Advertisment

ಅಕ್ರಮ ಸಂಬಂಧ ಶಂಕೆ; ದೊಣ್ಣೆಯಿಂದ ಹೊಡೆದು ಹೆಂಡತಿಯನ್ನು ಕೊಲೆಗೈದ ಪತಿ

author-image
AS Harshith
Updated On
ಅಕ್ರಮ ಸಂಬಂಧ ಶಂಕೆ; ದೊಣ್ಣೆಯಿಂದ ಹೊಡೆದು ಹೆಂಡತಿಯನ್ನು ಕೊಲೆಗೈದ ಪತಿ
Advertisment
  • ಆರು ಮಕ್ಕಳ ತಾಯಿಯನ್ನು ಕೊಲೆಗೈದ ಪತಿ
  • ಗಂಡನ ಕೈಯಾರೆ ಕೊಲೆಯಾದ 40 ವರ್ಷದ ಮಹಿಳೆ
  • ಮಲಗಿದ್ದಲ್ಲೇ ಹೆಂಡತಿಯನ್ನು ಮುಗಿಸಿದ ಪತಿ

ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಪತಿಯಿಂದಲೇ ಪತ್ನಿಯ ಕೊಲೆ ನಡೆದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮಮ್ಮ (40) ಪತಿಯಿಂದಲೇ ಕೊಲೆಯಾದ ಮಹಿಳೆ.

Advertisment

45 ವರ್ಷ ವಯಸ್ಸಿನ ಮಹದೇವಯ್ಯ ಪತ್ನಿಯನ್ನ ಕೊಲೆಗೈದ ಪತಿ. ದೊಣ್ಣೆಯಿಂದ ಲಕ್ಷ್ಮಮ್ಮನನ್ನು ಹೊಡೆದು ಕೊಂದಿದ್ದಾನೆ.

ಮಹದೇವಯ್ಯ ಮತ್ತು ಲಕ್ಷ್ಮಮ್ಮ ಪತಿ-ಪತ್ನಿಗೆ ಆರು ಜನ ಮಕ್ಕಳಿದ್ದರು. ಮಹದೇವಯ್ಯ ಆನೇಕಲ್​ನ ಸ್ಟ್ರೈಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಪತ್ನಿ ಲಕ್ಷ್ಮಮ್ಮ ಗಾರೆ ಕೆಲಸ ಮಾಡಿಕೊಂಡಿದ್ದಳು. ಆದರೆ ಮಹದೇವಯ್ಯಗೆ ಗಾರೆ ಕೆಲಸ ಮಾಡುವ ವ್ಯಕ್ತಿಯ ಜೊತೆ ಲಕ್ಷ್ಮಮ್ಮ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಹೊಂದಿದ್ದನು. ಇದೇ ವಿಚಾರಕ್ಕೆ ಹಲವು ಬಾರಿ ಲಕ್ಷ್ಮಮ್ಮ ಹಾಗೂ ಮಹದೇವಯ್ಯ ನಡುವೆ ಗಲಾಟೆ ಕೂಡ ನಡೆದಿತ್ತು.

ಗಂಡ -ಹೆಂಡತಿ ಜಗಳ ಇಡೀ ತಮ್ಮನಾಯಕನಹಳ್ಳಿ ಗ್ರಾಮದ ಜನಕ್ಕೆ ತಿಳಿದಿತ್ತು. ಜನರು ಅಕ್ರಮ ಸಂಬಂಧದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದಿದ್ದ ಮಹದೇವಯ್ಯ ಪತ್ನಿ ಲಕ್ಷ್ಮಮ್ಮ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಮನೆಯಲ್ಲಿ ಮಲಗಿದ್ದಾಗಲೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆನೇಕಲ್‌ ‌ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment