2ನೇ ಪತ್ನಿ ಮನೆಯಿಂದ ಬಿದ್ದು ಸಾವನ್ನಪ್ಪಿದ್ದ ಉದ್ಯಮಿ ಮಾರಾಂಜಿನಪ್ಪ
ತಡರಾತ್ರಿ 3 ಗಂಟೆ ಸುಮಾರಿಗೆ ಕಟ್ಟಡದ ಮೇಲಿಂದ ಬಿದ್ದಿರೋ ಶಂಕೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾರಾಂಜಿನಪ್ಪ ಕೊನೆಯುಸಿರು
ಬೆಂಗಳೂರು: ಕಟ್ಟಡದ ಮೇಲಿಂದ ಉದ್ಯಮಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ನಾಗರಬಾವಿ ಬಳಿ ನಡೆದಿದೆ. ಸಾವನ್ನಪ್ಪಿರೋ ಉದ್ಯಮಿಯನ್ನು 62 ವರ್ಷದ ಮಾರಾಂಜಿನಪ್ಪ ಎಂದು ಗುರುತಿಸಲಾಗಿದೆ. ಉದ್ಯಮಿ ಮಾರಾಂಜಿನಪ್ಪ ಅವರಿಗೆ ಎರಡನೇ ಮದುವೆಯಾಗಿದ್ದು, 2ನೇ ಪತ್ನಿ ಮನೆ ಮೇಲಿಂದ ಬಿದ್ದು ಸಾವನ್ನಪ್ಪಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಇಂದು ತಡರಾತ್ರಿ 3 ಗಂಟೆ ಸುಮಾರಿಗೆ ಮಾರಾಂಜಿನಪ್ಪ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಕಟ್ಟಡದಿಂದ ಬಿದ್ದ ಉದ್ಯಮಿಯನ್ನ ಆತನ ಎರಡನೇ ಪತ್ನಿಯೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾರಾಂಜಿನಪ್ಪ ಸಾವನ್ನಪ್ಪಿದ್ದಾರೆ.
ಉದ್ಯಮಿ ಮಾರಾಂಜಿನಪ್ಪ ಅವರು ಎರಡನೇ ಪತ್ನಿ ಮನೆಯಿಂದ ಬಿದ್ದು ಸಾವನ್ನಪ್ಪಿದ್ದು, ಮಾರಾಂಜಿನಪ್ಪ ಕುಟುಂಬಸ್ಥರು ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದ ಮೇಲಿಂದ ಬಿದ್ದಿರೋ ಮಾರಾಂಜಿನಪ್ಪ ಅವರ ಸಾವು ಅನುಮಾನಾಸ್ಪದ ರೀತಿಯಲ್ಲಿದೆ. ಎರಡನೇ ಪತ್ನಿ ಮೇಲೆ ಮೃತ ಮಾರಾಂಜಿನಪ್ಪ ಮೊದಲನೇ ಪತ್ನಿ ಕೊಲೆ ಆರೋಪ ಮಾಡಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ