ಯೂಟಿ ಸ್ಪೀಕರ್ ಊಟಕ್ಕೆ ಬಿಡದ ಹಿನ್ನೆಲೆ ಬಿಜೆಪಿ ಸದಸ್ಯರು ಪೇಪರ್ ಹರಿದು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಮುಖದ ಮೇಲೆ ಪೇಪರ್ ಎಸೆದಿದ್ದಕ್ಕೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ನಾನೊಬ್ಬ ದಲಿತ. ನಾನು ದಲಿತ, ನನ್ನ ಮೇಲೆ ಈ ರೀತಿ ಮಾಡೋದು ಸರಿಯಲ್ಲ ಎಂದ ಉಪಸಭಾಧ್ಯಕ್ಷರು ಹೇಳಿದರು. ದಲಿತನ ಮೇಲೆ ಈ ರೀತಿ ಮಾಡ್ತಿರೋದು ಸರಿಯಲ್ಲ ಎಂದು ಹೇಳಿದರು. ಈ ಗಲಾಟೆಯ ಮಧ್ಯೆ ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ನಾಯಕರು ಪೇಪರ್ ಹರಿದು ಎಸೆದ ಸಂದರ್ಭದಲ್ಲಿ ಮಾರ್ಷಲ್‌ಗಳು ರಕ್ಷಣೆಗೆ ಬಂದಿಲ್ಲ. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಸಚಿವ ಭೈರತಿ ಸುರೇಶ್, ಮಾರ್ಷಲ್‌ಗಳನ್ನ ಸಸ್ಪೆಂಡ್ ಮಾಡಿ ಎಂದು ಒತ್ತಾಯಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಸ್ಪೀಕರ್​ ಸ್ಥಾನಕ್ಕೆ ಅವಮಾನ; ಅಶ್ವತ್ಥ್ ನಾರಾಯಣ್ ಸೇರಿ ಹಲವು ಬಿಜೆಪಿ ಶಾಸಕರು ಅಮಾನತು

https://newsfirstlive.com/wp-content/uploads/2023/07/Speaker-Khadar-1.jpg

Load More