newsfirstkannada.com

Breaking News: ಫೈನಲ್​​ಗೆ ಲಗ್ಗೆಯಿಟ್ಟ ದಕ್ಷಿಣ ಆಫ್ರಿಕಾ.. ಟಿ20 ವಿಶ್ವಕಪ್​​ನಿಂದ ಹೊರಬಿದ್ದ ಅಫ್ಘಾನ್…!

Share :

Published June 27, 2024 at 8:24am

Update June 27, 2024 at 8:34am

  ಅಫ್ಘಾನಿಸ್ತಾನ್ ತಂಡ ಸೋಲಿಸಿ ಫೈನಲ್​​ಗೆ ಎಂಟ್ರಿ

  9 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ

  ಜೂನ್ 29 ರಂದು ಟಿ-20 ವಿಶ್ವಕಪ್ ಪಂದ್ಯ ನಡೆಯಲಿದೆ

ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿರುವ T20 ವರ್ಲ್ಡ್​ಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ಸೌತ್ ಆಫ್ರಿಕಾ ತಂಡ ಫೈನಲ್​ಗೆ ಪ್ರವೇಶ ನೀಡಿದೆ.​ ಐಡೆನ್ ಮಾರ್ಕ್ರಾಮ್ ಅವರು ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ದಕ್ಷಿಣ ಆಫ್ರಿಕ ತಂಡದ ಕ್ಯಾಪ್ಟನ್ ಆಗಿದ್ದಾರೆ.

ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದೇ ಅವರಿಗೆ ಮುಳುವಾಯಿತು ಎನ್ನಬಹುದು. ಏಕೆಂದರೆ ಓಪನರ್ ಆಗಿ ಬಂದ ಗುರ್ಬಾಜ್ ಹಾಗೂ ಜರ್ದಾನಿ ಉತ್ತಮ ಆರಂಭ ನೀಡಲಿಲ್ಲ. ಗುರ್ಬಾಜ್ ಡಕೌಟ್ ಆದರು, ಜರ್ದಾನಿ 2 ರನ್​ಗೆ ಔಟ್ ಆದರು. ಅಜ್ಮತುಲ್ಲಾ 10 ರನ್​ ಗಳಿಸಿದ್ದೆ ತಂಡದ ಇತರೆ ಆಟಗಾರರ ಪೈಕಿ ವೈಯಕ್ತಿಕ ಗರಿಷ್ಠ ರನ್​ ಆಗಿದೆ. ಉಳಿದ ಪ್ಲೇಯರ್ಸ್​ ಯಾರೂ 10 ರನ್​ಗಳ ಗಡಿ ಕೂಡ ದಾಟಲಿಲ್ಲ. ಹೀಗಾಗಿ ಅಫ್ಘಾನ್​ ಕೇವಲ 11.5 ಓವರ್​​ಗಳಲ್ಲಿ 56 ರನ್​ಗಳಿಗೆ ಆಲೌಟ್ ಆಯಿತು.

ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 5 ರನ್​ ಇರುವಾಗಲೇ ಡಿಕಾಕ್​ ವಿಕೆಟ್​ ಕಳೆದುಕೊಂಡಿತು. ಬಳಿಕ ನಿಧಾನವಾಗಿ ಬ್ಯಾಟಿಂಗ್ ಮಾಡಿದ ರೀಜಾ ಹೆಂಡ್ರಿಕ್ಸ್ 29, ಹಾಗೂ ಕ್ಯಾಪ್ಟನ್​ ಐಡೆನ್ ಮಾರ್ಕ್ರಾಮ್ 23 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 8.5 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 60 ಗಳಿಸಿ ಗೆಲುವು ಪಡೆಯಿತು.

ಈ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಬಾಂಗ್ಲಾದೇಶವನ್ನು ಸೋಲಿಸಿ ಸಂಭ್ರಮಿಸಿ ಫೈನಲ್​ ಕನಸು ಕಂಡಿದ್ದ ಅಫ್ಘಾನಿಸ್ತಾನ ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಇನ್ನು ಇಂದು ರಾತ್ರಿ 8 ಗಂಟೆಗೆ ನಡೆಯುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್​ನಲ್ಲಿ ಕಾದಾಟ ಮಾಡಲಿದ್ದಾರೆ.

ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ.. ಮಳೆಯಿಂದ ಪಂದ್ಯ ರದ್ದಾದರೆ ಫೈನಲ್​ಗೆ ಹೋಗೋದ್ಯಾರು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Breaking News: ಫೈನಲ್​​ಗೆ ಲಗ್ಗೆಯಿಟ್ಟ ದಕ್ಷಿಣ ಆಫ್ರಿಕಾ.. ಟಿ20 ವಿಶ್ವಕಪ್​​ನಿಂದ ಹೊರಬಿದ್ದ ಅಫ್ಘಾನ್…!

https://newsfirstlive.com/wp-content/uploads/2024/06/RSA.jpg

Load More