newsfirstkannada.com

T20 ವಿಶ್ವಕಪ್​​ನಲ್ಲಿ ಮಹತ್ವದ ರೆಕಾರ್ಡ್.. ಕೇವಲ 19 ಎಸೆತದಲ್ಲೇ ಮ್ಯಾಚ್ ಮುಗಿಸಿದ ಇಂಗ್ಲೆಂಡ್

Share :

Published June 14, 2024 at 8:16pm

    0 ದಿಂದ 9 ರನ್​ ಒಳಗೆ ಔಟ್ ಆಗಿ ಕೆಟ್ಟ​ ದಾಖಲೆ ಬರೆದ ಪ್ಲೇಯರ್ಸ್

    ಇಬ್ಬರು ಡಕೌಟ್ ಆದರೆ, ಮೂವರು ಕೇವಲ 1 ರನ್​ಗೆ ಔಟ್ ಆದ್ರು

    T20 ವಿಶ್ವಕಪ್​ನಲ್ಲಿ ದಾಖಲೆ ಬರೆದ ಜೋಶ್ ಬಟ್ಲರ್ ಬಾಯ್ಸ್

ಅಮೆರಿಕ ಹಾಗೂ ವಿಂಡೀಸ್​​ನಲ್ಲಿ ನಡೆಯುತ್ತಿರುವ T20 ವಿಶ್ವಕಪ್​ನಲ್ಲಿ ಓಮನ್ ವಿರುದ್ಧ 8 ವಿಕೆಟ್​ಗಳಿಂದ ಇಂಗ್ಲೆಂಡ್​ ಭರ್ಜರಿ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಈ ಮೂಲಕ ಸೂಪರ್​- 8 ಕನಸನ್ನು ಬ್ರಿಟಿಷರು ಇನ್ನು ಜೀವಂತ ಉಳಿಸಿಕೊಂಡಿದ್ದಾರೆ. ವಿಶೇಷ ಎಂದರೆ ಕೇವಲ 19 ಬಾಲ್​ನಲ್ಲಿ 47 ರನ್​ಗಳ ಗುರಿ ಮುಟ್ಟಿ ಜೋಶ್ ಬಟ್ಲರ್ ಬಾಯ್ಸ್ ದಾಖಲೆ ಬರೆದಿದ್ದಾರೆ.

ಆಂಟಿಗುವಾದ ನಾರ್ತ್ ಸೌಂಡ್​ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ T20 ವಿಶ್ವಕಪ್​ ಪಂದ್ಯದಲ್ಲಿ ಇಂಗ್ಲೆಂಡ್​ ಟೀಮ್ ಟಾಸ್ ಗೆದ್ದುಕೊಂಡು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಎದುರಾಳಿ ಓಮನ್ ಟೀಮ್ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಬ್ಯಾಟಿಂಗ್ ಮಾಡಲು ಬಂದ ಓಮನ್​ ಬ್ಯಾಟ್ಸ್​ಮನ್ಸ್​ ಕೇವಲ 47 ರನ್​ಗೆ ಆಲೌಟ್​ ಆಗಿದ್ದಾರೆ. ಶೋಯೆಬ್ ಖಾನ್ 11 ರನ್​ ಬಿಟ್ಟರೇ ಉಳಿದೆಲ್ಲ ಆಟಗಾರರು 0 ದಿಂದ 9 ರನ್​ಗಳ ಒಳಗೆ ಔಟ್ ಆಗಿದ್ದಾರೆ. ಇದರಲ್ಲಿ ಕುತೂಹಲವೆಂದರೆ ಇಬ್ಬರು ಡಕೌಟ್ ಆದರೆ, ಮೂವರು ಕೇವಲ 1 ರನ್​ಗೆ ಔಟ್ ಆಗಿದ್ದಾರೆ. ಇಂಗ್ಲೆಂಡ್​ ತಂಡದ ಪರ ಆರ್ಚರ್, ಮಾರ್ಕ್​ವುಡ್ ತಲಾ 3 ವಿಕೆಟ್ ಕಬಳಿಸಿದರೆ, ಆದಿಲ್ ರಶೀದ್ 4 ವಿಕೆಟ್ ಕಿತ್ತು ಮಿಂಚಿದರು.

ಇನ್ನು ಓಮನ್ ನೀಡಿದ್ದ 47 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್​ 2 ವಿಕೆಟ್​ ಕಳೆದುಕೊಮಡು ಕೇವಲ 3 ಓವರ್​ನಲ್ಲೇ 50 ರನ್​ ಗಳಿಸಿ ಆಟ ಮುಗಿಸಿದೆ. ಇದರಿಂದ ಅತ್ಯಂತ ಕಡಿಮೆ ರನ್​ಗೆ ಆಲೌಟ್ ಮಾಡಿ ಗೆದ್ದಂತಹ 4ನೇ ತಂಡ ಎನ್ನುವ ಹೆಗ್ಗಳಿಕೆಗೆ ಇಂಗ್ಲೆಂಡ್ ಸಾಕ್ಷಿಯಾಯಿತು. 101 ಎಸೆತ ಇರುವಾಗಲೇ ಗೆಲುವು ಸಾಧಿಸಿದ ವಿಶ್ವದ ಏಕೈಕ ತಂಡ ಇನ್ನು ದಾಖಲೆಯನ್ನು ಇಂಗ್ಲೆಂಡ್​ ತನ್ನ ಹೆಸರಿಗೆ ಬರೆಯಿಸಿಕೊಂಡಿತು. ಈ ಮೂಲಕ ಇಂಗ್ಲೆಂಡ್ ಸೂಪರ್-8ಗೆ ಹೋಗುವ ಕನಸನ್ನು ಜೀವಂತ ಉಳಿಸಿಕೊಂಡಂತೆ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವಿಶ್ವಕಪ್​​ನಲ್ಲಿ ಮಹತ್ವದ ರೆಕಾರ್ಡ್.. ಕೇವಲ 19 ಎಸೆತದಲ್ಲೇ ಮ್ಯಾಚ್ ಮುಗಿಸಿದ ಇಂಗ್ಲೆಂಡ್

https://newsfirstlive.com/wp-content/uploads/2024/06/ENG_OMN_1.jpg

Load More