newsfirstkannada.com

ನಕಲಿ ಬ್ರಾಂಡ್ ಶೂ ಖರೀದಿಸಿ ಪೋಸ್ಟ್​ ಮಾಡಿದ್ದ ವ್ಯಕ್ತಿಗೆ ಹಿಂಗೆಲ್ಲ ಕೌಂಟರ್​.. ಸ್ವಿಗ್ಗಿ ಇನ್​​ಸ್ಟಾಮಾರ್ಟ್ ಕಾಲೆಳೆದ ರೀತಿಗೆ ನೆಟ್ಟಿಗರು ಫಿದಾ..!

Share :

29-07-2023

    Puma ಹೋಗಿ Upma ಆದ ಕಥೆ ಇದು..!

    ನೆಟ್ಟಿಗರ ಹೃದಯಗೆದ್ದ ಇನ್​ಸ್ಟಾಮಾರ್ಟ್..!

    ಜನ ನಿಮ್ಮನ್ನು ಹೀಗೆಲ್ಲ ಕಾಲೆಳೆಯುತ್ತಾರಾ..?

ಕೆಲವರಿಗೆ ತಮ್ಮ ಉಡುಗೆ, ತೊಡುಗೆಗಳ ಮೇಲೆ ವಿಶೇಷ ಕ್ರೇಜ್ ಇರುತ್ತದೆ. ಧರಿಸುವ ಬಟ್ಟೆ, ಹಾಕುವ ಶೂ ಸೇರಿದಂತೆ ಅನೇಕ ವಸ್ತುಗಳನ್ನು ಹೈ-ಎಂಡ್ ಬ್ರಾಂಡ್​​ಗಳನ್ನೇ ಬಳಸುತ್ತಾರೆ. ಇನ್ನು ಕೆಲವರಿಗೆ ಪ್ರತಿಷ್ಠಿತ ಕಂಪನಿಗಳ ವಸ್ತುಗಳು ಮರಿಚಿಕೆಯಷ್ಟೇ. ದುಬಾರಿ ಬೆಲೆಯ ವಸ್ತುಗಳನ್ನು ಕೊಂಡುಕೊಳ್ಳಲು ಅಸಾಧ್ಯದ ಮಾತು.

ಅಂತೆಯೇ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಒಂದು ಸಖತ್ ಚರ್ಚೆಯಲ್ಲಿದೆ. ಯಥರ್ಥ್​ ಎಂಬುವವರು ತಮ್ಮ ಟ್ವಿಟರ್​ನಲ್ಲಿ, ಪೋಸ್ಟ್​​ ಒಂದನ್ನು ಮಾಡಿರುತ್ತಾರೆ. ಗ್ರೇ ಕಲರ್​​ನ ಶೂ ಒಂದನ್ನು ಖರೀದಿಸಿದ ಫೋಟೋ ಹಾಕಿ, ‘ನಿನ್ನೆಯ ದಿನ ಲೋಕಲ್ ಮಾರ್ಕೆಟ್​​ನಲ್ಲಿ ಶೂ ಒಂದನ್ನು ಖರೀದಿಸಿದೆ. ಇದನ್ನು ಜನ ಒಪ್ಪಿಕೊಳ್ತಾರಾ ಎಂದು ಟ್ವೀಟ್ ಮಾಡಿದ್ದರು. ಅಂದ್ಹಾಗೆ ಶೋ ಮೇಲೆ Upma ಎಂದು ಬರೆಯಲಾಗಿದೆ. Puma ನಕಲಿ ಬ್ರಾಂಡ್ ಶೂ ಈ ​Upma ಆಗಿದೆ.

ಈ ಟ್ವೀಟ್​ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಇಂಪ್ರೆಸ್ ಮಾಡಿದೆ. ತುಂಬಾ ವೈರಲ್​ ಆಗ್ತಿದ್ದಂತೆ ವಿಚಾರ, ಸ್ವಿಗ್ಗಿ ಇನ್​ಸ್ಟಾಮಾರ್ಟ್​​ ಕಣ್ಣಿಗೆ ಬಿದ್ದಿದೆ. ಯಥರ್ಥ್​ ಅವರ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ಸ್ವಿಗ್ಗಿ, ‘ನೀವು ಅದನ್ನು ಖರೀದಿಸುವ ಮೊದಲು ನಮ್ಮ ಆ್ಯಪ್ ಅನ್ನು ಒಮ್ಮೆ​ ಚೆಕ್ ಮಾಡಬೇಕಿತ್ತು. ಯಾಕಂದರೆ ಇದು ತುಂಬಾ ದುಬಾರಿ ಅಲ್ಲ’ ಎಂದು ಬರೆದು ಎಂಟಿಆರ್​​ನ ರೆಡಿ ಮಿಕ್ಸ್​ ಉಪ್ಮಾ (UPMA) ಪಾಕೇಟ್ ಶೇರ್ ಮಾಡಿದೆ.

ಸ್ವಿಗ್ಗಿ ಮಾಡಿರುವ ಈ ರೀಟ್ವೀಟ್​ ಸಾಕಷ್ಟು ವೈರಲ್ ಆಗಿದೆ. ಓರ್ವ ಟ್ವಿಟರ್​ ಬಳಕೆದಾರ ಅದು ಬೆಳಗ್ಗಿನ ಉಪಹಾರಕ್ಕೂ ಕೆಲಸ ಮಾಡುತ್ತದೆ ಎಂದರೆ, ಮತ್ತೊಬ್ಬ ನೀವು ಸಾಂಬಾರ್ ಎಂಬ ಸಾಕ್ಸ್​ ಖರೀದಿಸಿದ್ರೆ ಮಾತ್ರ ನಿಮ್ಮನ್ನು ಜನ ಒಪ್ಪಿಕೊಳ್ತಾರೆ ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬ ಟ್ವೀಟ್ ಮಾಡಿ ದಕ್ಷಿಣ ಭಾರತದ ಜನ ನಿಮ್ಮನ್ನು ಒಪ್ಪಿಕೊಳ್ತಾರೆ. ಯಾಕಂದರೆ ಇದು UPMA ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಕಲಿ ಬ್ರಾಂಡ್ ಶೂ ಖರೀದಿಸಿ ಪೋಸ್ಟ್​ ಮಾಡಿದ್ದ ವ್ಯಕ್ತಿಗೆ ಹಿಂಗೆಲ್ಲ ಕೌಂಟರ್​.. ಸ್ವಿಗ್ಗಿ ಇನ್​​ಸ್ಟಾಮಾರ್ಟ್ ಕಾಲೆಳೆದ ರೀತಿಗೆ ನೆಟ್ಟಿಗರು ಫಿದಾ..!

https://newsfirstlive.com/wp-content/uploads/2023/07/UPMA.jpg

Load More