ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ 1200 ಹೆಚ್ಚುವರಿ ಬಸ್ ಸೇವೆ
ನಾಲ್ಕರಿಂದ ಹೆಚ್ಚಾಗಿ ಟಿಕೇಟ್ ಬುಕ್ ಮಾಡಿದ್ರೆ ಶೇ.5ರಷ್ಟು ರಿಯಾಯಿತಿ
ಹೀಗೆ ಮಾಡಿದ್ರೆ ಶೇ.10ರಷ್ಟು ರಿಯಾಯಿತಿ ನೀಡುತ್ತೇವೆ ಎಂದ KSRTC
ಗೌರಿ ಗಣೇಶ ಹಬ್ಬದ ಪ್ರಯುಕ್ತ ಜನರು ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗಲು ಕೆಎಸ್ಆರ್ಟಿಸಿಯು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ 1,200 ಹೆಚ್ಚುವರಿ ವಿಶೇಷ ಬಸ್ ಸೇವೆ ಕಲ್ಪಿಸಿದೆ. ಸೆಪ್ಟೆಂಬರ್ 15 ಮತ್ತು 16ರಂದು ವಾರಾಂತ್ಯ ಹಾಗೂ ಸೆಪ್ಟೆಂಬರ್ 18ರಂದು ಗೌರಿ ಗಣೇಶ ಹಬ್ಬ ಇದ್ದು, ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದೆ.
ಕೆಎಸ್ಆರ್ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 15, 16 ಹಾಗೂ 17ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಇರಲಿದೆ. ಮೆಜೆಸ್ಟಿಕ್, ಸ್ಯಾಟಲೈಟ್, ಶಾಂತಿನಗರ ಬಸ್ ನಿಲ್ದಾಣಗಳಿಂದ ಹಲವು ಜಿಲ್ಲೆಗಳಿಗೆ, ಪ್ರಮುಖ ಸ್ಥಳಗಳಿಗೆ ತೆರಳಲು ಬಸ್ಗಳು ಕಾರ್ಯ ನಿರ್ವಹಿಸಲಿದೆ.
ಇ-ಟಿಕೇಟ್ ಮೂಲಕ ಬುಕ್ಕಿಂಗ್ ಓಪನ್ ಮಾಡಿರುವ ಕೆಎಸ್ಆರ್ಟಿಸಿ, ನಾಲ್ಕರಿಂದ ಹೆಚ್ಚಾಗಿ ಟಿಕೇಟ್ ಬುಕ್ ಮಾಡಿದ್ರೆ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಒಟ್ಟಿಗೆ ಬಂದು ಹೋಗುವ ಟಿಕೇಟ್ ಬುಕ್ಕಿಂಗ್ ಮಾಡಿದ್ರೆ ಶೇ.10ರಷ್ಟು ರಿಯಾಯ್ತಿ ನೀಡುತ್ತೇವೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ಮೂಲಕ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ