/newsfirstlive-kannada/media/post_attachments/wp-content/uploads/2024/11/timaya2.jpg)
ಕನ್ನಡ ಚಿತ್ರರಂಗದಿಂದ ಮತ್ತೊಂದು ಹಿರಿಯ ಚೇತನ ಅಗಲಿದೆ. ಹಿರಿಯ ನಟ ಟಿ ತಿಮ್ಮಯ್ಯ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸದ್ಯ ಕನ್ನಡ ಚಿತ್ರರಂಗ ಮತ್ತೊಬ್ಬ ಹಿರಿಯನನ್ನು ಕಳೆದುಕೊಂಡು ಕಣ್ಣೀರಿಡುತ್ತಿದೆ. ಟಿ ತಿಮ್ಮಯ್ಯನವರು ಡಾ ರಾಜ್​ಕುಮಾರ್ ಸೇರಿದಂತೆ ಕನ್ನಡದ ಹಲವು ಮೇರು ನಟರೊಂದಿಗೆ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು.
ಚಲಿಸುವ ಮೋಡಗಳು, ಜ್ವಾಲಾಮುಖಿ,ಭಾಗ್ಯದ ಲಕ್ಷ್ಮೀ ಬಾರಮ್ಮ, ಕಾಮನ ಬಿಲ್ಲು ಸೇರಿದಂತೆ ಹಲವು ಸಿನಿಮಾಗಳಲ್ಲಿ ಡಾ ರಾಜ್​ರೊಂದಿಗೆ ಟಿ ತಿಮ್ಮಯ್ಯ ಅಭಿನಯಿಸಿದ್ದರು. ಇನ್ನು ಬಂಧನ, ನಿಶ್ಕರ್ಷ, ಈ ಜೀವ ನಿನಗಾಗಿ, ಹಾಗೂ ಕರ್ಣ ಸಿನಿಮಾಗಳಲ್ಲಿ ಡಾ. ವಿಷ್ಣುವರ್ಧನ್​ರೊಂದಿಗೆ ಪೋಷಕ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಇದನ್ನೂ ಓದಿ:ಸ್ಯಾಂಡಲ್‌ವುಡ್‌ನ ಹಿರಿಯ ಪೋಷಕ ನಟ ಟಿ.ತಿಮ್ಮಯ್ಯ ಇನ್ನಿಲ್ಲ
ಬೆಳದಿಂಗಳ ಬಾಲೆ, ಬೆಂಕಿಯ ಬಲೆ ಸೇರಿ ಹಲವು ಸಿನಿಮಾಗಳಲ್ಲಿ ಇವರು ಹಿರಿಯ ನಟ ಅನಂತ್​ನಾಗ್ ಅವರೊಂದಿಗೂ ಕೂಡ ನಟಿಸಿದ್ದರು. ಸದ್ಯ ಕುಟುಂಬ ಹಾಗೂ ಅಪಾರ ಅಭಿಮಾನಿವರ್ಗವನ್ನು ಅಗಲಿರುವ ಈ ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಸಿಗಲೆಂದು ಕನ್ನಡ ಚಿತ್ರರಂಗದ ನಟ ನಟಿಯರು ಪ್ರಾರ್ಥಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us