newsfirstkannada.com

IND vs USA: ಟೀಮ್​ ಇಂಡಿಯಾಗೆ ಚಮಕ್ ಕೊಡ್ತಾರಾ ಅನಿವಾಸಿ ಭಾರತೀಯರು.. ಹೇಗಿದೆ ಅಮೆರಿಕ ಟೀಮ್?

Share :

Published June 12, 2024 at 9:02am

  ಭಾರತೀಯರ ಹೊರತಾಗಿ ತಪ್ಪಿದಿಲ್ಲ ರೋಹಿತ್ ಶರ್ಮಾ​​ ಟೀಮ್​ಗೆ ಕಾಟ!

  ಕೆನಡಾ, ಪಾಕ್ ಎದುದು ವಿನ್, ಭಾರತೀಯ ಪ್ಲೇಯರ್ಸ್ ಮುಖ್ಯವಾಗಿದ್ರು

  ಟೀಮ್​​ ಇಂಡಿಯಾಕ್ಕೆ ಕನ್ನಡಿಗ ನೊಸ್ತುಶ್​ ಡೇಂಜರಸ್ ವೆಪನ್ ಆಗ್ತಾರಾ?

ಟಿ20 ವಿಶ್ವಕಪ್​ನಲ್ಲಿ ಇಂದು ನಡೀತಿರೋದು ಆತಿಥೇಯ ಯುಎಸ್​ಎ ವರ್ಸಸ್ ಟೀಮ್ ಇಂಡಿಯಾ ನಡುವಿನ ಪಂದ್ಯವಲ್ಲ. ಇದು ಇಂಡಿಯಾ ವರ್ಸಸ್​ ಇಂಡಿಯಾ ಬಿ ​ನಡುವಿನ ಕಾಳಗ​. ಇಬ್ಬರೂ ಇಲ್ಲಿ ಸೋಲಿಲ್ಲದ ಸರದಾರರು. ಹೀಗಾಗಿ ಅಜೇಯ ನಾಯಕರ ಮುಖಾಮುಖಿ, ಇಂದು ವಿಶ್ವ ಕ್ರಿಕೆಟ್​ನ ಗಮನ ಸೆಳೆದಿದೆ. ಭಾರತೀಯರೇ ಟೀಮ್ ಇಂಡಿಯಾಗೆ ಸವಾಲ್ ಆಗ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಇದನ್ನೂ ಓದಿ: ತೊಟ್ಟಿಲಲ್ಲಿ ಹಾಕಿದ್ದ ಕೈ ಮಣ್ಣಲ್ಲಿಯೂ ಹಾಕ್ತಿದೆ ಎಂದ ಹೆತ್ತ ತಾಯಿ.. ಕರುಳು ಹಿಂಡುವ ಕ್ಷಣಗಳ ಕಂಡು ಕಣ್ಣೀರಿಟ್ಟ ಜನ..

ಕೆಲ ಟೀಮ್​ಗಳಲ್ಲಿ ಒಂದಿಬ್ಬರು ವಿದೇಶಿ ಆಟಗಾರರು ಇದ್ದೇ ಇರ್ತಾರೆ. 2019ರ ಏಕದಿನ ವಿಶ್ವಕಪ್​ ಗೆದ್ದಿದ್ದ ಇಂಗ್ಲೆಂಡ್ ತಂಡವೂ ಇದರಿಂದ ಹೊರತಾಗಿರಲಿಲ್ಲ. ಕ್ಯಾಪ್ಟನ್ ಇಯಾನ್ ಮಾರ್ಗನ್ ಸಹಿತ ಬರೋಬ್ಬರಿ 7 ಆಟಗಾರರು, ಇಂಗ್ಲೆಂಡ್ ಮೂಲದವರೇ ಅಗಿರಲಿಲ್ಲ. ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ಭಾಗಿಯಾಗಿರುವ ಅಮೆರಿಕ, ಕೆನಡಾ, ಐರ್ಲೆಂಡ್ ತಂಡಗಳೂ ಹೊರತಾಗಿಲ್ಲ. ಈ ಬಾರಿಯ ವಿಶ್ವಕಪ್​ನಲ್ಲಿ ಅಮೆರಿಕ ತಂಡ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ. ಇದಕ್ಕೆಲ್ಲ ಕಾರಣ ಅಮೆರಿಕ ತಂಡದ ಪರ್ಫಾಮೆನ್ಸ್​ ಹಾಗೂ ತಂಡದಲ್ಲಿರುವ ನಾನ್​ ಅಮೆರಿಕನ್ ಪ್ಲೇಯರ್ಸ್.

ಇದನ್ನೂ ಓದಿ: ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಮಲಗಿದ್ದ ವೃದ್ಧನ ಮೇಲೆ ಕುಸಿದ ಮೇಲ್ಛಾವಣಿ.. ಇಂದು ಕೂಡ ವರುಣಾರ್ಭಟ ಫಿಕ್ಸ್..!

INDIA V/S USA ಅಲ್ಲ.. ಭಾರತ V/S ವರ್ಲ್ಡ್​​ XI..!

ಸದ್ಯ ಟಿ20 ವಿಶ್ವಕಪ್​ನಲ್ಲಿ ಅಮೆರಿಕ ಅದ್ಭುತ ಪ್ರದರ್ಶನ ನೀಡ್ತಿದೆ. ಆದ್ರೆ, ಇದಲ್ಲಕ್ಕಿಂತ ಮಿಗಿಲಾಗಿ ಅಮೆರಿಕ ಸದ್ದು ಮಾಡ್ತಿರೋದು ನಾನ್​​​ ಅಮೆರಿಕನ್ಸ್​ ಟೀಮ್ ಎಂಬ ಹಣೆಪಟ್ಟಿಯಿಂದ. ಇದಕ್ಕೆ ಕಾರಣ ತಂಡದಲ್ಲಿರುವ ಬಹುತೇಕ ಆಟಗಾರರು ಭಾರತ, ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಪಾಕಿಸ್ತಾನದವರೇ ಆಗಿದ್ದಾರೆ. ಇದೇ ಕಾರಣಕ್ಕೆ ಭಾರತ ಹಾಗೂ ಅಮೆರಿಕ ಕದನ ಎಂಬುವುದರ ಬದಲಾಗಿ ಭಾರತ V/S ವರ್ಲ್ಡ್​​-XI ನಡುವಿನ ಕಾದಾಟವಾಗಿ ಮಾರ್ಪಟ್ಟಿದೆ.

ಟೀಮ್ ಇಂಡಿಯಾ V/S ಇಂಡಿಯಾ ಬಿ ತಂಡದ ಫೈಟ್​​

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ, ಇಂದು ಎದುರಿಸುತ್ತಿರುವುದು ಅನಿವಾಸಿ ಭಾರತೀಯ ಆಟಗಾರರನ್ನ. ಭಾರತದಲ್ಲಿ ಅವಕಾಶ ಸಿಗದ ಎಷ್ಟೋ ಮಂದಿ, ಈಗ ಅಮೆರಿಕ ತಂಡದ ಬಿಗ್ ಮ್ಯಾಚ್ ವಿನ್ನರ್​ಗಳಾಗಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಕೆನಡಾ ಹಾಗೂ ಪಾಕ್ ಎದುರಿನ ಗೆಲುವಿನಲ್ಲಿ ಭಾರತೀಯ ಮೂಲದ ಆಟಗಾರರ ಆಟವೇ ಗೆಲುವಿಗೆ ಕ್ರೂಶಿಯಲ್ ಆಗಿತ್ತು. ಹೀಗಾಗಿ ಇಂದು ಹಿಟ್​ಮ್ಯಾನ್ ರೋಹಿತ್ ಪಡೆಗೆ ಅನಿವಾಸಿ ಭಾರತೀಯ ಆಟಗಾರರೇ ದೊಡ್ಡ ಸವಾಲಾಗಲಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮಾಡ್ತಿದ್ದ ಮೆಸೇಜ್ ಏನಾಗಿತ್ತು..? ಪವಿತ್ರಗೌಡ ತನಿಖೆಗೆ ಟ್ವಿಸ್ಟ್ ಕೊಡಲು ಮುಂದಾದ ಪೊಲೀಸ್..!

ಈ ಐವರನ್ನು ಮಟ್ಟ ಹಾಕದಿದ್ದರೆ ಅಪಾಯ ಗ್ಯಾರಂಟಿ!

ಟೀಮ್ ಇಂಡಿಯಾಗೆ ಮೇನ್ ಥ್ರೆಟ್, ಭಾರತೀಯ ಮೂಲದ ಆಟಗಾರರೇ ಆಗಿದ್ದಾರೆ. ಅದರಲ್ಲೂ ಪಾಕ್​ನಂಥಹ ಬೌಲರ್​ಗಳ ಎದುರು ಅರ್ಧಶತಕ ಸಿಡಿಸಿದ್ದ ನಾಯಕ ಮೊನಕ್ ಪಟೇಲ್, ಸೂಪರ್​ ಓವರ್​ನಲ್ಲಿ ಸೂಪರ್ ಸ್ಪೆಲ್ ಹಾಕಿದ್ದ ಸೌರಭ್ ನೇತ್ರವಾಲ್ಕರ್, ಟೀಮ್ ಇಂಡಿಯಾಗೂ ಥ್ರೆಟ್ ಆಗಬಲ್ಲರು. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಕಮಾಲ್ ಮಾಡಬಲ್ಲ ನಿತೀಶ್ ಕುಮಾರ್, ಎಡಗೈ ಸ್ಪಿನ್ನರ್ ಆಗಿರೋ ಹರ್ಮೀತ್ ಸಿಂಗ್, ಮೂಲತಃ ಕನ್ನಡಿಗ ನೊಸ್ತುಶ್ ಕೆಂಜಿಗೆ ಕೂಡ ಸಿಕ್ಕಾಪಟ್ಟೆ ಡೇಂಜರಸ್​ ವೆಪನ್​ಗಳಾಗಿದ್ದಾರೆ.

ಅಮೆರಿಕ ತಂಡದಲ್ಲಿ ಇದ್ದಾರೆ ಬಿಗ್ ಗೇಮ್ ಚೇಂಜರ್ಸ್​..!

ಅಮೆರಿಕ ತಂಡದಲ್ಲಿನ ಅರೋನ್ ಜೋನ್ಸ್​, ಆಂಡ್ರೀಸ್ ಗೌಸ್ ಮೋಸ್ಟ್​ ಡೇಂಜರಸ್ ಬ್ಯಾಟರ್​ಗಳಾಗಿದ್ದಾರೆ. ಸದ್ಯ ವಿಶ್ವಕಪ್​ನಲ್ಲಿ ಜೋನ್ಸ್, 196ರ ಸ್ಟ್ರೈಕ್​ರೇಟ್​ನಲ್ಲಿ 130 ರನ್ ಸಿಡಿಸಿದ್ರೆ, ಸೌತ್ ಆಫ್ರಿಕನ್ ಮೂಲದ ಆಂಡ್ರೀಸ್ ಗೌಸ್, 100 ರನ್ ದಾಖಲಿಸಿದ್ದಾರೆ. ಟಾಪ್-4 ರನ್ ಸ್ಕೋರರ್​ ಲಿಸ್ಟ್​ನಲ್ಲಿ ಕಾಣಿಸಿಕೊಳ್ಳುವ ಇವರಿಬ್ಬರನ್ನ ಕಟ್ಟಿ ಹಾಕಬೇಕಿದೆ. ಇಂದಿನ ಇಂಡೋ- ಅಮೆರಿಕ ನಡುವಿನ ಕಾದಾಟದಲ್ಲಿ ಒಂದ್ಕಡೆ ಭಾರತೀಯರು, ಶಕ್ತಿ ಪ್ರದರ್ಶನಕ್ಕೆ ಕಾದುಕುಳಿತಿದ್ದಾರೆ. ಮತ್ತೊಂದೆಡೆ ಭಾರತೀಯ ಮೂಲದವರು ಸೇರಿದಂತೆ ವಿವಿಧ ದೇಶಗಳ ಆಟಗಾರರು ಒಟ್ಟಾಗಿ ಕೌಂಟರ್​ ಅಟ್ಯಾಕ್​​ಗೆ ಸಜ್ಜಾಗಿ ನಿಂತಿದ್ದಾರೆ. ಇಂದಿನ ಟೀಮ್ ಇಂಡಿಯಾ ವರ್ಸಸ್​ ವರ್ಲ್ಡ್​ ಇಲೆವೆನ್ ವಾರ್​ನಲ್ಲಿ ಯಾರ ಕೈಮೇಲಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs USA: ಟೀಮ್​ ಇಂಡಿಯಾಗೆ ಚಮಕ್ ಕೊಡ್ತಾರಾ ಅನಿವಾಸಿ ಭಾರತೀಯರು.. ಹೇಗಿದೆ ಅಮೆರಿಕ ಟೀಮ್?

https://newsfirstlive.com/wp-content/uploads/2024/06/USA_CRICKET_REAM_1.jpg

Load More