newsfirstkannada.com

ಹೆಣ್ಣಿನ ಪಾಶಕ್ಕೆ ಸಿಲುಕಿ ₹35 ಲಕ್ಷ ಕಳ್ಕೊಂಡ ಸ್ವಾಮೀಜಿ; 4 ವರ್ಷ ಮುಚ್ಚಿಟ್ಟಿದ್ದ ರಹಸ್ಯ ಬಟಾಬಯಲು

Share :

06-06-2023

    ಗುರುತು ಪರಿಚಯ ಇಲ್ಲದ ಯುವತಿಯನ್ನ ನಂಬಿದ್ದು ಯಾಕೆ?

    ವಿಡಿಯೋ ಕಾಲಿಂಗ್‌ ನಂಬಿ ಮೋಸ ಹೋದ ಸ್ವಾಮೀಜಿ

    ಸ್ವಾಮೀಜಿಯಿಂದ ಬರೋಬ್ಬರಿ ₹35 ಲಕ್ಷ ಟ್ರಾನ್ಸ್‌ಫರ್‌

ಬೆಂಗಳೂರು: ಸರ್ವಸಂಗ ಪರಿತ್ಯಾಗಿ, ಖಾವಿಧಾರಿಗಳು ಹೆಣ್ಣಿನ ಪಾಶಕ್ಕೆ ಸಿಲುಕಿ ಫಜೀತಿಗೆ ಸಿಲುಕಿದ ಅನೇಕ ಘಟನೆಗಳು ನಡೆದಿವೆ. ಈ ಸಾಲಿಗೆ ಮತ್ತೊಂದು ಸ್ವಾಮೀಜಿಯ ಸೇರ್ಪಡೆಯಾಗಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನ ನಂಬಿದ ಈ ಸ್ವಾಮೀಜಿ ಬರೋಬ್ಬರಿ 35 ಲಕ್ಷ ರೂಪಾಯಿ ಟ್ರಾನ್ಸ್‌ಫರ್‌ ಮಾಡಿದ್ದಾರೆ. ಮೂರು, ನಾಲ್ಕು ವರ್ಷಗಳ ಕಾಲ ಮುಚ್ಚಿಟ್ಟಿದ್ದ ಮೋಸದಾಟ ಕೊನೆಗೂ ಬಟಾಬಯಲಾಗಿದೆ.

ಇದು ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮೋಸ ಹೋದ ಕಹಾನಿ. ಪೊಲೀಸ್ ಠಾಣೆ ಮೆಟ್ಟಿಲೇರಿದ್ರೂ ಈ ಪ್ರಕರಣ ರಹಸ್ಯವಾಗಿಯೇ ಉಳಿದಿತ್ತು. ಕಳೆದ ಒಂದು ತಿಂಗಳಿಂದ ಸ್ವಾಮೀಜಿ ಮೋಸ ಹೋದ ಸ್ಟೋರಿ ಎಲ್ಲೂ ಬಯಲಾಗಿರಲಿಲ್ಲ. ಇದೀಗ ಶಿವಾಚಾರ್ಯ ಸ್ವಾಮೀಜಿ ಅವರೇ ಸಾಕ್ಷ್ಯಾಧಾರಗಳ ಸಮೇತ ಪೊಲೀಸರಿಗೆ ದೂರು ನೀಡಿದ್ದು ಮೋಸ ಮಾಡಿದ ಯುವತಿಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಸ್ವಾಮೀಜಿ ದೂರಿನಲ್ಲೇನಿದೆ?
ಕಳೆದ 2020ರಲ್ಲಿ ಶಿವಾಚಾರ್ಯ ಸ್ವಾಮೀಜಿಗೆ ಫೇಸ್​ಬುಕ್​ನಲ್ಲಿ ಯುವತಿಯ ಪರಿಚಯವಾಗಿದೆ. ಆಕೆ ವರ್ಷ ಅನ್ನೋ ಹೆಸರಿನಿಂದ ಪರಿಚಯ ಮಾಡಿಕೊಂಡಿದ್ದಳು ಎನ್ನಲಾಗಿದೆ. ನನಗೆ ಆಧ್ಯಾತ್ಮದ ಬಗ್ಗೆ ಆಸಕ್ತಿ ಇದೆ ಅಂತಾ ಹೇಳಿದ್ದ ಯುವತಿ, ನಂತರ ಸ್ವಾಮೀಜಿಯಿಂದ ಮೊಬೈಲ್ ನಂಬರ್ ಎಕ್ಸ್​ಚೇಂಜ್ ಮಾಡಿಕೊಂಡಿದ್ದಾಳೆ. ತಿಂಗಳುಗಳ ಕಾಲ ವಿಡಿಯೋ ಕಾಲ್‌ ಮಾಡುತ್ತಿದ್ದ ವರ್ಷ ತನ್ನ ಮುಖವನ್ನೇ ತೋರಿಸಿಲ್ಲವಂತೆ. ನಾನು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡ್ತಿದ್ದೇನೆ. ಹಣದ ಸಹಾಯ ಮಾಡಿ ಅಂತಾ ವರ್ಷ ಸ್ವಾಮೀಜಿಗೆ ಕೇಳಿಕೊಂಡಿದ್ದಾಳೆ. ನನಗೆ ತಂದೆ, ತಾಯಿ ಯಾರೂ ಇಲ್ಲ ಅಂತಾ ವರ್ಷ ಹೇಳಿದ್ದನ್ನೇ ಸ್ವಾಮೀಜಿ ನಂಬಿದ್ದಾರೆ.

ಸ್ವಾಮೀಜಿಯಿಂದ ₹35 ಲಕ್ಷ ದೋಖಾ!
ಸ್ವಾಮೀಜಿಗೆ ಪರಿಚಯವಾದ ವರ್ಷ, ಮೊದಲಿಗೆ ಸ್ನೇಹಿತೆ ಮಂಜುಳಾ ಖಾತೆಗೆ ಹಣ ಹಾಕಿಸಿಕೊಂಡಿದ್ದಾಳೆ. ಚನ್ನವೀರ ಸ್ವಾಮೀಜಿ ಮೊದಲ ಬಾರಿ 2 ಲಕ್ಷ ರೂಪಾಯಿ ಹಣ ಹಾಕಿದ್ದಾರೆ. ನಂತರವೂ ಆಕೆ ಕೇಳಿದಾಗಲೆಲ್ಲಾ ಸ್ವಾಮೀಜಿ ಹಣ ಟ್ರಾನ್ಸ್‌ಫರ್ ಮಾಡಿದ್ದಾರೆ. ಆ ಯುವತಿಯು ತನ್ನ ಹೆಸರಿನಲ್ಲಿ ಎಕರೆಗಟ್ಟಲೆ ಜಮೀನಿದೆ. ಅದನ್ನ ಮಠದ ಹೆಸರಿಗೆ ಬರೆಯುತ್ತೇನೆ ಅಂತಾ ಸ್ವಾಮೀಜಿಗೆ ಹೇಳಿದ್ದಾಳಂತೆ. ಹಂತ ಹಂತವಾಗಿ 35 ಲಕ್ಷ ರೂಪಾಯಿಯನ್ನ ಹಾಕಿಸಿಕೊಂಡಿರುವ ವರ್ಷ ಮೋಸ ಮಾಡಿದ್ದಾಳೆ ಎಂದು ಶಿವಾಚಾರ್ಯ ಸ್ವಾಮೀಜಿ ದೂರಿನಲ್ಲಿ ಆರೋಪಿಸಿದ್ದಾರೆ.

ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಗುರುತು ಪರಿಚಯವಿಲ್ಲದ ಯುವತಿಯ ಮಾತು ಕೇಳಿ ಮೋಸ ಹೋಗಿರುವುದು ಮೇಲ್ನೋಟಕ್ಕೆ ಕಂಡು ಬರ್ತಿದೆ. ವಿಡಿಯೋ ಕಾಲಿಂಗ್​ನಲ್ಲೇ ಮಾತನಾಡಿದ್ದನ್ನೇ ನಂಬಿದ ಸ್ವಾಮೀಜಿ ಯುವತಿಯ ಖಾತೆಗೆ ಲಕ್ಷ, ಲಕ್ಷ ರೂಪಾಯಿ ಹಣ ಟ್ರಾನ್ಸ್‌ಫರ್ ಮಾಡಿದ್ದಾರೆ. ಯುವತಿಯ ಮೋಸದಾಟ ಗೊತ್ತಾದ ಮೇಲೆ ಸ್ವಾಮೀಜಿಯು ಹಣ ವರ್ಗಾಯಿಸಿದ ದಾಖಲೆ, ವಿಡಿಯೋ ಸಾಕ್ಷಿಗಳ ಸಮೇತ ದೂರು ಸಲ್ಲಿಸಿದ್ದಾರೆ. ಐವರ ವಿರುದ್ಧ ದೂರು ದಾಖಲಿಸಿರುವ ಚನ್ನವೀರ ಶಿವಾಚಾರ್ಯ ಶ್ರೀ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಈ ದೂರು ತಡವಾಗಿ ಬೆಳಕಿಗೆ ಬಂದಿದ್ದು ಹಲವು ಅನುಮಾನಗಳಿಗೂ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹೆಣ್ಣಿನ ಪಾಶಕ್ಕೆ ಸಿಲುಕಿ ₹35 ಲಕ್ಷ ಕಳ್ಕೊಂಡ ಸ್ವಾಮೀಜಿ; 4 ವರ್ಷ ಮುಚ್ಚಿಟ್ಟಿದ್ದ ರಹಸ್ಯ ಬಟಾಬಯಲು

https://newsfirstlive.com/wp-content/uploads/2023/06/Swamiji.jpg

Load More